Tharunagiri Gramabharati Trust ಮಕ್ಕಳಲ್ಲಿ ಸದ್ಗುಣಗಳ ವಿಕಾಸಕ್ಕೆ ಗಮನ ನೀಡಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ನೀಡುವಂತಾಗಬೇಕೆoದು ಲಯನ್ಸ್ ಸಂಸ್ಥೆಯ ಮುಖ್ಯಸ್ಥರಾದ ರಾಮನ್ ಕೆ. ಉಡುಪ ತಿಳಿಸಿದ್ದಾರೆ.
ಹೊಸನಗರದ, ಕಾರಣಗಿರಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ಶ್ರೀಸಿದ್ಧಿವಿನಾಯಕ ಸಭಾಭವನದಲ್ಲಿ ನಡೆದ 5 ದಿನಗಳ ಸದ್ಗುಣ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ, ನಿವೃತ್ತ ಪ್ರಾಚಾರ್ಯ ಕೆ. ಎಸ್. ನಳಿನಚಂದ್ರ ಮಾತನಾಡಿ ಮನೆಗಳಲ್ಲಿ ಇಂದು ಸಂಸ್ಕಾರ ನೀಡುವುದರಲ್ಲಿ ಕೊರತೆ ಇದೆ. ಸದ್ಗುಣಗಳು ಯಾವುದೆಂಬ ಬಗ್ಗೆ ಮಕ್ಕಳಿಗೆ ತಿಳಿಸಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂಥ ಶಿಬಿರಗಳು ಬಹಳ ಮುಖ್ಯ ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಹನಿಯರವಿ, ಮಕ್ಕಳಿಗೆ ಆಸ್ತಿ ಮಾಡಿರುವ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳುವುದಕ್ಕಿಂತ ಮಕ್ಕಳನ್ನೇ ಆಸ್ತಿಯಾಗಿ ಮಾಡುವುದರ ಕಡೆ ಗಮನಕೊಟ್ಟರೆ ದೇಶಕ್ಕೆ ಅವರೇ ಆಸ್ತಿಯಾಗುತ್ತಾರೆ. ಮಾನವ ಕೂಡ ಒಂದು ಸಂಪನ್ಮೂಲ ಎಂದು ಭಾವಿಸಿ ಸಂಸ್ಕಾರ, ಗುಣ ನಿರ್ಮಾಣ ಮಾಡಬೇಕೆಂದರು.
ಪೋಷಕರ ಪರವಾಗಿ ಮಾತನಾಡಿದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಕಾಲೇಜಿನ ಉಪನ್ಯಾಸಕಿ ರಮ್ಯಾ ವಿನಾಯಕ್, ಶ್ವೇತ ಉಮೇಶ, ವಿಮಲ ಇವರುಗಳು ದಿನವಿಡೀ ಮೊಬೈಲ್‌ನಲ್ಲಿ ಕಾಲಕಳೆಯುತ್ತಿದ್ದ ಮಕ್ಕಳಿಗೆ ಉಚಿತವಾಗಿ ಕೇವಲ ಐದೇ ದಿನದಲ್ಲಿ ಒಳ್ಳೆಯ ಸಂಸ್ಕಾರ ಕಲಿಸಿದ ಸಂಘಟಕರು ಮತ್ತು ಶಿಕ್ಷಕಿಯರನ್ನು ಅಭಿನಂದಿಸಿ ಬೇಸಿಗೆ ರಜೆಯಲ್ಲೂ ಇಂಥದೇ ಶಿಬಿರ ನಡೆಸಬೇಕೆಂದು ವಿನಂತಿಸಿದರು. ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಎನ್. ಖ. ನಾಗೇಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ಅಶ್ವಿನಿ ಪಂಡಿತ್ ನಿರೂಪಿಸಿ, ವಿನಾಯಕ ಪ್ರಭು ಸ್ವಾಗತಿಸಿ, ಗುರುಮೂರ್ತಿ ವಂದಿಸಿದರು.
ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ತಮ್ಮ ಅನುಭವ ತಿಳಿಸಿ ತಾವು ಕಲಿತ ಶಿಕ್ಷಣದ ಕೆಲವನ್ನು ಪ್ರದರ್ಶಿಸಿದರು.
ಐದು ದಿನದ ಶಿಬಿರದಲ್ಲಿ 60 ಮಕ್ಕಳು ಭಾಗವಹಿದ್ದರು. ಶಿಬಿರದಲ್ಲಿ ಪ್ರಾರ್ಥನೆ, ಶ್ಲೋಕಗಳು, ಸ್ತೋತ್ರಗಳು, ಭಜನೆ, ದೇಶಭಕ್ತಿಗೀತೆ, ನೃತ್ಯ, ಯೋಗ, ಕಥೆ, ದೇಶಿಯ ಆಟಗಳು, ಕಾಗದದ ಕಲೆ, ಕಸಗಳಿಂದ ಉತ್ತಮ ಅಲಂಕಾರಿಕ ವಸ್ತು ತಯಾರಿಕೆ, ರಂಗೋಲಿ, ಚಿತ್ರಕಲೆ ಮುಂತಾದ ವಿಷಯಗಳಲ್ಲಿ ಶಿಕ್ಷಣ ನೀಡಲಾಯಿತು.
ಶಿಬಿರದಲ್ಲಿ ಸಾಹಿತಿ ಡಾ. ಶಾಂತರಾಮ ಪ್ರಭು, ಹನಿಯ ರವಿ, ಶಿವಮೊಗ್ಗದ ಶ್ರೀಮತಿ ಪ್ರಮಿಳಾ ರಮೇಶ, ಶ್ರೀಮತಿ ವಿದ್ಯಾ, ಹನಿಯ ಗುರುಮೂರ್ತಿ, ರಮೇಶ ಹಲಸಿನಕಟ್ಟೆ, ನಳಿನಚಂದ್ರ, ವಿನಾಯಕ ಪ್ರಭು. ಸುಬ್ರಹ್ಮಣ್ಯ ಮುಂತಾದವರು ಅನೇಕ ವಿಷಯಗಳನ್ನು ಕಲಿಸಿದರು.
Tharunagiri Gramabharati Trust ಶಿಬಿರದ ಶಿಕ್ಷಕಿಯಾಗಿ ಅನೇಕ ವಿಷಯಗಳನ್ನು ಕಲಿಸಿದ ಸುವರ್ಧಿನೀ ನೃತ್ಯ ಶಾಲೆಯ ಶಿಕ್ಷಕಿ ಶ್ರೀಮತಿ ಶ್ವೇತಾ ವಿ. ಜೋಯ್ಸ್ ರನ್ನು ಅಭಿನಂದಿಸಲಾಯಿತು.