Nature Conservation Trust ಜಗತ್ತಿನ ಜೀವರಾಶಿಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ರಾಷ್ಟç ಗಳು ಅಂಣುಬಾಂಬ್‌ಗಳ ಬಳಕೆಯನ್ನು ನಿಷೇಧಿಸುವ ಮೂಲಕ ಹೆಚ್ಚು ಆದ್ಯತೆಯನ್ನು ಪರಿಸರಕ್ಕೆ ಪೂರಕವಾಗಿ ರುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಹೇಳಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು ಜೀವರಾಶಿಗಳನ್ನು ಉಳಿಸುವ ಸಲುವಾಗಿ ಅಣು ಬಾಂಬ್‌ಗಳು ನಿಷೇಧವಾಗಬೇಕು. ವಿಶ್ವದ ನಾಯಕರು ಶಾಂತಿಗೆ ದುಡಿಯುವ ಮುಖಾಂತರ ವಿಶ್ವ ಸಹೋದರತೆ, ಸ್ನೇಹವನ್ನು ಎಲ್ಲಾ ಜನಾಂಗಗಳಲ್ಲೂ ಬಿತ್ತುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಇಂದಿನ ತಾಪಮಾನ ಏರಿಕೆಯಿಂದ ನರಕವಾಗಿ ಪರಿಣಾಮಿಸುತ್ತಿರುವ ಭೂಮಿಯನ್ನು ನಿಭಾಯಿಸಲು ನಾಗ ರೀಕ ಜನಾಂಗ ಪರಿಸರಕ್ಕೆ ಒತ್ತು ನೀಡಿ ಸಹಕರಿಸಬೇಕು. ಮುಂದಿನ ಯಾವುದಾದರೂ ಅನಾಹುತಗಳನ್ನು ಸಂಭವಿ ಸುವ ಮೊದಲೇ ಎಲ್ಲಾ ರಾಷ್ಟçಗಳು ಜೊತೆಗೂಡಿ ವಿಶ್ವಮಟ್ಟದಲ್ಲಿ ಪರಿಸರ ಬೀಜ ಬಿತ್ತಿದಾಗ ಮಾತ್ರ ಜೀವ ಜಂತು ಗಳು ಉಳಿಯುವಿಕೆಗೆ ಸಾಧ್ಯ ಎಂದು ಕಿವಿಮಾತು ಹೇಳಿದ್ದಾರೆ.
ವಿಶ್ವದಲ್ಲಿ ಹಸಿರು ಕವಚ ಬೆಳೆದಲ್ಲಿ ಮಾತ್ರ ಭೂಮಿ ಉಳಿದಿತು, ಭೂಮಿ ಉಳಿದರೆ ನಾವು ಉಳಿದೇವು ಎಂಬ ಧ್ಯೇಯೋದ್ದೇಶದೊಂದಿಗೆ ಜಗತ್ತಿನ ರಾಷ್ಟçಗಳು ಮುನ್ನೆಡೆದರೆ ಮುಂದಿನ ಜನಾಂಗಕ್ಕೆ ಪರಿಸರಭರಿತ ಜಗತ್ತನ್ನು ಕೊಡುಗೆಯಾಗಿ ನೀಡಲು ಸಾಧ್ಯ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ದೀಪಾವಳಿ ಆಚರಣೆ ಎಲ್ಲೆಡೆ ಸಂಭ್ರಮಚರಿಸುತ್ತಿದ್ದು ಪರಿಸರಕ್ಕೆ ಪೂರಕವಾಗಿ ಆಚರಿಸು ವಂತೆ ಮಠ ಮಂದಿರಗಳು, ಇನ್ನಿತರೆ ಪೂಜಾ ಕ್ಷೇತ್ರಗಳು ತಿಳಿಸುವಂತಾಗಬೇಕು. ಅತಿಯಾದ ಪಟಾಕಿ ಯಿಂದ ವಾಯುಮಾಲಿನ್ಯವಾಗುವ ಜೊತೆಗೆ ಮಾನವ ಜನಾಂಗ ನಾಶ ದತ್ತ ಕೊಂಡೊಯ್ಯುವ ಮಾಹಿತಿಯನ್ನು ನಾಗರೀ ಕರಿಗೆ ಮುಟ್ಟಿಸಬೇಕು ಎಂದು ಮನವಿ ಮಾಡಿದ್ದಾರೆ.
Nature Conservation Trust ಸರ್ಕಾರಗಳು ಪಟಾಕಿ, ಸಿಡಿಮದ್ದುಗಳಿಂದಾಗುವ ಪರಿಣಾಮ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುವ ಜೊತೆಗೆ ಪರಿಸರ ಪೂರಕವಾಗಿ ದೀಪಾವಳಿ ಆಚರಿಸುವಂತೆ ಸೂಚನೆ ನೀಡಬೇಕು. ಆ ನಿಟ್ಟಿನಲ್ಲಿ ಪ್ರಾರ್ಥನಾ ಮಂದಿರಗಳು ದೀಪಾವಳಿಯನ್ನು ಪರಿಸರಸ್ನೇಹಿಯಾಗಿ ಆಚರಿಸಲು ಭಕ್ತಾಧಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಹೇಳಿದ್ದಾರೆ.