World Egg Day ವಿಶ್ವ ಮೊಟ್ಟೆ ದಿನಾಚರಣೆ ಅಂಗವಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಇಲಾಖೆ ಹಾಗೂ ಕರ್ನಾಟಕ ಸಹಕಾರ ಒಕ್ಕೂಟ ಮಹಾಮಂಡಳದ ವತಿಯಿಂದ ಹೆಬ್ಬಾಳದಲ್ಲಿರುವ ಕರ್ನಾಟಕ ಪಶುವೈದ್ಯಕೀಯ ಪರಿಷತ್‌ನಲ್ಲಿ ಆರೋಗ್ಯಕರ ಭವಿಷ್ಯಕ್ಕಾಗಿ ಮೊಟ್ಟೆಗಳು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
World Egg Day ಈ ಹಿಂದೆ ನಮ್ಮ ಹಿರಿಯರು ʼಹಿಟ್ಟು ತಿಂದವನು ಬೆಟ್ಟವನ್ನು ಕಿತ್ತಿ ಹಾಕುತ್ತಾನೆʼ. ʼಜೋಳವನ್ನು ತಿಂದವನು ತೋಳದಂತೆ ಆಗುತ್ತಾನೆʼ. ʼಮೊಟ್ಟೆಯನ್ನು ತಿಂದವನು ಜಟ್ಟಿಯಂತಾಗುತ್ತಾನೆʼ ಎಂದು ಹೇಳುತ್ತಿದ್ದರು.
ನಾನು ಪಿಯುಸಿ ಓದುತ್ತಿದ್ದ ಸಂದರ್ಭದ ರಜಾ ದಿನದಲ್ಲಿ 15 ದಿನ ಇದೇ ಪಶುವೈದ್ಯಕೀಯ ಕ್ಯಾಂಪಸ್‌ನಲ್ಲಿ ಪೌಲ್ಟ್ರಿ ತರಬೇತಿಯನ್ನು ಪಡೆದುಕೊಂಡಿದ್ದೆ. ಆಗ ತರಬೇತಿ ಪಡೆದ ಬಳಿಕ ನಮ್ಮ ಜಮೀನಿನಲ್ಲಿ ಕೋಳಿ ಫಾರಂ ಕೂಡ ಮಾಡಿದ್ದೆ. ನನ್ನ ಜೀವನದ ಮೊದಲ ವ್ಯಾಪಾರ, ವ್ಯವಹಾರವೂ ಕೋಳಿ ಫಾರಂ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದರು.
