M. B. Patil ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಸಚಿವರಾದ ಎಂ. ಬಿ.ಪಾಟೀಲ್ ಅವರು
ಅಮೆರಿಕ ಯಶಸ್ವಿ ಪ್ರವಾಸ ಕುರಿತು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದ ವಿದೇಶಿ ಹೂಡಿಕೆಯನ್ನು ಆಕರ್ಷಿಸಬೇಕೆಂಬ ಗುರಿಯೊಂದಿಗೆ 12 ದಿನಗಳ ಅಮೆರಿಕ ಪ್ರವಾಸ ಕೈಗೊಂಡಿದ್ದು ಯಶಸ್ವಿಯಾಗಿದೆ.
ಅಮೆರಿಕದ ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿವರೆಗಿನ ವಾಶಿಂಗ್ ಟನ್ ಡಿಸಿ, ಟೆಕ್ಸಾಸ್, ಕ್ಯಾಲಿಫೋರ್ನಿಯಾ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿನೀಡಿ ರೂ. 25,000 ಕೋಟಿಗೂ ಅಧಿಕ ಮೌಲ್ಯದ ಹೂಡಿಕೆಯನ್ನು ರಾಜ್ಯಕ್ಕೆ ಆಕರ್ಷಿಸಲಾಯಿತು ಎಂದು ಹೇಳಿದರು.
ಅಮೆರಿಕಾ ಪ್ರವಾಸದ ಮುಖ್ಯಾಂಶಗಳು:
36 ಸಭೆಗಳು, 27 ಮುಖಾ ಮುಖಿ ಮಾತುಕತೆ, 9 ಪರಸ್ಪರ ಚರ್ಚೆ,
ಹೂಡಿಕೆ ವಲಯಗಳು: ಎಲೆಕ್ಟ್ರಾನಿಕ್ಸ್ & ಸೆಮಿಕಂಡಕ್ಟರ್ ,ಏರೋ ಸ್ಪೇಸ್ ಮತ್ತು ರಕ್ಷಣೆ|ಆಟೊ/ಇವಿ, ಉತ್ಪಾದನೆ ಮತ್ತು ಮೆಡ್ ಟೆಕ್ ಸೇರಿದಂತೆ ಹಲವು ವಿಭಾಗಗಳ ಬಗ್ಗೆ ಮಾಹಿತಿ ನೀಡಿದರು.
M. B. Patil ಭೇಟಿ ಮಾಡಿದ ಕಂಪೆನಿಗಳು: ಅಪ್ಲೈಡ್ ಮೆಟಿರೀಯಲ್ಸ್, AMD ,ಜುನಿಪರ್ ,ಗ್ಲೋಬಲ್ ಫೌಂಡರಿ, ಬೋಯಿಂಗ್ , ಕ್ರಿಪ್ಟನ್ ,ಡೆಲ್ ಸೇರಿದಂತೆ ಅನೇಕ ಕಂಪೆನಿಗಳು.