Tuesday, December 16, 2025
Tuesday, December 16, 2025

Chikmagalur Urban Development Authority ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆಧ್ಯಕ್ಷರನ್ನಾಗಿ ದಲಿತರೊಬ್ಬರಿಗೆ ಅವಕಾಶ ನೀಡಲು ಒತ್ತಾಯ

Date:

Chikmagalur Urban Development Authority ಚಿಕ್ಕಮಗಳೂರು ನಗರಾಭಿವೃಧ್ದಿ ಪ್ರಾಧಿಕಾರ ಅಧ್ಯಕ್ಷ ಆಯ್ಕೆ ವಿಚಾರದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸುವ ಮೂಲಕ ಸೂಕ್ತ ವ್ಯಕ್ತಿಯನ್ನು ಆಯ್ಕೆಗೊಳಿಸಲು ಮುಂದಾಗಬೇಕು ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಂಯೋಜಕ ಹಿರೇಮಗಳೂರು ರಾಮಚಂದ್ರ ಒತ್ತಾಯಿಸಿದರು.

ಈ ಸಂಬಂಧ ಬೆಂಗಳೂರಿನ ಡಿ.ಕೆ.ಶಿ. ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಣೆ ಹಾಗೂ ಪಕ್ಷನಿಷ್ಟೆಯಿಂದ ಇರುವಂತಹ ವ್ಯಕ್ತಿ ಗಳನ್ನು ಸಿಡಿಎ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಳಿಸಬೇಕು ಎಂದು ಆಗ್ರಹಿಸಿದರು.

ಬಳಿಕ ಮಾತನಾಡಿದ ಹಿರೇಮಗಳೂರು ರಾಮಚಂದ್ರ, ಕಳೆದ ಮೂರು ದಶಕಗಳ ಹೆಚ್ಚು ಕಾಲ ಪಕ್ಷದಲ್ಲಿ ಹಲವಾರು ಜನಪರ ಹೋರಾಟಗಳಲ್ಲಿ ಭಾಗಿಯಾಗಿ ಸಾಮಾಜಿಕ ನ್ಯಾಯದ ವಿರುದ್ಧ ಹೋರಾಟ ಮಾಡಿಕೊಂಡು ಬರಲಾಗಿದೆ. ಪಕ್ಷ ಸೂಚಿಸಿದ ಸಭೆ, ಸಮಾರಂಭ ಹಾಗೂ ಇನ್ನಿತರ ಕಾರ್ಯಚಟುವಟಿಕೆಗಳಲ್ಲಿ ಬೂತ್‌ಮಟ್ಟದಿಂದ ಕಾರ್ಯನಿರ್ವಹಿಸಿದ ತಮಗೆ ಸಿಡಿಎ ಅಧ್ಯಕ್ಷ ಸ್ಥಾನ ಒದಗಿಸಿಕೊಡಬೇಕು ಎಂದು ತಿಳಿಸಿದ್ದಾರೆ.

ಈಗಾಗಲೇ ಚಿಕ್ಕಮಗಳೂರು ಸಿಡಿಎ ಅಧ್ಯಕ್ಷ ಸ್ಥಾನವನ್ನು ದಲಿತ ಸಮುದಾಯ ಹೊರತುಪಡಿಸಿ ಎಲ್ಲಾ ಜನಾಂ ಗಕ್ಕೂ ನೀಡಲಾಗಿದೆ. ಪಕ್ಷದಲ್ಲಿ ಈ ಹಿಂದಿನ ಸಮಯದಲ್ಲಿ ದಲಿತ ಸಮುದಾಯಕ್ಕೂ ಜಿಲ್ಲೆಯಲ್ಲಿ ಉನ್ನತ ಸ್ಥಾನ ಲಭಿಸಿಲ್ಲ. ಆ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದಿದ್ದರು. ಇದೀಗ ಸಿಡಿಎ ಅಧ್ಯಕ್ಷ ಸ್ಥಾನವನ್ನು ದಲಿತ ಸಮುದಾಯಕ್ಕೆ ನೀಡಿದ್ದಲ್ಲಿ ಜನಾಂಗವನ್ನು ಸಹಕರಿಸಿದಂತಾಗಿದೆ ಎಂದಿದ್ದಾರೆ.

Chikmagalur Urban Development Authority ಆ ನಿಟ್ಟಿನಲ್ಲಿ ರಾಜ್ಯಸರ್ಕಾರ ಇಂದಿನ ಅವಧಿಯಲ್ಲಾದರೂ ಜಿಲ್ಲೆಯಲ್ಲಿ ಸಿಡಿಎ ಅಧ್ಯಕ್ಷ ಸ್ಥಾನವನ್ನು ಪಕ್ಷದಲ್ಲಿ ಹಲವಾರು ವರ್ಷಗಳ ದುಡಿದಿರುವ ತಮಗೆ ಅವಕಾಶ ಮಾಡಿಕೊಟ್ಟಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಹಾಗೂ ಸಮು ದಾಯ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ತಿಳಿಸಿದ್ದಾರೆ.
ಬಳಿಕ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಬಿ.ಎಲ್.ಶಂಕರ್ ಹಾಗೂ ಶಾಸಕ ಹೆಚ್.ಡಿ.ತಮ್ಮಯ್ಯನವರ ಜೊತೆ ಚರ್ಚಿಸುವ ಮೂಲಕ ಸಿಡಿಎ ಸ್ಥಾನವನ್ನು ಸಮುದಾಯಕ್ಕೆ ಒದಗಿಸಲು ಶ್ರಮಿಸಲಾ ಗುವುದು ಎಂದು ಭರವಸೆ ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 16 & 17 ಶಿವಮೊಗ್ಗದ ರವೀಂದ್ರನಗರಕ್ಕೆ ವಿದ್ಯುತ್ ಸರಬರಾಜು ಇಲ್ಲ, ಮೆಸ್ಕಾಂ ಪ್ರಕಟಣೆ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯ ರವೀಂದ್ರ ನಗರದಲ್ಲಿ ಓವರ್...

Shamanur Shivashankarappa ವಿಧಾನ ಸಭಾ ಕಲಾಪ: ಅಗಲಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ

Shamanur Shivashankarappa ಎಲ್ಲ ರಾಜಕಾರಣಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಶಾಮನೂರು ಶಿವಶಂಕರಪ್ಪ...

Dr. G.S. Shivarudrappa ರಾಷ್ಟ್ರಕವಿ ಜಿ.ಎಸ್.ಎಸ್. ರಚಿತ ಕವನಗಳ ಆನ್ ಲೈನ್ ಗಾಯನ ಸ್ಪರ್ಧೆ

Dr. G.S. Shivarudrappa ಶಿವಮೊಗ್ಗದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್ . ಶಿವರುದ್ರಪ್ಪ...

ಸಿಗಂದೂರು ಸೇತುವೆ: ಆತ್ಮಹತ್ಯೆಗೆ ಯತ್ನಿಸಿದಾತನ ಜೀವವುಳಿಸಿದ ಇಂಜಿನಿಯರ್ ಮಾತಿನ ಕೌಶಲ

ಮೈಸೂರಿನ ವ್ಯಕ್ತಿಯೊಬ್ಬರು ಸಿಗಂದೂರು ಸೇತುವೆ ಮೇಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂಜಿನಿಯರ್ ಒಬ್ಬರ...