Department of Skill Development ಡೇ-ನಲ್ಮ್ ಯೋಜನೆ ಶಿವಮೊಗ್ಗ ಮಹಾನಗರ ಪಾಲಿಕೆ, ಶಿವಮೊಗ್ಗ, ಕೌಶಲ್ಯಾಭಿವೃದ್ಧಿ ಉದ್ದಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ಕಛೇರಿ, ಶಿವಮೊಗ್ಗ, ಇವರ ಸಹಯೋಗದಲ್ಲಿ ಪಿ.ಎಂ.ಸ್ವ-ನಿಧಿ ಕಿರು ಸಾಲ ಸೌಲಭ್ಯಕ್ಕೆ ದಿನಪತ್ರಿಕೆ ವಿತರಕರು ಮತ್ತು ಹಾಲು ವಿತರಕರಿಗೆ ಸಾಲ ಬಿಡುಗಡೆ ಮಾಡುವ ವಿಶೇಷ ಸಾಲ ಮೇಳಾ “ಮೇ ಬಿ ಡಿಜಿಟಲ್ ಮತ್ತು ಸ್ವ ನಿಧಿ ಸೇ ಸಮೃದ್ಧಿ ಕಾರ್ಯಕ್ರಮವವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.
Department of Skill Development ಶಾಸಕ ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರ್ ನಾಯ್ಕ್, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್, ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ವಿಜಯ್ ಸಾಯಿ .ಒ, ವ್ಯವಸ್ಥಾಪಕ ಅಮರನಾಥ್, ಕೆನರಾ ಬ್ಯಾಂಕ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ಶಿವಮೊಗ್ಗ, ಡೇ-ನಲ್ಮ್ ಇಲಾಖೆಯ ರಾಜ್ಯ ಅಭಿಯಾನ ವ್ಯವಸ್ಥಾಪಕ ಜಿತೇಂದ್ರ ಕುಮಾರ್ ಮತ್ತು ಟಿ.ವಿ.ಸಿ. ಸಮಿತಿ ಸದಸ್ಯರುಗಳು, ಡೇ-ನಲ್ಮ್ ಸಿಎಒ ಅನುಪಮ, ಟಿ.ಆರ್., ಸಿಒ ರತ್ನಾಕರ್ ಹಾಗೂ ಆರೀಫ್, ಸಿಬ್ಬಂಧಿಗಳು ಹಾಜರಿದ್ದರು. 65 ದಿನಪತ್ರಿಕೆ ವಿತರಕರಿಗೆ ಸಾಲ ವಿತರಣೆ, ಮತ್ತು ಕ್ಯೂಆರ್ ಕೋಡ್ ನೀಡಲಾಯಿತು.
