Forest Department ಅರಣ್ಯ ಇಲಾಖೆಯ ವೀಕ್ಷಕ ಹುದ್ದೆಯ ಆಯ್ಕೆಯಲ್ಲಿ ಹಸಲರ ಸಮುದಾಯವನ್ನು ಕಡೆಗಣಿಸಿದ್ದು ಕೂಡಲೇ ಈ ಲೋಪವನ್ನು ಸರಿಪಡಿಸಿ ಸಮುದಾಯಕ್ಕೆ ಅನುಕೂಲ ಕಲ್ಪಿಸಿಕೊಡ ಬೇಕು ಎಂದು ತಾಲ್ಲೂಕು ಆದಿವಾಸಿ ಹಸಲರ ಸಂಘವು ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಒತ್ತಾಯಿಸಿದರು.
ಚಿಕ್ಕಮಗಳೂರು ತಾಲ್ಲೂಕಿನ ಮಾಗುಂಡಿ ಗ್ರಾಮಸಭೆಯಲ್ಲಿ ಭಾಗವಹಿಸಿ ಶಾಸಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಎಸ್.ಗೋಪಾಲ್ ಹಸಲರ ಸಮುದಾಯ ನೂರಾರು ವರ್ಷಗಳಿಂದ ಅರಣ್ಯವನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಇದುವರೆಗೂ ಸರ್ಕಾರಿ ಹುದ್ದೆಗಳಿಂದ ವಂಚಿತರಾಗಿರುವ ಜೊತೆಗೆ ಅತ್ಯಂತ ಹಿಂದುಳಿದಿರುವ ಪ.ಪಂಗಡಗಳಲ್ಲಿ ಒಂದಾಗಿದೆ ಎಂದು ಹೇಳಿದರು.
Forest Department ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲಸರ ಸಮುದಾಯಕ್ಕೆ ಪೌಷ್ಟಿಕ ಆಹಾರ ಕೊಡುವ ಮೂಲಕ ಜನಾಂ ಗವನ್ನು ಮೇಲೆತ್ತಲು ಪ್ರಯತ್ನಿಸಿರುವುದು ಸಂತೋಷ ವಿಷಯ. ಆದರೆ ಅರಣ್ಯ ಇಲಾಖೆಯ ವೀಕ್ಷಕ ಹುದ್ದೆಗೆ ನೇಮಕಾತಿ ಅಧಿಸೂಚನೆ ಹೊರಡಿಸಿರುವುದರಲ್ಲಿ ಹಸಲರನ್ನು ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣ ಸಿ ರುವುದು ನೋವು ತಂದಿದೆ ಎಂದು ಹೇಳಿದರು.
ಇದರಿಂದ ಅರಣ್ಯದಲ್ಲೇ ಬದುಕು ಕಟ್ಟುಕೊಂಡಿರುವ ಜನಾಂಗದವರಿಗೆ ಕೊಡಲಿಪೆಟ್ಟು ಬಿದ್ದಾಂತಾಗಿದೆ. ಆದ್ದ ರಿಂದ ಶಾಸಕರು ವೀಕ್ಷಕರ ಹುದ್ದೆಯಲ್ಲಿ ಹಸಲರನ್ನು ಸಮುದಾಯವನ್ನು ವಿಶೇಷ ಮೀಸಲಾತಿಯಡಿಯಲ್ಲಿ ಸೇರ್ಪ ಡೆಗೊಳಿಸಿ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಹೋಬಳಿ ಅಧ್ಯಕ್ಷ ಬಿ.ಎಸ್.ಶ್ರೀಕಾಂತ್, ಮುಖಂಡರುಗಳಾದ ಸತೀಶ್ ಜಕ್ಕಣಕ್ಕಿ, ಸುರೇಶ್ ನವಗ್ರಾಮ, ಶ್ರೀಮತಿ ಅನುಪಮ, ಪ್ರವೀಣ್ ಬನ್ನೂರು, ನವೀನ್, ಬಿ.ಆರ್.ಸುಶಾಂತ್ ಶೆಟ್ಟಿಹಿತ್ಲು ಮತ್ತಿ ತರರು ಹಾಜರಿದ್ದರು.