Kuvempu Kalamandira ಸಾಮಾನ್ಯರಲ್ಲಿ ಅಸಾಮಾನ್ಯ ಮಹಿಳೆಯರು ತಳಮಟ್ಟದಿಂದಲೇ ಅವರವರ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ರಾಜ್ಯ ಹಾಗೂ ದೇಶಾದ್ಯಂತ ಹೆಸರು ಗಳಿಸುತ್ತಿ ರುವುದು ಹೆಮ್ಮೆಯ ಸಂಗತಿ ಎಂದು ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರಾದೇವಿ ಹೇಳಿದರು.
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ರಚಿತಾ ಮಹಿಳಾ ಸಮಾಜದ ೨೬ನೇ ವರ್ಷದ ಸಂಭ್ರಮಾಚರಣೆ, ಪುಸ್ತಕ, ನೈಸರ್ಗಿಕ ಸಾಬೂನು ಬಿಡುಗಡೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಸ್ತಕ ಬಿಡು ಗಡೆಗೊಳಿಸುವ ಮೂಲಕ ಭಾನುವಾರ ಅವರು ಮಾತನಾಡಿದರು.
ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಹಲವಾರು ಸಂಘ-ಸAಸ್ಥೆಗಳು ಕಾರ್ಯನಿರ್ವ ಹಿಸುತ್ತಿವೆ. ಆ ಸಾಲಿನಲ್ಲಿ ರಚಿತಾ ಮಹಿಳಾ ಸಮಾಜ ಕಳೆದ 25 ವರ್ಷಗಳನ್ನು ಪೂರೈಸಿ ದಾಪುಹಿಡುತ್ತಿರುವುದು ಸಂತೋಷದ ವಿಷಯ. ಮಹಿಳೆಯರು ಸಂಕಷ್ಟದ ವೇಳೆಯಲ್ಲಿ ರಚಿತಾ ಸಮಾಜ ಆಸಕ್ತಿಯಿರುವ ವಿಷಯಗಳಲ್ಲಿ ತರಬೇತಿ ನೀಡುವ ಮೂಲಕ ಮಹಿಳೆಯರಿಗೆ ದಾರಿ ತೋರಿಸುತ್ತಿದೆ ಎಂದು ತಿಳಿಸಿದರು.
ದೇಶದಲ್ಲಿ ವಿಜ್ಞಾನ, ಇಂಜಿನಿಯರ್, ವಕೀಲ, ರಾಜಕೀಯ ಹಾಗೂ ನ್ಯಾಯಾಧೀಶ ಸೇರಿದಂತೆ ಪ್ರತಿಯೊಂದು ರಂಗಗಳಲ್ಲಿ ಮಹಿಳೆಯರು ಛಾಪು ಮೂಡಿಸಿ ಸಾಧನೆ ಮಾಡಿದ್ದಾರೆ. ಅದಲ್ಲದೇ ಸಾಲುಮರದತಿಮ್ಮಕ್ಕ, ತುಳಸಿಗೌಡ ಸೇರಿದಂತೆ ಬಹುತೇಕರು ಜನಪರ ಸೇವೆ ಸಲ್ಲಿಸುವ ಮೂಲಕ ಪದ್ಮಭೂಷಣ ಪ್ರಶಸ್ತಿ ಪಡೆದುಕೊಂಡು ಉನ್ನತಕ್ಕೇರ ಲಾಗಿದೆ ಎಂದು ತಿಳಿಸಿದರು.
ಕೆಲವು ಮಹಿಳೆಯರು ಕೌಟುಂಬಿಕ ಸಮಸ್ಯೆಯಿಂದ ಬಳಲುವ ನೊಂದಿದ್ದಾರೆ. ಅಂತಹ ಮಹಿಳೆಯರು ದೃತಿ ಗೆಡದೇ ಸಣ್ಣಪುಟ್ಟ ಕೆಲಸಗಳನ್ನು ನಿಭಾಯಿಸಿಕೊಂಡು ಬಳಿಕ ದೊಡ್ಡಮಟ್ಟದ ಕಂಪನಿ ಪ್ರಾರಂಭಿಸುವ ಮೂಲಕ ಕೋಟಿಗಟ್ಟಲೇ ವ್ಯವಹಾರ ನಡೆಸುತ್ತಿರುವುದು ನಮ್ಮ ಮುಂದಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಧಮಕ್ಕಳ ಪಾಠಶಾಲೆಯ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ಕೌಟುಂಬಿಕ ಜೀವನದಲ್ಲಿ ನೊಂದು, ಬೆಂದಿರುವAತಹ ಮಹಿಳೆಯರಿಗೆ ರಚಿತಾ ಸಮಾಜ ಹಲವಾರು ವರ್ಷಗಳಿಂ ದ ಸ್ಪಂದಿಸುವ ಕಾರ್ಯಕ್ಕೆ ಕೈಹಾಕಿದೆ. ಇದರಿಂದ ಮುಂದಿನ ಅವರ ಜೀವನ ಮಗದೊಮ್ಮೆ ಉಜ್ವಲಿಸಲಿದೆ ಎಂದು ತಿಳಿಸಿದರು.
Kuvempu Kalamandira ವೇದ ವಿಜ್ಞಾನ ಚಿಂತಕ ಹೇಮಂತ್‌ಕುಮಾರ್ ಬರೆದಿರುವ ೬೪ ವಿದ್ಯೆಗಳನ್ನು ಒಳಗೊಂಡಿರುವ ಪುಸ್ತಕ ಅತ್ಯಂತ ಶ್ರೇಷ್ಟವಾಗಿದೆ. ಗೋಮೂತ್ರದಿಂದ ಹಲವಾರು ಉಪಯೋಗ ತಿಳಿಸುವ ಕಾರ್ಯಕ್ಕೆ ಪುಸ್ತಕದ ಮೂಲಕ ಹೊರತಂದಿದ್ದು. ಪ್ರತಿಯೊಬ್ಬರು ಇಂತಹ ಪುಸ್ತಕಗಳನ್ನು ಅಭ್ಯಾಸಿಸಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಚಿತಾ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ಕವಿತಾ ಗೋಪಾಲ್ ಕಳೆದ ೨೫ ವರ್ಷಗಳಿಂದ ಅನೇಕ ಏಳುಬೀಳುಗಳ ನಡುವೆ ಮಹಿಳಾ ಸಮಾಜವನ್ನು ನಿಭಾಯಿಸಿಕೊಂಡು ಬರಲಾಗಿದೆ. ಮಹಿಳೆಯರು ಸ್ವಾವಲಂಬಿ ಮಾಡುವ ದೃಷ್ಟಿಯಿಂದ ಹಲವಾರು ತರಬೇತಿ ನೀಡಿ ಆರ್ಥಿಕ, ಸಾಮಾಜಿಕವಾಗಿ ಮೇಲೆತ್ತುವ ಕೆಲಸಕ್ಕೆ ಮುಂದಾಗಿದೆ ಎಂದು ತಿಳಿಸಿದರು.
ಮಹಿಳಾ ಸಮಾಜದಿಂದ ಗೋಶಾಲೆ ಸ್ಥಾಪಿಸುವ ಸಲುವಾಗಿ ಜಾಗ ಒದಗಿಸಲು ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಸುಮಾರು ೫೦೦ಕ್ಕೂ ಹೆಚ್ಚು ತಳಿಯ ಗೋವುಗಳನ್ನು ಸಾಕುವ ಗುರಿ ಹೊಂದಿದ್ದು ಶಾಸಕರುಗಳು ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಗೋಸಾಕಾಣ ಕೆಗೆ ಅವಕಾಶ ಮಾಡಿಕೊಟ್ಟಲ್ಲಿ ಗೋವುಗಳಿಂದಾಗುವ ನೈಸರ್ಗಿಕ ಔಷಧಿಗಳನ್ನು ತಯಾರಿಕೆಗೆ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ರಚಿತಾ ಮಹಿಳಾ ಸಮಾಜವು ಹಲವಾರು ಮಹಿಳೆಯರನ್ನು ಸ್ವಾವಲಂಬಿ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಜೊತೆಗೆ ಗೋಸಾಕಾಣ ಕೆ ಸಂಬಂಧ ಮನವಿ ಸಲ್ಲಿಸಿದ್ದು ರಾಜ್ಯಸರ್ಕಾರದಿಂದ ದೊರೆಯುವಂತಹ ಸೌಲಭ್ಯವನ್ನು ಪ್ರಾಮಾಣ ಕವಾಗಿ ಒದಗಿಸುವ ಭರವಸೆ ನೀಡಿದರು.
ಇದೇ ವೇಳೆ ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದ 11ಮಂದಿಗೆ ಮಲೆನಾಡು ಮಾತೆ ಮತ್ತು ಮಾಣ ಕ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ವೇದಿಕೆಯಲ್ಲಿದ್ದ ಹಲವಾರು ಗಣ್ಯರು 64 ವಿದ್ಯೆಯನ್ನು ಒಳಗೊಂಡಿರುವ ಪುಸ್ತಕ ಹಾಗೂ ನೈಸರ್ಗಿಕವಾಗಿ ತಯಾರಿಸಿದ ಮೂರು ತರಹದ ಸಾಬೂಬು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಮಾಜಿ ಸದಸ್ಯೆ ಗಾಯತ್ರಿ ಶಾಂತೇ ಗೌಡ, ಆಶ್ರಯ ಆಸ್ಪತ್ರೆ ನಿರ್ದೇಶಕಿ ಡಾ|| ಶುಭ ವಿಜಯ್, ವೇದ ವಿಜ್ಞಾನ ಚಿಂತಕ ಜಿ.ಹೇಮಂತ್‌ಕುಮಾರ್, ಮಹಿಳಾ ಸಮಾಜದ ಕಾರ್ಯದರ್ಶಿ ಕಾಂತ್ಯ ಅಪ್ಪಯ್ಯ, ಖಜಾಂಚಿ ಮೋಹನಕುಮಾರಿ, ಸದಸ್ಯರುಗಳಾದ ಲೀಲಾ ವಿಶ್ವೇಶ್ವರ, ರಮ್ಯ ಮತ್ತಿತರರು ಹಾಜರಿದ್ದರು.