Sunday, December 7, 2025
Sunday, December 7, 2025

HD Tammaiah ಚಿಕ್ಕಮಗಳೂರಿನಲ್ಲಿ ಅಂಗನವಾಡಿ ನೂತನ ಕಟ್ಟಡಕ್ಕೆ ₹20 ಲಕ್ಷ ಮಂಜೂರು- ಶಾಸಕ ಎಚ್.ಡಿ.ತಮ್ಮಯ್ಯ

Date:

HD Tammaiah ಚಿಕ್ಕಮಗಳೂರು ನಗರದ ಮೂರನೇ ವಾರ್ಡಿನ ಕಲ್ಯಾಣನಗರದ ಬಡಾವಣೆಯಲ್ಲಿ ನೂತನ ಅಂಗನವಾಡಿ ಕೇಂದ್ರ ಹಾಗೂ ರಸ್ತೆ ಡಾಂಬರೀಕರಣಕ್ಕೆ ಶಾಸಕ ಹೆಚ್.ಡಿ.ತಮ್ಮಯ್ಯ ಭಾನುವಾರ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ಕಲ್ಯಾಣಗರದಲ್ಲಿ ಬಹಳ ಕಾಲದಿಂದಲೂ ಅಂಗನವಾಡಿ ಕೇಂದ್ರ ಸ್ಥಾಪಿಸುವ ಸಲುವಾಗಿ ಬೇಡಿಕೆಯಿದ್ದ ಹಿನ್ನೆಲೆಯಲ್ಲಿ ಇಂದು ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿ ಸಲಾಗಿದೆ. ಈ ಹಿಂದೆ ಬಾಡಿಗೆ ಕಟ್ಟಡದಲ್ಲಿ ಕೇಂದ್ರಕ್ಕೆ ಮುಂದಿನ ಕೆಲವು ತಿಂಗಳಲ್ಲಿ ನೂತನ ಕಟ್ಟಡ ನಿರ್ಮಿಸಿ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ಸುಮಾರು 20 ಲಕ್ಷ ವ್ಯಯಿಸಿ ಅಂಗನವಾಡಿ ನೂತನ ಕಟ್ಟಡ ಸ್ಥಾಪಿಸಲು ಅನುದಾನ ಬಿಡುಗಡೆಯಾಗಿದೆ. ಈ ಹಿಂದೆ ಸಮುದಾಯ ಭವನ ನಿರ್ಮಾಣಕ್ಕೂ ಕ್ರಮ ವಹಿಸಲಾಗಿದೆ. ಇದೀಗ ಪಕ್ಕದಲ್ಲೇ ಅಂಗನವಾಡಿ ಕೇಂದ್ರವಿರುವುದರಿದ ಉತ್ತಮವಾಗಿ ನಿಭಾಯಿಸಿಕೊಳ್ಳುವ ಜೊತೆಗೆ ಭವನದ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗಲಿದೆ ಎಂದು ಹೇಳಿದರು.

ಕಲ್ಯಾಣಗರದಲ್ಲಿ ಜಾತಿ, ಮತ, ಬೇಧಯಿಲ್ಲದೇ ಎಲ್ಲಾ ಜನಾಂಗದವರು ಸಹೋದರ ರೀತಿಯಲ್ಲಿ ವಾಸಿಸುತ್ತಿ ದ್ದಾರೆ. ಇದೀಗ ಅಂಗನವಾಡಿ ಕೇಂದ್ರ ಸ್ಥಾಪಿಸಿರುವುದು ಪ್ರತಿಯೊಂದು ಜನಾಂಗಕ್ಕೂ ಸಹಾಯವಾಗಲಿದೆ. ಕೇಂದ್ರ ದಿಂದ ಮಕ್ಕಳಿಗಲ್ಲದೇ ಈ ಭಾಗದ ಗರ್ಭೀಣಿ ಬಾಣಂತಿಯರಿಗೆ ಸರ್ಕಾರದ ಸವಲತ್ತು ಪಡೆದುಕೊಳ್ಳಲು ಅನುಕೂ ಲವಾಗಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ ಪ್ರತಿಯೊಂದು ಯೋಜನೆಯನ್ನು ಯಾವುದೇ ತಾರತಮ್ಯವೆಸಗದೇ ಎಲ್ಲಾ ಜನಾಂಗಕ್ಕೂ ಸರ್ವಸಮಾನವಾಗಿ ರೂಪಿಸಿದ್ದು ಆ ಯೋಜನೆಗಳ ಪ್ರತಿಫಲವೇ ಅಂಗನವಾಡಿ ಕಟ್ಟಡವಾಗಿದೆ. ಆ ನಿಟ್ಟಿನಲ್ಲಿ ನಿವಾಸಿಗಳು ಯೋಜನೆಗಳ ಸದ್ಬಳಕೆಯನ್ನು ಬಳಸಿಕೊಳ್ಳುವ ಮೂಲಕ ನೆಮ್ಮದಿ ಜೀವನ ನಡೆಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಕಲ್ಯಾಣನಗರದ ಯೋಗಮಂದಿರ ಸಮೀಪದಲ್ಲೇ ಸುಮಾರು 10.5ಲಕ್ಷ ರೂ.ವೆಚ್ಚದಲ್ಲಿ ರಸ್ತೆ ಡಾಂಬರೀ ಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಅದಲ್ಲದೇ ವಾರ್ಡಿನ ಬಹುತೇಕ ರಸ್ತೆ, ಚರಂಡಿಗಳು ಅತ್ಯಂತ ಗುಣ ಮಟ್ಟದಿಂದ ಕೂಡಿದ್ದು ಯಾವುದೇ ಸಮಸ್ಯೆಗಳು ಎದುರಾದಲ್ಲಿ ನಗರಸಭಾ ಸದಸ್ಯರು ಅಥವಾ ತಮ್ಮ ಗಮನಕ್ಕೆ ತಂದಲ್ಲಿ ಸಮಸ್ಯೆ ಬಗೆಹರಿಸಲು ಪ್ರಾಮಾಣ ಕ ಪ್ರಯತ್ನ ನಡೆಸಲಾಗುವುದು ಎಂದರು.

HD Tammaiah ನಗರಸಭಾ ಸದಸ್ಯೆ ಇಂದಿರಾ ಶಂಕರ್ ಮಾತನಾಡಿ ವಾರ್ಡಿನ ಯೋಗಮಂದಿರ ಸಮೀಪ ನಾಲ್ಕು ಎಕರೆ ಯಲ್ಲಿ ಪಾರ್ಕ್ ಜಾಗವಿದೆ. ಪಾರ್ಕ್ ಅಭಿವೃದ್ದಿ ಶಾಸಕರು ಸೂಕ್ತ ಅನುದಾನ ಬಿಡುಗಡೆಗೊಳಿಸುವ ಮೂಲಕ ಅಭಿ ವೃದ್ದಿಗೆ ಮುಂದಾದರೆ ವಾರ್ಡಿನ ವೃದ್ದರು, ಮಕ್ಕಳು, ಮಹಿಳೆಯರು ಸಂಜೆ ಹಾಗೂ ಮುಂಜಾನೆ ಸಮಯದಲ್ಲಿ ವ್ಯಾಯಾಮ ಹಾಗೂ ಇನ್ನಿತರೆ ಚಟುವಟಿಕೆಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತ ಬಿ.ಸಿ.ಬಸವರಾಜ್, ಸಿಡಿಪಿಓ ಅಧಿಕಾರಿ ಚರಣ್‌ರಾಜ್ ಕಂದಾಯ ನಿರೀಕ್ಷಕ ಶಿವಾನಂದ್, ಅಧಿಕಾರಿ ರಮೇಶ್ ಬಾಬು, ಸ್ಥಳೀಯರಾದ ಕೇಶವಮೂರ್ತಿ, ನಾಗೇಗೌಡ, ಚಂದನ್, ಚಂದ್ರಶೇಖರ್, ಮಣ ಕಂಠ, ಅರುಣ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...