Saturday, November 23, 2024
Saturday, November 23, 2024

List of Research Scientists ಶಿವಮೊಗ್ಗದ ಡಾ.ವರುಣ್ ಕುಮಾರ್ ಸ್ಟ್ಯಾನ್ ಫೋರ್ಡ್ ವಿವಿ ಯ ಸಂಶೋಧಕ ವಿಜ್ಞಾನಿಗಳ ಪಟ್ಟಿಗೆ ಸೇರ್ಪಡೆ

Date:

List of Research Scientists ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾ ನ್ ಫೋರ್ಡ್ ವಿಶ್ವವಿದ್ಯಾನಿಲಯವು ಬಿಡುಗಡೆ ಮಾಡಿರುವ ವಿಶ್ವದ ಟಾಪ್ ಶೇ.2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ.ಸಿ.ಪ್ರಸನ್ನಕುಮಾರ ಸೇರಿದಂತೆ ಅವರ ಸಂಶೋಧನಾ ವಿದ್ಯಾರ್ಥಿ ಶಿವಮೊಗ್ಗದ ಡಾ. ಆರ್ ಎಸ್ ವರುಣ್ ಕುಮಾರ್ ಅವರಿಗೆ ಸ್ಥಾನ ಲಭಿಸಿದೆ.

ಡಾ.ಆರ್ ಎಸ್ ವರುಣ್ ಕುಮಾರ್ ಶಿವಮೊಗ್ಗದ ಪತ್ರಕರ್ತರಾದ ಎನ್. ರವಿಕುಮಾರ್(ಟೆಲೆಕ್ಸ್),ಶ್ರೀಮತಿ ಶಶಿಕಲಾ ಅವರ ಪುತ್ರರಾಗಿದ್ದಾರೆ.

ದಾವಣಗೆರೆ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗ ಡಾ. ಬಿ ಸಿ ಪ್ರಸನ್ನಕುಮಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ಡಾ. ಆರ್.ಜೆ.ಪುನೀತ್ ಗೌಡ (45450), ಡಾ.ಆರ್.ನವೀನ್ ಕುಮಾರ್ ( 65146), ಡಾ. ಜೆ.ಕೆ.ಮಧುಕೇಶ್ (190634) ಇವರುಗಳು ಕೂಡ ಜಾಗತಿಕ ವಿಜ್ಞಾನಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಸ್ಟ್ಯಾನ್ ಫೋರ್ಡ್ ವಿವಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಹೆಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಈ ಮಾನದಂಡಗಳ ಪ್ರಕಾರ ವಿಜ್ಞಾನಿಗಳನ್ನು 22 ವೈಜ್ಞಾನಿಕ ಕ್ಷೇತ್ರಗಳು ಮತ್ತು 174 ಉಪ-ಕ್ಷೇತ್ರಗಳಾಗಿ ವರ್ಗೀಕರಿಸಲಾಗಿದೆ. ಇದರಲ್ಲಿ ದಾವಣಗೆರೆ ವಿವಿಯ ಗಣಿತಶಾಸ್ತ್ರ ವಿಭಾಗದ ಪ್ರೊ. ಬಿ.ಸಿ.ಪ್ರಸನ್ನಕುಮಾರ ರವರು ಈ ವರ್ಷದ ಶ್ರೇಯಾಂಕ ಪಡೆದಿದ್ದು, ಸತತ ಮೂರನೇ ಬಾರಿಗೆ ಈ ಸ್ಥಾನ ಪಡೆದಿದ್ದಾರೆ. ಇದರ ಜತೆಗೆ ವೃತ್ತಿ ಜೀವನದ ಸಾಧನೆಯಲ್ಲಿ ಶ್ರೇಯಾಂಕವನ್ನು ಪಡೆದಿರುವುದು ಗಮನರ್ಹವಾಗಿದೆ.

ಪ್ರೊ. ಬಿ.ಸಿ.ಪ್ರಸನ್ನ ಕುಮಾರ ಮಾತ್ರವಲ್ಲದೆ ಅವರ ಮಾರ್ಗದರ್ಶದಲ್ಲಿ ಸಂಶೋಧನೆಯನ್ನು ನಡೆಸುತ್ತಿರುವ ಡಾ. ಆರ್.ಜೆ.ಪುನೀತ್ ಗೌಡ, ಡಾ. ಆರ್.ನವೀನ್ ಕುಮಾರ್, ಡಾ. ಜೆ.ಕೆಮಧುಕೇಶ್, ಮತ್ತು ಡಾ.ಆರ್.ಎಸ್.ವರುಣ್ ಕುಮಾರ್ ಇವರುಗಳು “ಗಣಿತಶಾಸ್ತçದ ಶಾಖ ಮತ್ತು ಸಮೂಹ ವರ್ಗಾವಣೆ, ದ್ರವಚನ ಶಾಸ್ತ್ರ” ವಿಷಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿದ್ದು, ಮಾರ್ಗದರ್ಶರೊಡನೆಯೇ ವಿಜ್ಞಾನಿಗಳ ಪಟ್ಟಿಗೆ ಸೇರಿರುವುದು ಸ್ಪೂರ್ತಿದಾಯಕವಾಗಿದೆ.

ಅಮೇರಿಕಾದ ಪ್ರತಿಷ್ಠಿತ ಸ್ಟ್ಯನ್ ಫೋರ್ಡ್ ವಿಶ್ವವಿಜ್ಞಾನಿಗಳ ಪಟ್ಟಿಯಲ್ಲಿರುವ 5 ವಿಜ್ಞಾನಿಗಳು ಪ್ರಸುತ್ತ ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

List of Research Scientists ದಾವಣಗೆರೆಯ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿoಗ್ ಅಂಡ್ ಟೆಕ್ನಾಲಜಿಯಲ್ಲಿ ಡಾ. ಆರ್.ಜೆ.ಪುನೀತ್ ಗೌಡ, ಬೆಂಗಳೂರಿನ ಅಮೃತ ವಿಶ್ವ ವಿದ್ಯಾಪೀಠಂನ ಗಣಿತಶಾಸ್ತ್ರ ವಿಭಾಗದಲ್ಲಿ ಡಾ. ಆರ್.ನವೀನ್ ಕುಮಾರ್, ಡಾ.ಜೆ.ಕೆ.ಮಧುಕೇಶ್ ಮತ್ತು ಡಾ.ಆರ್.ಎಸ್. ವರುಣ್ ಕುಮಾರ್ ಇವರುಗಳು ಸಹಾಯಕ ಪ್ರಾಧ್ಯಾಪಕರುಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಹಿಂದೆಯೂ ಕೂಡ 2020 ಮತ್ತು 2021 ನೇ ಸಾಲಿನಲ್ಲಿ ಬಿಡುಗಡೆಯಾ ಪಟ್ಟಿಯಲ್ಲಿ ಪ್ರೊ. ಬಿ.ಸಿ.ಪ್ರಸನ್ನ ಕುಮಾರ, ಡಾ.ಆರ್.ಜೆ. ಪುನೀತ್ ಗೌಡ ಹಾಗೂ ಡಾ. ಆರ್.ನವೀನ್ ಕುಮಾರ್ ರವರುಗಳು ಸ್ಥಾನ ಪಡೆದಿದ್ದರು.

ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಡಾ.ಬಿ.ಸಿ.ಪ್ರಸನ್ನಕುಮಾರ, ಡಾ.ಆರ್.ಜೆ.ಪುನೀತ್ ಗೌಡ, ಡಾ. ಆರ್. ನವೀನ್ ಕುಮಾರ್, ಡಾ.ಜೆ.ಕೆ.ಮಧುಕೇಶ್ ಮತ್ತು ಡಾ.ಆರ್.ಎಸ್. ವರುಣ್ ಕುಮಾರ್ ಇವರುಗಳಿಗೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ಬಿ.ಡಿ. ಕುಂಬಾರ, ಬಿಐಟಿಇ ಪ್ರಾಂಶುಪಾಲ ಡಾ.ಎಚ್.ಬಿ. ಅರವಿಂದ, ದಾವಣಗೆರೆ ಬಿಐಇಟಿ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ, ಕುಲಪತಿ ಶ್ರೀ ಮಾತಾ ಅಮೃತಾನಂದಮಯಿ ದೇವಿ, ಸಂಶೋಧನಾ ಡೀನ್ ಕೆ.ವಿ.ನಾಗರಾಜ್ ಹಾಗೂ ಅಮೃತ ವಿಶ್ವವಿದ್ಯಾಪೀಠಂ ಮತ್ತು ಆಡಳಿತ ವರ್ಗ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...