Ragigudda Incident ಈದ್ ಮಿಲಾದ್ ಸಂದರ್ಭದಲ್ಲಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಿಜವಾಗಿಯೂ ನಡೆದಿದ್ದೇನು?
ವಸ್ತುಸ್ಥಿತಿ ತಿಳಿಯುವ ಸಲುವಾಗಿ ಇವತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಅಶ್ವಥ್ ನಾರಾಯಣ್, ಮಾಜಿ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ, ಶಾಸಕರಾದ ಶ್ರೀ ಚನ್ನಬಸಪ್ಪ ಮುಂತಾದವರೊಂದಿಗೆ ನಾನು ರಾಗಿಗುಡ್ಡಕ್ಕೆ ಹೋಗಿದ್ದೆ. ಅಲ್ಲಿ ದಾಳಿಗೀಡಾದ ಕುಟುಂಬಗಳು ತಮ್ಮ ಆತಂಕ-ಸಂಕಷ್ಟ ತೋಡಿಕೊಂಡರು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಹೇಳಿದ್ದಾರೆ.
ಅದಕ್ಕೂ ಮುನ್ನ ಮೆಗ್ಗಾನ್ ಆಸ್ಪತ್ರೆಗೂ ಭೇಟಿಕೊಟ್ಟು ಅಲ್ಲಿ ಗಾಯಗೊಂಡು ನೋವಿನಲ್ಲಿ ಮಲಗಿದ್ದವರನ್ನು ಮಾತಾಡಿಸಿಕೊಂಡು ಬಂದೆವು. ಅಲ್ಲಿಯೂ ದುಃಖ ಆತಂಕ ಮಡುಗಟ್ಟಿತ್ತು ಎಂದು ತಿಳಿಸಿದ್ದಾರೆ.
Ragigudda Incident ಒಟ್ಟಾರೆ, ಮೊನ್ನೆಯ ಗಲಭೆ ಜನರ ಮನಸ್ಸಿನಲ್ಲಿ ಭಯ ಹುಟ್ಟುವ ಹಾಗೆ ಮಾಡಿರುವುದೂ ಸುಳ್ಳಲ್ಲ, ಇದೊಂದು ಟಾರ್ಗೆಟೆಡ್ ಅಟ್ಯಾಕ್ ಅನ್ನುವುದೂ ಸುಳ್ಳಲ್ಲ ಅನ್ನಿಸಿತು. ವಸ್ತುಸ್ಥಿತಿ ಹೀಗಿರುವಾಗ ಸರ್ಕಾರ ಬೇರೆಯದೇ ರೀತಿಯಲ್ಲಿ ಪ್ರೇರೇಪಿಸುವ, ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ವಿನಾಕಾರಣ ಹಿಂದೂ ಹುಡುಗರ ಮೇಲೆ ಕೇಸುಗಳನ್ನು ಹಾಕುತ್ತಿದೆ. ಇದು ಖಂಡನೀಯ ಎಂದು ಸಂಸದ ಬಿವೈ ರಾಘವೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.