BJP Karnataka ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣದ ಪರಿಣಾಮವಾಗಿ ರಾಜ್ಯದಲ್ಲಿ ಮತಾಂಧರ ಹಾವಳಿ ಹೆಚ್ಚಾಗಿದೆ.ಶಿವಮೊಗ್ಗದಲ್ಲಿ ಧರ್ಮಾಂಧ ಟಿಪ್ಪು, ಔರಂಗಜೇಬ್ ಅವರನ್ನು ಮೆರೆಸಲಾಗುತ್ತಿದೆ. ಕೋಮು ಗಲಭೆಯನ್ನು ತಡೆಯಲು ಹೋದ ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕರಾದ ಸಿ. ಎನ್. ಅಶ್ವಥ್ ನಾರಾಯಣ ಅವರು ತ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಮಾಯಕ ಹಿಂದೂಗಳ ಮನೆಯ ಮೇಲೆ ದಾಳಿ ನಡೆಸುತ್ತಿರುವುದನ್ನು ನೋಡಿಯೂ ನೋಡದವರ ಹಾಗೆ ಕುಳಿತಿರುವ ಕಾಂಗ್ರೆಸ್ ಸರ್ಕಾರ ಜನತೆಗೆ ಸುರಕ್ಷತೆ ನೀಡಲು ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
BJP Karnataka ಗೃಹ ಸಚಿವರಿಗೆ ಇವು ಒಂದು ಸಣ್ಣ ಘಟನೆಯಂತೆ ಕಾಣುತ್ತದೆ, ಉಪಮುಖ್ಯಮಂತ್ರಿ ಅವರಿಗೆ ಭಯೋತ್ಪಾದಕರು ಸಹೋದರರಂತೆ ಕಾಣುತ್ತಾರೆ, ಮುಖ್ಯಮಂತ್ರಿ ಅವರು ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸುತ್ತಿದ್ದಾರೆ ಎಂದು ತಿಳಿಸಿದರು.
ಇಂತಹ ಹಿಂದೂ ವಿರೋಧಿ ಸರ್ಕಾರದಿಂದ “ಸರ್ವ ಜನಾಂಗದ ಶಾಂತಿಯ ತೋಟ”ವಾಗಿರುವ ಕರ್ನಾಟಕದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದರು