Thursday, October 3, 2024
Thursday, October 3, 2024

Department Of Indian Post ಭಾರತೀಯ ಅಂಚೆಯಿಂದ ಪತ್ರ ಲೇಖನ ಸ್ಪರ್ಧೆ

Date:

Department Of Indian Post ಭಾರತೀಯ ಅಂಚೆ ಇಲಾಖೆಯು “ನವ ಭಾರತದ ನಿರ್ಮಾಣಕ್ಕಾಗಿ ಡಿಜಿಟಲ್ ಇಂಡಿಯಾ”) ಎಂಬ ವಿಷಯದ ಕುರಿತು 18 ವರ್ಷದೊಳಗಿನ ಹಾಗೂ 18 ವರ್ಷದ ಮೇಲ್ಪಟ್ಟವರಿಗೆ ಪತ್ರ ಲೇಖನ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.

ಸ್ಪರ್ಧಾಳುಗಳು ಹಿಂದಿ, ಇಂಗ್ಲೀಷ್ ಅಥವಾ ಕನ್ನಡ ಭಾಷೆಯಲ್ಲಿ ಅಂತರ್ದೇಶೀಯ ಪತ್ರ ದಲ್ಲಿ ಐದು ನೂರು ಶಬ್ಧಗಳಿಗೆ ಮೀರದಂತೆ ಹಾಗೂ ಎ-4 ಶೀಟ್‌ನ ಕಾಗದದಲ್ಲಿ 1000 ಶಬ್ಧಗಳಿಗೆ ಮೀರದಂತೆ ಲೇಖನವನ್ನು ಕೈಬರಹದಲ್ಲಿ ಬರೆದು ಅಂಚೆ ಲಕೋಟೆಯಲ್ಲಿ ಅಕ್ಟೋಬರ್ 31ರೊಳಗೆ ಅಂಚೆ ಅಧೀಕ್ಷಕರು, ಶಿವಮೊಗ್ಗ ಅಂಚೆ ವಿಭಾಗ, ಶಿವಮೊಗ್ಗ ಇವರಿಗೆ ಕಳುಹಿಸುವುದು.

Department Of Indian Post ಲೇಖನವನ್ನು ಚೀಫ್ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ವೃತ್ತ, ಬೆಂಗಳೂರು-560001 ಇವರನ್ನು ಉದ್ದೇಶಿಸಿ ಬರೆಯಬೇಕಾಗಿದ್ದು, ಲಕೋಟೆಯ ಮೇಲ್ಗಡೆ “ಢಾಯೀ ಅಖರ್” ಎಂದು ನಮೂದಿಡಿ ಅದರೊಂದಿಗೆ 18 ವರ್ಷ ಮೇಲಿನವರು/ 18 ವರ್ಷ ಕೆಳಗಿನವರು ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ಬರೆದಿರಬೇಕು. ಈ ರೀತಿ ಕೈ ಬರಹದಲ್ಲಿ ಬರೆದ ಪತ್ರಗಳನ್ನು ಈ ಕಚೇರಿಗೆ ಸಮೀಪದ ಅಂಚೆ ಕಚೇರಿಯಲ್ಲಿ ಸಲ್ಲಿಸಬಹುದು.

ಪ್ರತಿ ವಿಭಾಗದಲ್ಲಿ ಅತ್ಯುತ್ತಮ ಮೂರು ಬರಹಗಳಿಗೆ ಬಹುಮಾನಗಳನ್ನು ದೇಶೀಯ ಮಟ್ಟದಲ್ಲಿ ಕ್ರಮವಾಗಿ ರೂ.50,000/- ರೂ.25,000/-, ರೂ. 10,000/- ಮತ್ತು ಕರ್ನಾಟಕ ವೃತ್ತ ಮಟ್ಟದಲ್ಲಿ ಕ್ರಮವಾಗಿ ರೂ. 25,000/-, ರೂ.10,000/-, ರೂ. 5,000/- ಘೋಷಿಸಲಾಗುವುದು.

ಭಾರತೀಯ ಅಂಚೆ ಇಲಾಖೆ ವತಿಯಿಂದ ನಡೆಯುವ ಈ ಪತ್ರಲೇಖನ ಸ್ಪರ್ಧೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವಂತೆ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಅಥವಾ ಮೊ.ಸಂ.: 9448291069 ಅನ್ನು ಸಂಪರ್ಕಿಸುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...