District Congress ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ನಡೆದಿರುವ ಅಹಿತಕರ ಘಟನೆಯು ದುರಾದೃಷ್ಷಕರವಾದುದ್ದು, ಇಂತಹ ಘಟನೆಗಳನ್ನು ಸರ್ವ ಜನಾಂಗಗಳನ್ನು ಸಮಾನವಾಗಿ ಕಾಣುವ ಕಾಂಗ್ರೇಸ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ತಿಳಿಸಿದ್ದಾರೆ.
ರಾಗಿಗುಡ್ಡದ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದ ಗೃಹ ಸಚಿವರಾದ ಜಿ. ಪರಮೇಶ್ವರ ಅವರು ಭೇಟಿ ನೀಡಬೇಕು ಮತ್ತು ರಾಜಿನಾಮೆ ನೀಡಬೇಕೆಂದು ಹೇಳುವ ನೈತಿಕತೆ ಬಿ.ಜೆ.ಪಿ.ಗಾಗಲಿ, ಬಿ.ಜೆ.ಪಿ. ನಾಯಕರಿಗಾಗಲಿ ಇಲ್ಲವೆಂದು ತಿರುಗೇಟು ನೀಡಿದ್ದಾರೆ.
District Congress ನಗರದಲ್ಲಿ ಈ ಬಾರಿ ನಡೆದ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪೋಲೀಸ್ ಇಲಾಖೆಗಳಿಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಸೂಚಿಸಿದ್ದರಿಂದ ಎರಡೂ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕಳೆದ ಒಂದು ತಿಂಗಳಿಗೂ ಮೊದಲೆ ಸರ್ವ ಜನಾಂಗಗಳ ಮುಖಂಡರ ಮತ್ತು ಸಾರ್ವಜನಿಕರ ಸಭೆಗಳನ್ನು ಏರ್ಪಡಿಸಿ ತಿಳುವಳಿಕೆಯನ್ನು ನೀಡಲಾಗಿತ್ತು.
ಗಣೇಶೋತ್ಸವ ಮೆರವಣಿಗೆಯ ಸಂದರ್ಭದಲ್ಲಿ ಒದೇ ಒಂದು ಸಣ್ಣ ಘಟನೆಯೂ ನಡೆಯದಂತೆ ನೋಡಿಕೊಂಡ ಕೀರ್ತಿ ಎರಡೂ ಇಲಾಖೆಗಳಿಗೆ ಸಲ್ಲಬೇಕೆಂದು ಅವರು ಹೇಳಿದ್ದಾರೆ.
ಹಿಂದಿನ ಪ್ರತಿ ವರ್ಷವೂ ಕೋಮು ಘರ್ಷಣೆಯಿಂದ ಶಿವಮೊಗ್ಗದ ಹೆಸರು ರಾಜ್ಯ ಮತ್ತು ದೇಶದಲ್ಲಿ ಕುಖ್ಯಾತಿಯಡೆಗೆ ಸಾಗಿದ್ದನ್ನು ಯಾರೂ ಮರೆಯುವಂತ್ತಿಲ್ಲ. ಈ ಬಾರಿ ನಡೆಯಲಿದ್ದ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಯಾವುದೆ ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ನಡೆಸುವ ಬಗ್ಗೆ ಎಲ್ಲಾ ವರ್ಗದವರೂ ತೀರ್ಮಾನಿಸಿದ್ದರು.
ಅದರಂತೆ ಗಣೇಶೋತ್ಸವ ಯಾವುದೆ ವಿಘ್ನವಿಲ್ಲದಂತೆ ನಡೆದಿದ್ದರ ಹಿಂದೆ ಎಲ್ಲಾ ಧರ್ಮದವರ ಪ್ರಯತ್ನ ಮತ್ತು ಸಹಕಾರವೂ ಇದೆ. ಇದರ ನಡುವೆ ಈ ಬಾರಿಯ ಗಣೇಶೋತ್ಸವ ನಿರ್ವಿಘ್ನವಾಗಿ ನಡೆದಿದ್ದನ್ನು ಸಹಿಸಲಾಗದ ಕೆಲವು ಕೋಮಿನ ಮತಿಗೇಡಿಗಳು ಕೊನೆಗೂ ಕೋಮು ಘರ್ಷಣೆ ಮಾಡಿ ಶಿವಮೊಗ್ಗ ಹೆಸರು ಮತ್ತೆ ಕುಖ್ಯಾತಿಯೊಂದಿಗೆ ಬೆಸೆಯುವಂತೆ ಮಾಡಿರುವುದು ಖಂಡನಾರ್ಹ. ಇಂತಹ ಘಟನೆಗೆ ಕಾರಣರಾದವರಿಗೆ ಕಾನೂನು ಏನೆಂದು ತೋರಿಸದೆ ಬಿಡುವುದಿಲ್ಲವೆಂದು ಮತ್ತು ಹಾನಿಗೊಳಗಾದವರ ಸಹಾಯಕ್ಕೆ ರಾಜ್ಯ ಸರ್ಕಾರ ಧಾವಿಸಲಿದೆ ಎಂದು ಅವರು ಹೇಳಿದ್ದಾರೆ.
ರಾಗಿಗುಡ್ಡದಲ್ಲಿ ಮತಿಗೇಡಿಗಳಿಂದ ನಡೆದಿರುವ ಘರ್ಷಣೆಗೆ ರಾಜ್ಯ ಸರ್ಕಾರದ ವೈಪಲ್ಯವೇ ಕಾರಣವೆಂದು ಘಟನೆಯ ಹಿನ್ನೆಲೆಯಲ್ಲಿ ಗೃಹ ಸಚಿವರು ಶಿವಮೊಗ್ಗಕ್ಕೆ ಭೇಟಿ ಕೋಡಬೇಕು. ಇಲ್ಲವೆ ಘಟನೆಯ ಹೊಣೆಹೊತ್ತು ಗೃಹ ಸಚಿವರಾದ ಜಿ. ಪರಮೇಶ್ವರ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿದ್ದು, ದೇಶದ ಪುಟ್ಟ ರಾಜ್ಯವಾದ ಮಣಿಪುರದಲ್ಲಿ ಇತ್ತೀಚೆಗೆ ನಡೆದ ಕೋಮು ಘರ್ಷಣೆಯಲ್ಲಿ ಹತ್ತಾರು ಸಾವಿರ ಜನ ಮನೆ ಮಠ ಕಳೆದುಕೊಂಡರು, ನೂರೈವತ್ತಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಾಗ ಮಣ ಪುರದ ಕಡೆಗೆ ತಿರುಗಿಯೂ ನೋಡದ ಬಿ.ಜೆ.ಪಿ. ನಾಯಕರು ಮತ್ತು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಬಸಪ್ಪ ಅಂತವರಿಗೆ ಗೃಹ ಸಚಿವರ ರಾಜಿನಾಮೆ ಕೇಳುವುದಕ್ಕೆ ಯಾವ ನೈತಿಕತೆ ಇದೆ ಎಂದು . ಜಿಲ್ಲಾ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಗುಡುಗಿದ್ದಾರೆ.