Gandhi Jayanti ಸಂಸದರಾದ ಬಿ.ವೈ.ರಾಘವೇಂದ್ರ ಅವರು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ಜಯಂತಿ ಪ್ರಯುಕ್ತ ತಮ್ಮ ಟ್ವಿಟರ್ ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯಂದು ಗೌರವಪೂರ್ವಕ ನಮನಗಳು.
ಗಾಂಧೀಜಿ ಆದರ್ಶಗಳಾದ ಅಹಿಂಸೆ, ಸ್ವದೇಶಿ ಅರ್ಥಿಕತೆ, ಗೋ ಸಂರಕ್ಷಣೆ, ಗ್ರಾಮ ಸ್ವರಾಜ್ಯ, ಹಳ್ಳಿಗಳ ಅಭಿವೃದ್ಧಿ, ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹ, ಹೀಗೆ ಎಲ್ಲವೂ ಈ ದೇಶದ ಅಭಿವೃದ್ಧಿಗೆ ಇಂದಿಗೂ ಅತ್ಯಂತ ಪೂರಕ.
ಇಂತಹ ಗಾಂಧೀಜಿ ಅವರ ಅನುಯಾಯಿಗಳು ನಾವು ಅನ್ನುವುದೇ ನಮಗೆಲ್ಲರಿಗೂ ಒಂದು ಹೆಮ್ಮೆಯ ಸಂಗತಿ. ನಮ್ಮೆಲ್ಲರಲ್ಲೂ ಗಾಂಧೀಜಿ ಸದಾ ನೆಲೆಸಿರಲಿ.
Gandhi Jayanti ಅವರು ಒಂದು ಕೆಲಸ ಹೇಳಿದರೆ ಸಾಕು,
ಇಡೀ ದೇಶದ ಜನ ಪ್ರೀತಿಯಿಂದ ಮಾಡುತ್ತಿದ್ದರು…
ಅವರು ಹೇಳಿದ್ದಕ್ಕೇ ವಾರದಲ್ಲೊಂದು ದಿನ ಉಪವಾಸ ಮಾಡುತ್ತಿದ್ದರು..
ಅವರು ಜೈ ಜವಾನ್ ಜೈ ಕಿಸಾನ್ ಅಂದಾಗ ಮನಸಾರೆ ರೈತರು-ಸೈನಿಕರನ್ನು ಆರಾಧಿಸಿದ್ದರು..
ನಿಜವಾದ ಜನನಾಯಕ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ನಮ್ಮ ಪುಣ್ಯ ದಿನ. ಭಕ್ತಿ ನಮನಗಳು ಎಂದು ಗೌರವ ಅರ್ಪಿಸಿದ್ದಾರೆ.