Shivamogga Hindu Mahasabha Ganapathi ಶಿವಮೊಗ್ಗ ನಗರದಲ್ಲಿ ನಡೆದ ಹಿಂದೂ ಸಂಘಟನಾ ಮಹಾಮಂಡಳಿ ಪ್ರತಿಷ್ಠಾಪಿಸಿದ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ಅತ್ಯಂತ ವೈಭಯುತವಾಗಿ ನಡೆದು ಶ್ರದ್ಧಾಪೂರ್ವಕವಾಗಿ ಗಣಪತಿಯ ಪ್ರತಿಮೆಯನ್ನ ತುಂಗಾನದಿಯಲ್ಲಿ ಉದ್ವಾಸನೆ ಮಾಡಲಾಯಿತು.
ಇಡೀ ಶಿವಮೊಗ್ಗ ನಗರವೇ ಕೇಸರಿಮಯವಾಗಿ ಕಂಗೊಳಿಸುತ್ತಿತ್ತು. ಶಿವಮೊಗ್ಗದ ಟೀ ಸೀನಪ್ಪ ಶೆಟ್ಟಿ ( ಗೋಪಿ ಸರ್ಕಲ್) ವೃತ್ತವು ಜನಸಾಗರದಿಂದ ತುಂಬಿ ತುಳುಕುತ್ತಿತ್ತು.
ಕಳೆದ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಹೆಚ್ಚಿನ ಸಂಖ್ಯೆಯ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಗೋಪಿ ಸರ್ಕಲ್ ನಲ್ಲಿ ಡಿಜೆ ವ್ಯವಸ್ಥೆ ವಯಸ್ಸಿನ ಮಿತಿ ಇಲ್ಲದೆ ಜನರು ಕುಣಿದು ಕುಪ್ಪಳಿಸಿದರು. ಜೈ ಶ್ರೀ ರಾಮ್, ಗಣಪತಿ ಬಪ್ಪ ಮೋರಿಯ, ಜೈ ಗಣೇಶ ಹೀಗೆ ಅನೇಕ ಘೋಷಣೆಗಳು ಮೊಳಗಿದವು.
ಯುವಕ ಯುವತಿಯರು ಕೇಸರಿ ಶಾಲುಗಳನ್ನ ತೊಟ್ಟು ಡಿಜೆ ಹಾಡಿಗೆ ಹೆಜ್ಜೆ ಹಾಕಿದರು.
Shivamogga Hindu Mahasabha Ganapathi ಉತ್ಸವದ ಭದ್ರತೆಗೆ ಖಾಕಿ ಸರ್ಪಗಾವಲಾಗಿತ್ತು. ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಪ್ರಮುಖ ಸ್ಥಳಗಳಲ್ಲಿ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿತ್ತು. ಉತ್ಸವದ ಭದ್ರತೆಗೆ 5 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 40 ಪೊಲೀಸ್ ನಿರೀಕ್ಷಕರು, 2500 ಎ ಎಸ್ ಐ, ನೂರು ವಿಡಿಯೋ ಕ್ಯಾಮೆರಾ ಗಳು ಹಾಗೂ ಎಂಟು ಡ್ರೋನ್ ಕ್ಯಾಮೆರಾ ಗಳನ್ನು ಸಾರ್ವಜನಿಕರ ಭದ್ರತೆಗೆಂದು ಈ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.