Uttaradi Math ಪ್ರತಿಯೊಬ್ಬರೂ ದಾನವನ್ನು ಮಾಡಲೇಬೇಕು. ಅಕ್ಕಪಕ್ಕದವರ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಹೊಳೆಹೊನ್ನುರಿನಲ್ಲಿ ಬುಧವಾರ ಸಂಜೆ ಇಲ್ಲಿನ ಶ್ರೀ ಸತ್ಯಧರ್ಮ ಮಠದಲ್ಲಿ ನಡೆಯುತ್ತಿರುವ 28ನೇ ಚಾತುರ್ಮಾಸ್ಯದಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಅವರು ಪ್ರವಚನ ನೀಡಿದರು.
ಇಡೀ ಊರಿನ ಯೋಗಕ್ಷೇಮವನ್ನು ನೋಡುವ ಅಗತ್ಯ ಇಲ್ಲ. ಅದನ್ನು ರಾಜನಾದವನು ನೋಡಿಕೊಳ್ಳುತ್ತಾನೆ. ನಾವುಗಳು ನಮ್ಮ ಅಕ್ಕಪಕ್ಕದ ಜನರ ಯೋಗಕ್ಷೇಮ ನೋಡಲೇಬೇಕು. ಅವರ ಹಸಿವೆಯನ್ನು ನಾವು ಅರ್ಥಮಾಡಿಕೊಳ್ಳಲೇಬೇಕು. ಶಾಸ್ತçವೇ ಇದನ್ನು ಹೇಳಿದೆ ಎಂದರು.
ಮುಷ್ಟಿ ಅಕ್ಕಿ ಪ್ರತಿದಿನ ತೆಗೆದಿಡಿ :
ಪ್ರತಿದಿನ ಒಂದು ಮುಷ್ಟಿ ಅಕ್ಕಿಯನ್ನು ತೆಗೆದಿಡಿ. ಅದನ್ನು ಯೋಗ್ಯರು, ಸಜ್ಜನರು, ಅರ್ಹರಾದವರಿಗೆ ಕೊನೆಗೆ ಹಂಚಿ. ಇದರಿಂದ ನೀವು ನಿತ್ಯವೂ ದಾನ ಮಾಡಿದ ಫಲವೂ ಬರುತ್ತದೆ. ಜೊತೆಗೆ ಕಷ್ಟದಲ್ಲಿ ಇದ್ದವರ ಯೋಗಕ್ಷೇಮವನ್ನೂ ನೀವು ನೋಡಿಕೊಂಡ0ತಾಗುತ್ತದೆ ಎಂದರು.
ಗೀತೆಯಲ್ಲಿ, ವೇದಗಳಲ್ಲಿ, ಶ್ರೀಮದಾಚಾರ್ಯರು ಎಲ್ಲರೂ ದಾನದ ಮಹತ್ವ ಹೇಳಿದ್ದಾರೆ. ಯಾರು ತಾನು ದುಡಿದದ್ದನ್ನು ತಾನು ಮಾತ್ರ ತಿನ್ನುತ್ತಾನೆಯೋ, ಯಾರಿಗೂ ಕೊಡದೆ ತಿನ್ನುತ್ತಾನೆಯೋ ಅವನು ಪಾಪ ಮಾಡಿದಂತೆಯೇ ಸರಿ. ಅದಕ್ಕಾಗಿಯೇ ಅತಿಥಿ ಅಭ್ಯಾಗತರಿಗೆ ಅಷ್ಟು ಮಹತ್ವವನ್ನು ಶಾಸ್ತ್ರ ಹೇಳಿದೆ ಎಂದರು.
ಶ್ರೀ ಸತ್ಯಧರ್ಮ ತೀರ್ಥರ ಪಾದುಕಾರಾಧನೆಯ ನಿಮಿತ್ತ ಶ್ರೀ ಸತ್ಯಾತ್ಮ ತೀರ್ಥರಿಗೆ ಶ್ರೀ ಸತ್ಯಧರ್ಮರ ಶೇಷವಸ್ತ್ರವನ್ನು ಸಮರ್ಪಿಸಲಾಯಿತು.
ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಸುಬ್ಬಣ್ಣಾಚಾರ್ಯ ನವರತ್ನ, ಶ್ರೀನಿವಾಸಾಚಾರ್ಯ ನವರತ್ನ, ಪುರುಷೋತ್ತಮಾಚಾರ್ಯ ನವರತ್ನ, ರಘೂತ್ತಮಾಚಾರ್ಯ ಸಂಡೂರು, ಬಾಳಗಾರು ಜಯತೀರ್ಥಾಚಾರ್ಯ, ಕೃಷ್ಣಾಚಾರ್ಯ ರಾಯಚೂರು, ಪ್ರಕಾಶಾಚಾರ್ಯ, ಅನಿಲ್ ರಾಮಧ್ಯಾನಿ, ಗುರುರಾಜ್ ಕಟ್ಟಿ, ವಾದಿರಾಜ ಸಿ.ಪಿ. ಮೊದಲಾದವರಿದ್ದರು.ಪ್ರತಿಯೊಬ್ಬರೂ ದಾನವನ್ನು ಮಾಡಲೇಬೇಕು. ಅಕ್ಕಪಕ್ಕದವರ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಾದ್ದು ಎಲ್ಲರ ಕರ್ತವ್ಯ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಹೊಳೆಹೊನ್ನೂರಿನಲ್ಲಿ ಬುಧವಾರ ಸಂಜೆ ಇಲ್ಲಿನ ಶ್ರೀ ಸತ್ಯಧರ್ಮ ಮಠದಲ್ಲಿ ನಡೆಯುತ್ತಿರುವ 28ನೇ ಚಾತುರ್ಮಾಸ್ಯದಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಅವರು ಪ್ರವಚನ ನೀಡಿದರು.
ಇಡೀ ಊರಿನ ಯೋಗಕ್ಷೇಮವನ್ನು ನೋಡುವ ಅಗತ್ಯ ಇಲ್ಲ. ಅದನ್ನು ರಾಜನಾದವನು ನೋಡಿಕೊಳ್ಳುತ್ತಾನೆ. ನಾವುಗಳು ನಮ್ಮ ಅಕ್ಕಪಕ್ಕದ ಜನರ ಯೋಗಕ್ಷೇಮ ನೋಡಲೇಬೇಕು. ಅವರ ಹಸಿವೆಯನ್ನು ನಾವು ಅರ್ಥಮಾಡಿಕೊಳ್ಳಲೇಬೇಕು. ಶಾಸ್ತçವೇ ಇದನ್ನು ಹೇಳಿದೆ ಎಂದರು.
ಮುಷ್ಟಿ ಅಕ್ಕಿ ಪ್ರತಿದಿನ ತೆಗೆದಿಡಿ :
ಪ್ರತಿದಿನ ಒಂದು ಮುಷ್ಟಿ ಅಕ್ಕಿಯನ್ನು ತೆಗೆದಿಡಿ. ಅದನ್ನು ಯೋಗ್ಯರು, ಸಜ್ಜನರು, ಅರ್ಹರಾದವರಿಗೆ ಕೊನೆಗೆ ಹಂಚಿ. ಇದರಿಂದ ನೀವು ನಿತ್ಯವೂ ದಾನ ಮಾಡಿದ ಫಲವೂ ಬರುತ್ತದೆ. ಜೊತೆಗೆ ಕಷ್ಟದಲ್ಲಿ ಇದ್ದವರ ಯೋಗಕ್ಷೇಮವನ್ನೂ ನೀವು ನೋಡಿಕೊಂಡ0ತಾಗುತ್ತದೆ ಎಂದರು.
ಗೀತೆಯಲ್ಲಿ, ವೇದಗಳಲ್ಲಿ, ಶ್ರೀಮದಾಚಾರ್ಯರು ಎಲ್ಲರೂ ದಾನದ ಮಹತ್ವ ಹೇಳಿದ್ದಾರೆ. ಯಾರು ತಾನು ದುಡಿದದ್ದನ್ನು ತಾನು ಮಾತ್ರ ತಿನ್ನುತ್ತಾನೆಯೋ, ಯಾರಿಗೂ ಕೊಡದೆ ತಿನ್ನುತ್ತಾನೆಯೋ ಅವನು ಪಾಪ ಮಾಡಿದಂತೆಯೇ ಸರಿ. ಅದಕ್ಕಾಗಿಯೇ ಅತಿಥಿ ಅಭ್ಯಾಗತರಿಗೆ ಅಷ್ಟು ಮಹತ್ವವನ್ನು ಶಾಸ್ತ್ರ ಹೇಳಿದೆ ಎಂದರು.
ಶ್ರೀ ಸತ್ಯಧರ್ಮ ತೀರ್ಥರ ಪಾದುಕಾರಾಧನೆಯ ನಿಮಿತ್ತ ಶ್ರೀ ಸತ್ಯಾತ್ಮ ತೀರ್ಥರಿಗೆ ಶ್ರೀ ಸತ್ಯಧರ್ಮರ ಶೇಷವಸ್ತ್ರವನ್ನು ಸಮರ್ಪಿಸಲಾಯಿತು.
Uttaradi Math ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಸುಬ್ಬಣ್ಣಾಚಾರ್ಯ ನವರತ್ನ, ಶ್ರೀನಿವಾಸಾಚಾರ್ಯ ನವರತ್ನ, ಪುರುಷೋತ್ತಮಾಚಾರ್ಯ ನವರತ್ನ, ರಘೂತ್ತಮಾಚಾರ್ಯ ಸಂಡೂರು, ಬಾಳಗಾರು ಜಯತೀರ್ಥಾಚಾರ್ಯ, ಕೃಷ್ಣಾಚಾರ್ಯ ರಾಯಚೂರು, ಪ್ರಕಾಶಾಚಾರ್ಯ, ಅನಿಲ್ ರಾಮಧ್ಯಾನಿ, ಗುರುರಾಜ್ ಕಟ್ಟಿ, ವಾದಿರಾಜ ಸಿ.ಪಿ. ಮೊದಲಾದವರಿದ್ದರು.