Sara Sunny Advocate ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಲ್ಲಿ ಮೂಕ ವಕೀಲೆ ವಾದ ಮಂಡನೆ ಮಾಡಿದ್ದಾರೆ.
ಹೌದು, ವಕೀಲೆಯ ಹೆಸರು ಸಾರಾ ಸನ್ನಿ. ಸಾರಾ ಅವರಿಗೆ ಸುಪ್ರೀಂ ಕೋರ್ಟ್ ನ ಕಲಾಪದಲ್ಲಿ ಕಾಣಿಸಿಕೊಳ್ಳುವುದು ಕನಸ್ಸಾಗಿತ್ತು. ಸಾರಾ ಅವರು ಮೂಕ ವಕೀಲರಾಗಿಯೇ ನೋಂದಾಯಿಸಲ್ಪಟ್ಟ ಭಾರತದ ಮೊದಲ ವಕೀಲ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಭಾರತದ ಮುಖ್ಯ ನ್ಯಾಯಾಧೀಶರಾದ ಡಿ ವೈ ಚಂದ್ರಚೂಡ್ ಅವರಿದ್ದ ಪೀಠವು ವರ್ಚುವಲ್ ಆಗಿ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವೇಳೆ ಸಾರಾಸನಿ ಎಂಬ ವಾಕ್ ಶ್ರವಣ ದೋಷವುಳ್ಳ ನ್ಯಾಯವಾದಿಯು ತಮ್ಮ ಸಂಜ್ಞೆಯ ತಜ್ಞರಾದ ಸೌರಭ್ ರಾಯ್ ಚೌಧರಿ ಮೂಲಕ ವಾದವನ್ನು ಮಂಡಿಸಿದ್ದಾರೆ.
ಸಾರಾ ಅವರ ಸಂಕೇತ ಭಾಷೆಯನ್ನು ಸೌರಭ್ ಅವರು ಬಾಯಿ ಮಾತಿನಲ್ಲಿ ನ್ಯಾಯ ಪೀಠಕ್ಕೆ ತಿಳಿಸಿದ್ದಾರೆ.
ಈ ಪ್ರಯತ್ನವನ್ನ ಅನೇಕರು ಶ್ಲಾಘಿಸಿದ್ದಾರೆ. ಈ ವಿಚಾರಣೆಯ ಸಂದರ್ಭದಲ್ಲಿ ವರ್ಜಿನಲ್ ವಿಚಾರಣೆಯ ತಾಂತ್ರಿಕ ತಂಡವು, ಸಾರಾ ಅವರಿಗೆ ಸ್ಕ್ರೀನ್ ಮೇಲೆ ಬರಲು ಅನುಮತಿ ನೀಡಲಿಲ್ಲ. ಕೇವಲ ಸಂಜ್ಞೆ ತಜ್ಞರಾದ ಸೌರಭ್ ಅವರಿಗೆ ಮಾತ್ರ ಅನುಮತಿ ನೀಡಿತ್ತು. ಆದ್ದರಿಂದ ಮೊದಲಿಗೆ ಸ್ಕ್ರೀನ್ ನಲ್ಲಿ ಸೌರಭ್ ಮಾತ್ರ ಕಾಣಿಸಿಕೊಂಡಿದ್ದರು.
ಆಗ, ನ್ಯಾ. ಡಿ ವೈ ಚಂದ್ರಚೂಡ ಅವರು ಮಧ್ಯಪ್ರವೇಶಿಸಿ ಸಾರಾ ಅವರಿಗೂ ಸ್ಕ್ರೀನ್ ಮೇಲೆ ಬರಲು ಅವಕಾಶ ನೀಡಲು ಆದೇಶಿಸಿದರು.
Sara Sunny Advocate ಆನಂತರದಲ್ಲಿ ಸಾರಾ ಅವರು ಬಂದು ಸ್ಕ್ರೀನ್ ನಲ್ಲಿ ವಾದವನ್ನು ಸಂಜ್ಞೆಯ ಮೂಲಕ ತಿಳಿಸುತ್ತಿದ್ದರು.ಇನ್ನೊಂದು ಕಡೆ ಅವರ ಸನ್ನಿಗಳನ್ನ ಅವರ ಸನ್ನೆ ತಜ್ಞರಾದ ಸೌರಭ್ ಅವರು ಬಾಯಿ ಮಾತಿನಲ್ಲಿ ವಿವರಣೆ ನೀಡಿದರು. ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಇದೆ ಪ್ರಥಮ ಬಾರಿಗೆ ಇಂತಹ ವಾದವನ್ನು ಮಂಡಿಸಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಾರಾ ಅವರ ಈ ಛಲಕ್ಕೇ ನಮ್ಮ ಕೆ ಲೈವ್ ನ್ಯೂಸ್ ಚಾನಲ್ ಅಭಿನಂದಿಸು ತ್ತದೆ.