Saturday, December 6, 2025
Saturday, December 6, 2025

Varadahalli Durgamba ಶ್ರೀ ರಾಮ ದುರ್ಗಾಂಬ ದೇವಾಲಯ ವರದಹಳ್ಳಿ

Date:

Varadahalli Durgamba ಸಾಗರ ಸನಿಹದ ವರದಹಳ್ಳಿ ಆಧ್ಯಾತ್ಮಿಕರಿಗೆ ಮನಶಾಂತಿ ನೀಡುವ ಸಾತ್ವಿಕ ಕ್ಷೇತ್ರ. ಬಹಳ ಪ್ರವಾಸಿಗರು ವರದಹಳ್ಳಿಗೆ ಭೇಟಿ ನೀಡುತ್ತಾರೆ.ಆದರೆ ಶ್ರೀಧರ ಸ್ವಾಮಿಗಳ ಪೂರ್ವತಪೋಸ್ಥಾನವನ್ನ ನೋಡಲು ಮರೆಯುತ್ತಾರೆ. ವರದಹಳ್ಳಿಯಿಂದ ಒಂದು ಫರ್ಲಾಂಗು ದೂರದಲ್ಲೇ ಇದೆ. ಶ್ರೀರಾಮ ದುರ್ಗಾಂಬ ದೇವಸ್ಥಾನ.

ಸು.6000 ವರ್ಷಗಳ ಪೌರಾಣಿಕ ಹಿನ್ನೆಲೆಯುಳ್ಳ ಕ್ರೇತ್ರ ವರದಹಳ್ಳಿಯಲ್ಲಿರುವ. ಶ್ರೀರಾಮ ದುರ್ಗಾಂಬ ದೇವಾಲಯ. ಇಲ್ಲಿ ವ್ಯಾಸರು ಪ್ರತಿಷ್ಠಾಪಿಸಿದ ಶ್ರೀದುರ್ಗಮ್ಮನವರ ದೇವಸ್ಥಾನವಿದೆ. ಅವರು ತಪಗೈದ ಗುಹೆಯೂ ಇದೆ ವ್ಯಾಸಗುಹೆ ಎಂದು ಕರೆಯುವ ಜಾಗವಿದೆ. ಒಂದು ಹೇಳಿಕೆ ಪ್ರಕಾರ ವ್ಯಾಸರಾಯರು ತಾವು ಸಂಚಾರದಲ್ಲಿದ್ದಾಗ ತಂಗಿರುವ ತಾಣಗಳಲ್ಲಿ ಮುಖ್ಯ್ರಪ್ರಾಣ ದೇವರನ್ನ ಪ್ರತಿಷ್ಠಾಪಿಸಿರುವರು.

ಇಲ್ಲಿಯ ನಂಬಿಕೆ ಪ್ರಕಾರ ದುರ್ಗಾಂಬ ಸ್ಥಾಪನೆ ಒಂದು ವಿಶೇಷವೆಂದೇ ಹೇಳಬೇಕು.ಅವರು ತಪಗೈದ ಸ್ಥಳವೇ ವ್ಯಾಸಗುಹೆ ಎಂದು ಪ್ರಸಿದ್ಧಿಹೊಂದಿದೆ. ಗುಹೆಯನ್ನ ಈಗಲೂ ವೀಕ್ಷಿಸಬಹುದು.

ಈ ಬಗ್ಗೆ ದೇವಸ್ಥಾನದ ಟ್ರಸ್ಟಿನ ಕಾರ್ಯದರ್ಶಿ ಶ್ರೀರಮಾನಂದ ಶರ್ಮ ವಿವರಿಸಿದರು.

ಮಹಿಷಾಸುರನನ್ನ ವಧೆಗೈದ ಸ್ಥಳವೆಂದು ಪ್ರತೀತಿ. ವಧಹಳ್ಳಿ, ವದಹಳ್ಳಿಎಂದು ಹೆಸರಿತ್ತು.

ನಂತರ ಶ್ರೀಧರ ಸ್ವಾಮಿಗಳು ಇಲ್ಲಿ ಸುಮಾರು ಹತ್ತು ವರ್ಷ ನೆಲಸಿದರಂತೆ. ಆಗ ಪಾಳುಬಿದ್ದ ಸಣ್ಣ ಕಲ್ಲಿನ ಕುಟೀರವಾಗಿತ್ತು ಗರ್ಭಗುಡಿ. ಶ್ರೀದುರ್ಗೆಯನ್ನ ಅರ್ಚಿಸಿ ತಮ್ಮ ತಪೋಬಲದಿಂದ ಅಲ್ಲಿ ದೈವಸಾನಿಧ್ಯವನ್ನು ಸದಾ ಇರುವಂತೆ ಮಾಡಿದರಂತೆ. ನಂತರ ಅವರ ಕೊನೆಯ ಕಾಲಕ್ಕೆ ಹತ್ತಿರದ ಗುಡ್ಡದಲ್ಲಿ

ನೆಲಸಿದ್ದರಂತೆ.ಅಲ್ಲಿಯೇ ಸಮಾಧಿಯೂ ಆದರಂತೆ.ಆಮೇಲೆ ಆಶ್ರಮ ಸ್ವರೂಪ ಪಡೆಯಿತು. ನಂತರ ವರದಹಳ್ಳಿ ಆಯಿತು ಎಂದು ಭಕ್ತರಾದ ಮಂಕಾಳೆ ಶ್ರೀಧರಹೆಗ್ಡೆ ಅವರು ಮಾಹಿತಿ ನೀಡಿದರು.

ಶ್ರೀದುರ್ಗೆಯು ಮಹಿಷಾಸುರನನ್ನ ವಧಿಸುವಾಗ ಬಾಗಿದಳು.‌ಆ ‌ಬಾಗಿದ ಭಂಗಿಯಲ್ಲಿದೆ ವಿಗ್ರಹ.

ವ್ಯಾಸಗುಹೆ, ಇಲ್ಲಿ ವ್ಯಾಸರು ತಪಸ್ಸು ಮಾಡಿದರೆಂದು ಪ್ರತೀತಿ. ಸನಿಹದಲ್ಲೇ ಶ್ರೀರಾಮ ದೇವಸ್ಥಾನವಿದೆ.ಅಲ್ಲಿ ಶ್ರೀಧರ ಸ್ವಾಮಿಗಳು ಪೂಜೆಮಾಡಿದರೆಂದು ಹೇಳುತ್ತಾರೆ.

ಅತ್ಯಂತ ಸುಂದರ ಅಂಬಾತೀರ್ಥವು ದುರ್ಗಾಂಬ ದೇವಾಲಯದ ಪಕ್ಕದಲ್ಲೇ ಇದೆ.
ಅದನ್ನ ಜೀರ್ಣೋದ್ಧಾರಗೊಳಿಸಿ ತಿಳಿನೀರಿನ ಸರೋವರ ಮಾಡಲಾಗಿದೆ.

ದೇವಿಗೆ ನವರಾತ್ರಿಯಲ್ಲಿ ಒಂಭತ್ತೂ ದಿವಸ ವಿಶೇಷ ಪೂಜೆ ಅಲಂಕಾರಮಾಡಲಾಗುತ್ತದೆ.ಫಾಲ್ಗುಣ ಮಾಸದಲ್ಲಿ ವಾರ್ಷಿಕೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

Varadahalli Durgamba ದೇವಾಲಯದ ಆವರಣದಲ್ಲೇ ತುಳಸಿಕಟ್ಟೆಯಿದೆ.ಅದರ ಜೊತೆಗೆ ಅಸ್ತ್ರರಾಜ ಎಂದು ಕರೆಯುವ ಶಿಲೆಯಿದೆ.

ಸಾಮಾನ್ಯವಾಗಿ ಆವರಣದಲ್ಲಿ ಕ್ಷೇತ್ರಪಾಲನ ವಿಗ್ರಹವಿರುತ್ತದೆ.ಇಲ್ಲಿ ದಕ್ಷಿಣದಿಕ್ಕಿಗೆ ಇರಲು ಕ್ಷೇತ್ರಪಾಲ ಒಪ್ಪಲಿಲ್ಲವಂತೆ. ಹಾಗಂತ

ಬೇರೆಯೇ ಶಿಲೆಯನ್ನ ಅಸ್ತ್ರರಾಜನೆಂದು ಸ್ಥಾಪಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...