“ದೇಶ ಸುತ್ತು, ಕೋಶ ಓದು” ಎಂಬ ನಾಣ್ಣುಡಿ ಪ್ರವಾಸದ ಮಹತ್ವವನ್ನು ಅರ್ಥೈಸುತ್ತದೆ. ಪ್ರವಾಸ ಜ್ಞಾನ ಸಂಪಾದನೆಯ ಜೊತೆಗೆ ಜೀವನ ಕೌಶಲ್ಯವನ್ನು ಪ್ರಾಯೋಗಿಕವಾಗಿ ಕಲಿಸುವ ಒಂದು ವಿಧಾನ. ಉದ್ಯೋಗ, ಆದಾಯ, ಮನೋವಿಕಾಸದ ಮೂಲವಾಗಿರುವ ಈ ಪ್ರವಾಸಿ ತಾಣಗಳನ್ನು ಸಂರಕ್ಷಿಸಬೇಕಾದ ಹೊಣೆ ನಮ್ಮೆಲ್ಲರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಪ್ರವಾಸೋದ್ಯಮದ ಜೊತೆಗೆ ನೈಸರ್ಗಿಕ ಪರಿಸರದ ಸಮೃದ್ಧಿಗಾಗಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಬದ್ಧವಾಗಿದೆ. ವಿಶ್ವ ಪ್ರವಾಸೋದ್ಯಮ ದಿನದ ಈ ಸಂದರ್ಭದಲ್ಲಿ ಪ್ರವಾಸಿ ತಾಣಗಳ ಸ್ವಚ್ಚತೆ ಮತ್ತು ಸುರಕ್ಷತೆಯನ್ನು ಕಾಪಾಡುವ ಸಂಕಲ್ಪ ಮಾಡೋಣ ಎಂದು ತಿಳಿಸಿದ್ದಾರೆ.
World Tourism Day ನಾಡಿನ ಜನತೆಗೆ ‘ವಿಶ್ವ ಪ್ರವಾಸೋದ್ಯಮ’ ದಿನದ ಶುಭಾಶಯಗಳು. ಪ್ರವಾಸಿ ಕೇಂದ್ರಗಳು ನಮ್ಮ ನೆಲದ ಸಂಸ್ಕೃತಿ ಮತ್ತು ಇತಿಹಾಸದ ಪ್ರತೀಕ. ಕನ್ನಡ ನಾಡಿನ ಸುಂದರ, ಅದ್ವಿತೀಯ ಪ್ರವಾಸಿ ತಾಣಗಳು, ರಮಣೀಯ ನಿಸರ್ಗ ಸ್ಥಳಗಳ ಬಗ್ಗೆ ಹೆಚ್ಚು ತಿಳಿಯುವ ಹಾಗೂ ಜನಪ್ರಿಯಗೊಳಿಸುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯನ್ನು ಜಗದಗಲಕ್ಕೆ ಪರಿಚಯಿಸೋಣ. ಪ್ರವಾಸಿ B. Y. Vijayendra ತಾಣಗಳನ್ನು ನಿರಂತರವಾಗಿ ಕಾಪಾಡಿಕೊಳ್ಳುವ ಸಂಕಲ್ಪ ಮಾಡೋಣ ಎಂದು ಶಿಕಾರಿಪುರ ಶಾಸಕರಾದ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.