Ganeshotsava ಮನೆ ಮತ್ತು ದೇಗುಲಗಳಲ್ಲಿ ನಡೆಯುತ್ತಿದ್ದ ಗಣೇಶೋತ್ಸವ ಹಬ್ಬವನ್ನು ಬಾಲಗಂಗಾಧರ ತಿಲಕರು ಸಾರ್ವಜನಿಕವಾಗಿ ಆಚರಿಸುವ ಮೂಲಕ ಸಾರ್ವಜನಿಕರನ್ನು ಒಂದೇ ವೇದಿಕೆಗೆ ತಂದವರು ಎಂದು ಅನ್ನಪೂರ್ಣ ಆಸ್ಪತ್ರೆಯ ವೈದ್ಯ ಡಾ. ಸುಂದ್ರೇಶ್ ಹೇಳಿದರು.
ಚಿಕ್ಕಮಗಳೂರಿನ, ಆದರ್ಶನಗರದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಶ್ರೀ ಗಣಪತಿ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಧರ್ಮದ ವಿಷಯದಲ್ಲಿ ತೊಂದರೆಗಳಾದರೆ ತಡೆದು ನಿಲ್ಲಿಸುವ ಸಾಮರ್ಥ್ಯ ಮಕ್ಕಳಲ್ಲಿ ಮೂಡಬೇಕೆಂಬ ಉದ್ದೇಶದಿಂದ ಹಿರಿಯರು ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಿದರು. ಗಣೇಶನನ್ನು ಪ್ರಾರ್ಥಿಸಿದರೆ ಎದುರಾಗುವ ಎಲ್ಲ ವಿಘ್ನಗಳು ನಾಶವಾಗುತ್ತವೆ ಎಂದು ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ ಎಂದರು.
ಮಕ್ಕಳಿoದ ದೊಡ್ಡವರವರೆಗೂ ಸಂಭ್ರಮದ ಹಬ್ಬವಾಗಿದೆ. ಸಮಾಜವನ್ನು ಬೆಸೆಯುವ ಹಬ್ಬವಾಗಿ ವಿಶ್ವದಲ್ಲಿ ಯೂ ಹಬ್ಬಕ್ಕೆ ಸಾಕಷ್ಟು ಮಹತ್ವವಿದೆ. ಹಬ್ಬ ಹರಿದಿನಗಳನ್ನು ಆಚರಿಸುವ ಸಂಬoಧ ಪ್ರಸ್ತುತ ದಿನಗಳಲ್ಲಿ ಸಮಾಜ ದಲ್ಲಿ ಯುವಜನತೆಗೆ ಸಂಸ್ಕಾರ ಮತ್ತು ನೆಲದ ಪರಂಪರೆಯನ್ನು ತಿಳಿಸಿಕೊಡುವ ಸಲುವಾಗಿ ಎಲ್ಲಾ ಸಮುದಾಯ ವು ಕೂಡಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.
ನಗರಸಭಾ ಸದಸ್ಯ ಎ.ಸಿ.ಕುಮಾರಗೌಡ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರತಿಯೊಬ್ಬ ರು ಮನೆಯಿಂದ ಹೊರಬಂದು ಪರಿಸ್ಪರ ಸೇರುವ ಸಂಬoಧವಾಗಿ ಗಣೇಶ ಹಬ್ಬ ಆಚರಿಸಲಾಗುತ್ತಿದ್ದು ಅಂದಿನಿo ದಲೂ ಇಂದಿನವರೆಗೂ ಅತ್ಯಂತ ಅದ್ದೂರಿಯಿಂದ ದೇಶಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಆದರ್ಶನಗರ ಶ್ರೀ ಗಣಪತಿ ಸೇವಾ ಸಮಿತಿ ಮುಖ್ಯಸ್ಥ ಬಸವರಾಜ್ ಮಾತನಾಡಿ ಪ್ರತಿವರ್ಷವು ಗಣಪತಿ ಆಚರಣೆಯನ್ನು ವಾರ್ಡಿನ ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯ ಒಗಟ್ಟಾಗಿ ಸಂಭ್ರಮಿಸುವ ಮೂಲಕ ಶಾಂತಿ, ಸೌಹಾರ್ದತೆಗೆ ಪಾತ್ರವಾಗಿದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಚರಿಸಿ ನಾವೆಲ್ಲರೂ ಒಂದೇ ಎಂಬ ತತ್ವದಡಿ ಗಣೇಶೋತ್ಸವ ನಡೆಸಲಾಗುತ್ತಿದೆ ಎಂದರು.
Ganeshotsava ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯ ದೇವರಾಜ್‌ಶೆಟ್ಟಿ, ಗಣಪತಿ ಸೇವಾ ಸಮಿತಿ ಪದಾಧಿಕಾರಿಗ ಳಾದ ಜೇಮ್ಸ್ ಡಿಸೋಜಾ, ತಮ್ಮಣ್ಣಗೌಡ, ಪುಟ್ಟಪ್ಪ, ಮಹಾಬಲರೈ, ಧರ್ಮಸಿಂಗ್, ಶಂಕರ್, ಕಾಂತೇಶ್, ಮಲ್ಲೇಶ್‌ಗೌಡ, ಮಂಜು, ಮಣಿ, ಪಾಂಡು, ಜಗದೀಶ್, ವಾಸು, ಶಿಶಕುಮಾರ್, ಕು.ಲೇಖನ ಹಾಜರಿದ್ದರು.