Saturday, December 6, 2025
Saturday, December 6, 2025

Labour Day 2023 ಹಿರೇಮಗಳೂರಿನಲ್ಲಿ ಪೌರಕಾರ್ಮಿಕ ದಿನಾಚರಣೆ

Date:

Labour Day 2023 ಚಿಕ್ಕಮಗಳೂರು, ತಾಲ್ಲೂಕಿನ ಹಿರೇಮಗಳೂರು ಗ್ರಾಮದಲ್ಲಿ ಪೌರ ಕಾರ್ಮಿಕರ ದಿನಾ ಚರಣೆ ಅಂಗವಾಗಿ ಶನಿವಾರ ಮೂರು ಮಂದಿ ಪೌರಕಾರ್ಮಿಕರಿಗೆ ಗೌರವಿಸುವ ಮೂಲಕ ಗ್ರಾಮಸ್ಥರು ಸಂಭ್ರಮಾಚರಣೆಯಲ್ಲಿ ಪರಸ್ಪರ ಆತ್ಮೀಯವಾಗಿ ತೊಡಗಿಸಿಕೊಂಡರು.

ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ಕೇಶವ್ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ತ್ಯಾಗ, ಸೇವೆ, ಸಮರ್ಪಣೆ, ಕಾರುಣ್ಯದಿಂದ ಸದಾ ಜೀವ ತೇಯುತ್ತಿರುವ ಪೌರಕಾರ್ಮಿಕರನ್ನು ಈ ಸಮಾಜ ಪ್ರತಿಕ್ಷಣವು ತಾಯ್ತನದಿಂದ ಕಾಣುವುದೇ ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಗೌರವ ಎಂದರು.

ಚಿಕ್ಕಮಗಳೂರು ನಗರದ ಜೀವನಾಡಿಗಳಾಗಿರುವ ಪೌರ ಕಾರ್ಮಿಕರಿಗೂ ಒಂದು ದಿನ ಇದೇ ಎಂಬುದು ಹಲವು ಜನರಿಗೆ ತಿಳಿದೇ ಇಲ್ಲ. ನಗರದ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ, ಸಮರ್ಪಕವಾಗಿ ಪರಿಸರವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರು ಇಂದು ದಿನಾಚರಣೆ ಆಚರಿಸಿಕೊಳ್ಳುತ್ತಿದ್ದಾರೆ ಸಂತಸದ ಸಂಗತಿ ಎಂದು ಹೇಳಿದರು.

ಪ್ರತಿದಿನ ಮುಂಜಾನೆ ಚಳಿ, ಗಾಳಿ ಎನ್ನದೇ ತಮ್ಮ ಕಾಯಕದಲ್ಲಿ ಅವರು ತೊಡಗುತ್ತಾರೆ. ರಸ್ತೆಗಳನ್ನು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚಗೊಳಿಸುತ್ತಾರೆ. ಬೀದಿಯ ಕಸ ತೆಗೆದು ಸ್ವಚ್ಚಗೊಳಿಸುತ್ತಾರೆ. ಕೊರೋನಾ ಸಂಕಷ್ಟದ ಸಮಯದಲ್ಲೂ ಅವರ ಸೇವೆ ಅಪರಿಮಿತವಾಗಿತ್ತು. ಸ್ವಚ್ಚತೆ, ನೈರ್ಮಲ್ಯ ಕಾಪಾಡುತ್ತಾ, ಸೊಳ್ಳೆ, ವೈರಾಣುಗಳಿಂದ ಜನರ ಆರೋಗ್ಯವನ್ನೂ ಅವರು ರಕ್ಷಿಸುತ್ತಿದ್ದಾರೆ ಎಂದರು.

ನಗರಕ್ಕಾಗಿ ಮಾತ್ರವಲ್ಲದೇ ಪ್ರತಿಯೊಬ್ಬನಿಗಾಗಿಯೂ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಸಲ್ಲಬೇ ಕಾದ ಸವಲತ್ತುಗಳು, ಸೌಕರ್ಯಗಳು ಸಿಗದೆ, ಸಂಕಷ್ಟದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ತಮಗೆ ದಕ್ಕಬೇಕಾದ ಸವಲ ತ್ತುಗಳನ್ನು ಪಡೆಯಲು ಪೌರಕಾರ್ಮಿಕರು ಪ್ರತಿಭಟನೆ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಸಮಾಜದಲ್ಲಿ ಪೌರ ಕಾರ್ಮಿಕರಿಗೂ ಒಂದು ನೆಲೆ-ಬೆಲೆ ಇದೆ ಎಂದು ಹೇಳಲಿಕ್ಕಾಗಿ. ಎಲ್ಲರಂತೆ ಅವರು ಕೂಡ ಮಾನವರು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲಿಕ್ಕಾಗಿ. ಅವರ ಕಸುಬಿನ ಮೂಲಕ ಅವರನ್ನು ಅಳೆಯದೆ ಅವರಿಗೂ ಘನತೆ, ಗೌರವ ಕೆಲಸವಾಗಬೇಕು ಎಂದರು.
ಇದೇ ವೇಳೆ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಸತೀಶ್, ಪುನೀತ್ ಹಾಗೂ ಶಿವು ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು.

Labour Day 2023 ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರುಗಳಾದ ಜಾನಯ್ಯ, ರಾಜಣ್ಣ, ರಾಮಚಂದ್ರ, ಕೃಷ್ಣಮೂರ್ತಿ, ಚಂದ್ರಣ್ಣ, ಶೇಖರ್, ಉಮೇಶ್, ಜಗದೀಶ್, ನಂದನ್, ಅರುಣ್, ಚಂದನ್, ಯಶವಂತ್ ಮತ್ತಿ ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...