YB Chandrakaoth ರಾಜ್ಯದಲ್ಲಿ ಮಳೆಯ ಕೊರತೆಯಿಂದ ಎದುರಾಬಹುದಾದ ಬರ ಪರಿಸ್ಥಿತಿಯನ್ನು ಕಾಂಗ್ರೇಸ್
ಪಕ್ಷದ ರಾಜ್ಯ ಸರ್ಕಾರ ರೈತರ ಮತ್ತು ಜನರ ಹಿತವನ್ನು ಕಾಪಾಡಲಿದ್ದು, ಬರಗಾಲ ಪರಿಸ್ಥಿತಿ ಉಂಟಾದಲ್ಲಿ
ನಿಭಾವಣೆಯ ಬಗ್ಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರಿಂದ ಕಲಿಯುವ ಅಗತ್ಯವಿಲ್ಲವೆಂದು ಜಿಲ್ಲಾ
ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾoತ್ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಬಿ.ಜೆ.ಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸತತವಾಗಿ ಮೂರು ವರ್ಷಗಳ
ಕಾಲ ಅತಿವೃಷ್ಷಿ ಸಂಭವಿಸಿತ್ತು. ಅಕ್ಷರಶಹ ಸಾವಿರಾರು ಸಂಖ್ಯೆ ಜನರು ಮನೆ ಮಠ
ಕಳೆದುಕೊಂಡಿದ್ದರು. ಬೆಳೆ ಹಾನಿ ಜೀವ ಹಾನಿಯೂ ಸಂಭವಿಸಿದ್ದರೂ ದೇಶದ ಪ್ರಧಾನಿ ಆದಿಯಾಗಿ
ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ¸ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ, ಅವರ ಸರ್ಕಾರದ
ಸಚಿವರು ನೆರೆ ಹಾವಳಿ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ ಅತಿವೃಷ್ಷಿಗೆ ಒಳಗಾದ ಜನರನ್ನು
ಸಂಭವಿಸುವ ಕೆಲಸವನ್ನು ಮಾಡಲಿಲ್ಲ ಎನ್ನುವುದನ್ನು ಬಿ.ಜೆ.ಪಿ. ನಾಯಕರು ಮರೆತಂತ್ತಿದೆ ಎಂದು
ವಕ್ತಾರರಾದ ವೈ.ಬಿ.ಚಂದ್ರಕಾoತ್ ಅವರು ಹೇಳಿದ್ದಾರೆ.
ಬರ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು
ರಾಜ್ಯಾದ್ಯಂತ್ಯ ಪ್ರವಾಸ ಮಾಡಿ ಸ್ವತಹ ಅವಲೋಕಿಸಿದ್ದಾರೆ. ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು
ಸಂಗ್ರಹಿಸುವ ಮೂಲಕ ಸರ್ಕಾರ ಮುಂಬರುವ ಎಂತಹ ಪರಿಸ್ಥಿತಿಯನ್ನು ನಿಭಾಯಿಸಲು
ಸಮರೋಪಾದಿಯಲ್ಲಿ ಮುಂದಾಗಿದೆ. ಈ ಮಾಹಿತಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪರಿಗೆ
ದೊರಕಿರುವುದರಿಂದ ರೈತರ ಪರವಾಗಿ ಮೊಸಳೆ ಕಣ್ಣೀರು ಸುರಿಸುವ ನಾಟಕ ಮಾಡಿದ್ದಾರೆಂದು ಅವರು
ಟೀಕಿಸಿದ್ದಾರೆ.
ಯಾರನ್ನೋ ನೋಡಿ ಮಳೆ ಬರುವುದಿಲ್ಲ ಅಥವಾ ಬರದೆ ಇರುವುದಿಲ್ಲ. ಅದು ಪ್ರಕೃತಿಯ
ವೈಚಿತ್ರ ಇದನ್ನು ತಿಳಿಯದೆ ಸದಾ ಮೂಡ ನಂಬಿಕೆ, ಮೌಡ್ಯ ಬಿತ್ತುವ ಕೆ.ಎಸ್.ಈಶ್ವರಪ್ಪ, ಅವರ
ಪಕ್ಷದವರು ತಮಗೆ ಅಧಿಕಾರ ಕೈತಪ್ಪಿದ ಕಾರಣಕ್ಕೆ ಕಾಂಗ್ರೇಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರನ್ನು ಹಿಯಾಳಿಸಲು ತಮ್ಮ ನಾಲಿಗೆ ಚಾಚಿಕೊಡೇ ಇರುವುದು ಅವರಿಗೆ ಶೋಭೆ ತರುವುದಿಲ್ಲ.
ಬಿ.ಜೆ.ಪಿ. ನಾಯಕರ ಇಂತಹ ಮತಿಗೆಟ್ಟ ಧೋರಣೆ ಮತ್ತು ಆಡಳಿತ ವೈಕರಿಯ ನೋಡಿಯೇ ರಾಜ್ಯದಲ್ಲಿ
ಪ್ರಜ್ಜಾವಂತಜನರು ಇವರನ್ನು ಕಳೆದ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಿದ್ದಾರೆ ಎನ್ನುವುದನ್ನು
ಬಿ.ಜೆ.ಪಿ. ನಾಯಕರು ಮತ್ತು ಕೆ.ಎಸ್.ಈಶ್ವರಪ್ಪರವರು ತಿಳಿದುಕೊಂಡರೆ ಒಳ್ಳೆಯದು.
YB Chandrakaoth ಇಲ್ಲದೆ ಹೋದರೆ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇನ್ನೂ ಹೀನಾಯವಾಗಿ ಸೋಲಬೇಕಾದೀತೆಂದು ಜಿಲ್ಲಾ
ವಕ್ತಾರರಾದ ವೈ.ಬಿ.ಚಂದ್ರಕಾoತ್ ಎಚ್ಚರಿಕೆ ನೀಡಿದ್ದಾರೆ.