Wednesday, October 2, 2024
Wednesday, October 2, 2024

Youth Hostel Shimoga ಸಂಘಟನೆ ಸದೃಢವಾಗಲು ಸದಸ್ಯರ ಸಹಕಾರ ಅಗತ್ಯ- ಎನ್.ಗೋಪಿನಾಥ್

Date:

Youth Hostel Shimoga ಸಂಸ್ಥಾಪಕರು ದೂರದೃಷ್ಠಿಯಿಂದ ಸಂಘಟನೆ ಪ್ರಾರಂಭಿಸಿರುತ್ತಾರೆ. ಎಲ್ಲ ಸದಸ್ಯರ ಸಹಕಾರದಿಂದ ಸಂಘಟನೆ ಸದೃಢ ಆಗಿಸುವ ಜತೆಯಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕು ಎಂದು ಯೂತ್ ಹಾಸ್ಟೆಲ್ ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ನಗರದಲ್ಲಿ ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು.

ರಾಷ್ಟ್ರ ಮಟ್ಟದಲ್ಲಿ ಘಟಕ ಹೆಸರು ಮಾಡಲು ಮೂಲ ಕಾರಣ ವಿಜಯೇಂದ್ರರಾವ್. ಇವರು ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆಯೋಜಿಸಿ ಅನೇಕರನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಾರೆ.

ಮುವತ್ತಮೂರು ವರ್ಷದಿಂದ ಘಟಕದ ಬೆನ್ನೆಲುಬಾಗಿ ನಿಂತ್ತಿದ್ದಾರೆ ಎಂದು ತಿಳಿಸಿದರು.

ಶಿವಮೊಗ್ಗ ತರುಣೋದಯ ಘಟಕದ ಸಾವಿರಾರು ಸದಸ್ಯರು ಹಿಮಾಲಯ ಚಾರಣ ಮಾಡಲು ಅವಕಾಶ ದೊರಕಿದೆ. ಪ್ರತಿ ಸದಸ್ಯರು ತಮ್ಮ ಪರಿಚಯದವರನ್ನು ಸೇರಿಸಿ ಅವರು ಚಾರಣದಲ್ಲಿ ಉತ್ಸಹದಿಂದ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.

ಸನ್ಮಾನಿತರ ಪರವಾಗಿ ವೇಣುಗೋಪಾಲ್, ಎಸ್.ವಿ.ರಂಗಣ್ಣ ಮಾತನಾಡಿ, ಉತ್ತರ ಭಾರತದ ಚಾರಣಕ್ಕೆ ಹೋಗಬೇಕಾದಾಗ ಬೆಂಗಳೂರಿಗೆ ಹೋಗಿ ರೈಲ್ವೆ ಟಿಕೇಟ್ ಬುಕ್ ಮಾಡಬೇಕಿತ್ತು. ಅಂತಹ ಪರಿಸ್ಥಿತಿಯಲ್ಲಿ ನಮ್ಮ ಘಟಕದ ಬಹಳಷ್ಟು ಸದಸ್ಯರು ಚಾರಣ ಮಾಡಿದ್ದೆವು.

ಇಂದಿಗೂ ಅದು ಮುಂದುವರಿದು ದೇಶದಲ್ಲಿಯೇ ಉತ್ತಮ ಹೆಸರು ಗಳಿಸಲು ಇಂದಿನ ಆಡಳಿತ ಮಂಡಳಿ ಸದಸ್ಯರು ಕಾರಣ ಎಂದರು.

ಚೇರ್ಮನ್ ವಾಗೇಶ್ ಮಾತನಾಡಿ, ಹಿರಿಯರ ಆಶಯದಂತೆ ಹಿಂದೆ ವಿಜಯೇಂದ್ರ ರಾವ್, ಜಿ.ವಿಜಯಕುಮಾರ್ ಉತ್ತಮವಾಗಿ ನಡೆಸಿಕೊಂಡು ಬಂದ ಸಂಸ್ಥೆಗೆ ಸದಸ್ಯರ ಹಾಗೂ ಆಡಳಿತ ಮಂಡಳಿಯ ಸಹಕಾರದಿಂದ ಉತ್ತಮ ಕಾರ್ಯ ಸಾಧಿಸಲು ಸಾದ್ಯವಾಗಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ಜನವರಿ ತಿಂಗಳಲ್ಲಿ ರಾಜ್ಯ ಘಟಕ ರಾಷ್ಟ್ರೀಯ ಸಂಸ್ಕೃತಿ ಕಾರ್ಯಕ್ರಮ ಆಯೋಜಿಸಿದ್ದು ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸುವಂತೆ ಕೋರಿದರು.

ನೇಪಾಳ ದಿಂದ ಶಿವಮೊಗ್ಗದ ಗೋಪಾಳಕ್ಕೆ ಬೈಕ್ ರ‍್ಯಾಲಿ ಅನುಭವನ್ನು ವಿಜಯೇಂದ್ರರಾವ್ ಸಭೆಯಲ್ಲಿ ಹಂಚಿಕೊಂಡರು.

Youth Hostel Shimoga ಜಿ.ವಿಜಯಕುಮಾರ್ ಪ್ರಾರ್ಥನೆ, ಸುರೇಶ್ ಕುಮಾರ್ ಪ್ರಾಸ್ತಾವಿಕ ನುಡಿ, ಮಲ್ಲಿಕಾರ್ಜುನ್, ನಾಗರಾಜ್ ತಮ್ಮ ಚಾರಣದ ಅನುಭವ ಹಂಚಿಕೊಂಡರು, ಮಮತಾ, ಭಾರತಿ, ವೇದಿಕೆಯಲ್ಲಿ ಇದ್ದರು. ಡಾ.ಪ್ರಕೃತಿ ಮಂಚಾಲೆ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...