Uttaradi Math ಸಕಲ ದೇವತೆಗಳ ಒಂದು ಮಂದಿರ ಎಂದರೆ ಗೋವು. ಎಲ್ಲ ದೇವತೆಗಳ ಸಂಚಾರಿ ಮಂದಿರ ಎನ್ನಿಸಿದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಹೊಳೆಹೊನ್ನೂರಿನಲ್ಲಿ ಶನಿವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶದ ನೀಡಿದರು.
ಗೋವು ಒಂದು ರೀತಿಯಲ್ಲಿ ಮೊಬೈಲ್ ದೇವಸ್ಥಾನ ಇದ್ದಂತೆ. ಇಂತಹ ಗೋವುಗಳ ಪಾಲನೆಯನ್ನು ಎಲ್ಲರೂ ಕಡ್ಡಾಯವಾಗಿ ಮಾಡಲೇಬೇಕು. ಗೋವುಗಳ ರಕ್ಷಣೆಯನ್ನು ಮಾಡಬೇಕು. ಆಕಳಿನ ಸಾಧುಗುಣದ ದುರುಪಯೋಗ ಆಗುತ್ತಿದೆ. ಗೋವಿನ ರಕ್ಷಣೆಗೆ ಪ್ರತಿಯೊಬ್ಬರೂ ಗೋಪಾಲಕರಾಗಬೇಕು ಎಂದರು.
ಶಾಸ್ತ್ರದಲ್ಲಿ ಆಚಾರಕ್ಕೆ ಅತ್ಯಂತವಾದ ಮಹತ್ವವಿದೆ. ಶುದ್ಧಿಯನ್ನು ಕಾಪಾಡಿಕೊಳ್ಳಬೇಕು. ಸತ್ಕಾರ್ಯಗಳನ್ನು ಮಾಡುವಾತಗೆ ಶೌಚ ತುಂಬಾ ಮುಖ್ಯ. ಶೌಚವೆಂದರೆ ಕೇವಲ ಸ್ನಾನ ಮಾಡುವುದಲ್ಲ. ಸ್ನಾನವೂ ಬೇಕು ಜೊತೆಗೆ ಮನಸ್ಸೂ ಶುದ್ಧವಾಗಿರಬೇಕು ಎಂದರು.
ಪಾಪಗಳನ್ನು ಕಳೆದುಕೊಳ್ಳಬೇಕು :
ಗಂಗಾಲಹರಿ ಕುರಿತು ಪ್ರಚವನ ನೀಡಿದ ಪಂಡಿತ ವೆಂಕಟೇಶಾಚಾರ್ಯ, ದೇಹಕ್ಕೆ ಹೃದಯ ಸೇರಿದಂತೆ ಅವಯವಗಳು ಹೇಗೆ ಅಂಟಿಕೊoಡಿವೆಯೋ ಹಾಗೆಯೇ ನಾವು ಮಾಡಿದ ಪಾಪಗಳೂ ನಮಗೆ ಅಂಟಿಕೊoಡಿರುತ್ತವೆ. ಇದು ನಾಶವಾಗಬೇಕಾದರೆ ಗಂಗಾ ಸ್ನಾನ ಮಾಡಬೇಕು. ಹರಿ ನಿವೇದಿತವಾದ ಆಹಾರ ಸೇವಿಸಬೇಕು. ದೇವರ ಕಥೆಗಳನ್ನು ಕೇಳಬೇಕು. ಸದಾ ದೇವರ ಧ್ಯಾನದಲ್ಲಿರಬೇಕು ಎಂದರು.
ಜಗನ್ನಾಥ ದಾಸರ ಆರಾಧನೆಯ ಪ್ರಯುಕ್ತವಾಗಿ ಸಂಪೂರ್ಣ ಹರಿಕಥಾಮೃತಸಾರದ ಪಾರಾಯಣ ನಡೆಯಿತು.
Uttaradi Math ಪೂಜಾ ಕಾಲದಲ್ಲಿ ಪ್ರಕಾಶಾಚಾರ್ಯ ಸವಣೂರು ಪ್ರವಚನ ನೀಡಿದರು.
ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ನವರತ್ನ ರಾಮಾಚಾರ್ಯ, ಕಡೂರು ಮಧುಸೂಧನಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿ, ರಾಮಧ್ಯಾನಿ ಅನಿಲ್, ಮುರಳಿ, ಸತ್ಯನಾರಾಯಣ ನಾಡಿಗ್, ಧೃವಾಚಾರ್, ಜಯತೀರ್ಥ ಬೆಂಗಳೂರು, ಶ್ರೀಪಾದ್ ಶಿವಮೊಗ್ಗ ಮೊದಲಾದವರಿದ್ದರು.