Uttaradi Math ಹೆಣ್ಣು ಒಬ್ಬಳಿಗೆ ಮೂರೂ ಲಿಂಗಗಳಲ್ಲಿ ಶಬ್ದ ಪ್ರಯೋಗ ಮಾಡಿರುವುದು ಭಾರತೀಯ ಸಂಸ್ಕೃತಿಯ ವಿಶೇಷ. ಹೆಂಡತಿ ಎಂಬ ಶಬ್ದಕ್ಕೆ ಧಾರಾಃ, ಪತ್ನೀ ಹಾಗೂ ಕಲತ್ರಂ ಎಂಬ ಮೂರು ಲಿಂಗಗಳಲ್ಲೂ ಪ್ರಯೋಗವಿದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಹೊಳೆಹೊನ್ನೂರಿನಲ್ಲಿ ಶುಕ್ರವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶದ ನೀಡಿದರು.
ಎಂತಹ ಆಪತ್ತುಗಳು ಜೀವನದಲ್ಲಿ ಬಂದರೂ ಅದನ್ನು ಧೈರ್ಯದಿಂದ ಎದುರಿಸುತ್ತೇನೆ ಎನ್ನುವುದಕ್ಕೆ ಧಾರಾಃ ಎಂಬ ಪುಲ್ಲಿಂಗ ಶಬ್ದ, ಗಂಡನೊ0ದಿಗೆ ವಿನಯದಿಂದ ಬಾಳುತ್ತೇನೆ ಎನ್ನುವುದಕ್ಕೆ ಪತ್ನೀ ಎಂಬ ಸ್ತ್ರೀ ಲಿಂಗ ಶಬ್ದ, ಯಾವುದೇ ಪರಪುರುಷರು ಬಂದರೂ ಅವರ ಬಲೆಗೆ ಬೀಳದೆ ತಾನು ನಪುಂಸಕಳoತೆ ಇರುತ್ತೇನೆ ಎನ್ನುವುದಕ್ಕೆ ಕಲತ್ರಂ ಎಂಬ ನಪುಂಸಕ ಲಿಂಗ ಶಬ್ದದ ಬಳಕೆಯಲ್ಲಿದೆ ಎಂದರು.
ಪರಸ್ತ್ರೀಯರಲ್ಲಿ ಯಾರೂ ಆಸಕ್ತಿಯನ್ನು ಮಾಡಬಾರದು. ಇದರಿಂದ ಘೋರವಾದ ಅನರ್ಥ ಇದೆ. ಸ್ತ್ರೀಯರು ಕೂಡ ಪರ ಪುರುಷನಲ್ಲಿ ಆಸಕ್ತಿ ಹೊಂದಬಾರದು. ಯಾವುದು ತನಗೆ ಯೋಗ್ಯವಲ್ಲ ಅದನ್ನು ಅಪೇಕ್ಷೆಪಡಬಾರದು. ಎಲ್ಲರೂ ಚಾರಿತ್ರ್ಯಕ್ಕೆ ಮಹತ್ವ ಕೊಡಬೇಕು. ಇಲ್ಲದಿದ್ದರೆ ಘೋರ ಅನರ್ಥ ಖಚಿತ ಎಂದರು.
Uttaradi Math ಪoಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ನವರತ್ನ ರಾಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ. ವಾದಿರಾಜ, ಗುರುರಾಜ ಕಟ್ಟಿ, ರಾಮಧ್ಯಾನಿ ಅನಿಲ್ ಮೊದಲಾದವರಿದ್ದರು.