Hardeep Singh Nijjar ಖಲಿಸ್ತಾನಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಭಾರತ-ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ಹದಗಿಟ್ಟಿದೆ. ಹತ್ತಿಯಲ್ಲಿ ಭಾರತದ ಏಜೆಂಟರನ ಕೈವಾಡದ ಬಗ್ಗೆ ಭಾರತದ ತಿಂಗಳ ಮೊದಲ ಸಾಕ್ಷ್ಯ ನೀಡಿದ್ದೇವೆ ಎಂಬ ಕೆನಡಾ ಪ್ರಧಾನಿ ಹೇಳಿಕೆಯ ಜೊತೆಗೆ ನಿಜ್ಜಾರ್ ಉಗ್ರ ಸ್ವರೂಪದ ಬಗ್ಗೆ ಭಾರತ ಅನೇಕ ಸಾಕ್ಷಿಗಳನ್ನು ಕಲೆಹಾಕಿದೆ.
ನಿಜ್ಜಾರ್ ಪೂರ್ವಾಪರ ಮಾಹಿತಿ ಸಂಗ್ರಹಿಸಿರುವ ಕೇಂದ್ರ ಗುಪ್ತಚರ ಇಲಾಖೆ, ಖಲಿಸ್ತಾನಿ ಉಗ್ರರಿಗೆ ಪಾಕಿಸ್ತಾನದ ಐ ಎಸ್ ಐ ಜೊತೆ ನಿಕಟ ಸಂಪರ್ಕವಿರುವ ಮಾಹಿತಿಯನ್ನು ಕಲೆ ಹಾಕಲಾಗಿದೆ.
ಕೆನಡಾ ನೆಲದಲ್ಲಿದ್ದುಕೊಂಡು ಭಾರತದ ವಿರೋಧ ಕೃತಿಗಳನ್ನು ನಡೆಸಿದ ನಿಜ್ಜಾರ್. ಪಾಕಿಸ್ತಾನದ ಐಎಸ್ಐ ಅಡಿಯಲ್ಲಿ ಉಗ್ರ ತರಬೇತಿ ಪಡೆದುಕೊಂಡಿದ್ದನು. ದೇಶ ವಿರೋಧಿ ಕೃತ್ಯಗಳಿಗೆ ಹಣಕಾಸು ಸಹಾಯ ಪಡೆದುಕೊಳ್ಳುತ್ತಿರುವ ಬಗ್ಗೆ ಅನೇಕ ದಾಖಲೆಗಳು ಕೇಂದ್ರ ಗೃಹ ಸಚಿವಾಲಯದಲ್ಲಿ ಸಂಗ್ರಹಿಸಲಾಗಿದೆ.
Hardeep Singh Nijjar ತರಬೇತಿ ಪಡೆದ ಅನೇಕ ಯುವಕರನ್ನ ಭಾರತಕ್ಕೆ ಕಳುಹಿಸಿ ದೇಶದ ರಾಜಕೀಯ ಹಾಗೂ ಧಾರ್ಮಿಕ ನಾಯಕರ ಹತ್ಯೆಗೂ ಸಂಚು ರೂಪಿಸುವ ಬಗ್ಗೆ ಕೂಡ ತನಿಖೆಯಿಂದ ಪತ್ತೆಯಾಗಿದೆ.