Cauvery Water Dispute ಕರ್ನಾಟಕದಲ್ಲಿ ಕಾವೇರಿ ನೀರಿಗಾಗಿ ಹೋರಾಟ ತೀವ್ರವಾಗಿದೆ. ಬರ ಪರಿಸ್ಥಿತಿಯ ನಡುವೆಯೂ ಕೂಡ ಪ್ರತಿದಿನ 5000 ಕ್ಯೂಸೆಕ್ ನೀರು ಹರಿಸುವುದನ್ನ ಮುಂದುವರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಖಂಡಿಸಿ ಮತ್ತು ರಾಜ್ಯ ಸರ್ಕಾರದ ಧೋರಣೆಯನ್ನ ವಿರೋಧಿಸಿ ವಿವಿಧ ಸಂಘಟನೆಗಳು ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಿವೆ. ಇದರ ಹಿನ್ನಲೆಯಲ್ಲಿ ಸೆಪ್ಟೆಂಬರ್ 26ರಂದು ಬೆಂಗಳೂರಿನಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಈಗಾಗಲೇ ಕಾವೇರಿ ನೀರಿಗಾಗಿ ರೈತರ ಪ್ರತಿಭಟನೆ ಮತ್ತಷ್ಟು ಜೋರಾಗಿದೆ. ಸೆ. 23ರಂದು ಮಂಡ್ಯದಲ್ಲಿ ಬಂದ್ ಮಾಡಲಾಗಿತ್ತು. ಈ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಕೂಡ ದೊರಕಿದೆ. ರಾಜ್ಯದ ರೈತರ ಅಳಿವು ಉಳಿವಿನ ಜೊತೆಗೆ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರಿನ ಪ್ರಶ್ನೆಯೂ ಎದುರಾಗಿದೆ. ಹೋರಾಟಕ್ಕೆ Cauvery Water Dispute ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಹ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಕಾವೇರಿ ಸಮರದ ಸ್ವರೂಪ ತೀವ್ರ ವಾಗಿದೆ.
Cauvery Water Dispute ಕಾವೇರಿ ಹೋರಾಟಕ್ಕೆ ಬಿಜೆಪಿ & ಜೆಡಿಎಸ್ ಸಾಥ್: ಸೆ 26 ಬೆಂಗಳೂರು ಬಂದ್
Date: