Saturday, December 6, 2025
Saturday, December 6, 2025

Co-operative Society of Graduates ಚಿಕ್ಕಮಗಳೂರು ಪದವೀಧರರ ಪತ್ತಿನ ಸಹಕಾರ ಸಂಘದಿಂದ ಸದಸ್ಯರಿಗೆ 10% ಡಿವಿಡೆಂಡ್ ಘೋಷಣೆ

Date:

Co-operative Society of Graduates ಪದವೀಧರರ ಪತ್ತಿನ ಸಹಕಾರ ಸಂಘಕ್ಕೆ ಪ್ರಸ್ತುತ ವರ್ಷ 13.94 ಲಕ್ಷ ನಿವ್ವಳ ಲಾಭ ಗಳಿಸುವ ಮೂಲಕ ಸಂಘವು ಆರ್ಥಿಕವಾಗಿ ಸದೃಢವಾಗಿದೆ ಎಂದು ಸಂಘದ ಅಧ್ಯಕ್ಷ ಡಾ. ಡಿ.ಎಲ್.ವಿಜಯ್‌ಕುಮಾರ್ ಹೇಳಿದರು.

ಚಿಕ್ಕಮಗಳೂರು ನಗರದ ಬಸವನಹಳ್ಳಿ ಸಮೀಪ ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ 2022-23ನೇ ಸಾಲಿನ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು 13.94ಲಕ್ಷ ನಿವ್ವಳ ಲಾಭ ಗಳಿಸಿ ಶೇ.10 ಡಿವಿಡೆಂಟ್‌ನ್ನು ಸದಸ್ಯರಿಗೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

ಸಂಘವು ಪ್ರಾರಂಭವಾಗಿ ಎರಡು ದಶಕ ಕಳೆದಿದೆ. ಅಂದಿನಿoದ ಇಂದಿವರೆಗೂ 2154 ಸದಸ್ಯರನ್ನು ಒಳಗೊಂ ಡಿದ್ದು 9.14ಕೋಟಿ ಸಾಲ ವಿತರಿಸಿದೆ. ಜೊತೆಗೆ 66 ಲಕ್ಷ ಷೇರು ಹಣವನ್ನು ಹೊಂದಿದ್ದು 13 ಕೋಟಿ ಠೇವಣಿ ಸಂಗ್ರಹಿಸುವ ಮೂಲಕ 37 ಕೋಟಿ ರೂ. ವ್ಯವಹಾರವನ್ನು ನಡೆಸಿ ಪ್ರಸ್ತುತ ವರ್ಷ 13.94 ಲಕ್ಷ ರೂ. ನಿವ್ವಳ ಲಾಭ ವನ್ನು ಗಳಿಸಿಕೊಂಡಿದೆ ಎಂದರು.

ಕಳೆದ 2 ವರ್ಷಗಳಲ್ಲಿ ಸಂಘವು ಸುಸಜ್ಜಿತವಾಗಿ ಸ್ವಂತ ಕಟ್ಟಡವನ್ನು ಹೊಂದಿದೆ. ಸಹಕಾರ ಸಂಘಕ್ಕೆ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಲಿಪ್ಟ್ ಅಳವಡಿಸುವ ಮೂಲಕ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಸಂಘದ ಮಾಜಿ ಅಧ್ಯಕ್ಷ ಬಿ.ಸಿ.ಲೋಕಪ್ಪಗೌಡ ಮಾತನಾಡಿ ಸಂಘದ ಸದಸ್ಯರು ಹೆಚ್ಚಿನ ವ್ಯವಹಾರ ಮಾಡು ವುದರ ಮೂಲಕ ಸಂಘವನ್ನು ಅಭಿವೃಧ್ದಿಪಥದತ್ತ ಕೊಂಡೊಯ್ಯುತ್ತಿರುವುದು ಸ್ವಾಗತಾರ್ಹ. ಇದೇ ರೀತಿ ಮುಂದಿನ ದಿನಗಳಲ್ಲೂ ಸಂಪೂರ್ಣ ಬೆಂಬಲ ನೀಡುವ ಮೂಲಕ ಜಿಲ್ಲಾ ಸಂಘವು ರಾಜ್ಯಮಟ್ಟದಲ್ಲಿ ಹೆಸರು ಗಳಿಸುವಂ ತಾಗಲಿ ಎಂದು ಶುಭ ಕೋರಿದರು.

ಇದೇ ವೇಳೆ ವ್ಯವಸ್ಥಾಪಕ ಸಿ.ಎಂ.ನಾರಾಯಣಸ್ವಾಮಿ 2022-23ನೇ ಸಾಲಿನ ವರದಿಯನ್ನು ಮಂಡಿಸಿದರು.

Co-operative Society of Graduates ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೆ.ವೆಂಕಟೇಶ್ ಪೈ, ಯು.ಟಿ.ನಾಗರಾಜು, ಎಂ.ಸಿ.ಶಿವಾನoದ ಸ್ವಾಮಿ, ಬಿ.ಟಿ.ಗೋಪಾಲಗೌಡ, ಬಿ.ಹೆಚ್.ಶಂಕರ್, ಗಂಗೇಗೌಡ, ಡಿ.ಬಿ.ದೀಪಕ್, ಎಂ.ಎಸ್.ಉಮೇಶ್‌ಕುಮಾರ್, ಬಿ.ಎಸ್. ಪ್ರಶಾಂತ್, ಶ್ರೀಮತಿ ಅನುಪಮ, ಗೀತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...