State Government Employees ರಾಜ್ಯ ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ಶೇ. 17ರಷ್ಟು ಮಧ್ಯಂತರದ ಸೌಲಭ್ಯವನ್ನು ಮಂಜೂರು ಮಾಡಿದ್ದುö, ಇದನ್ನು ಪಿಂಚಣಿದಾರರಿಗೆ ವಿಸ್ತರಣೆ ಮಾಡುವ ಸಲುವಾಗಿ ಸರ್ಕಾರದ ಕಾರ್ಯದರ್ಶಿ ಗಳಿಗೆ ಮನವಿ ಮಾಡಿದ ಹಿನ್ನೆಲೆ ಕಳೆದ 2023ರ ಏ. 1ರಿಂದಲೇ ಜಾರಿಗೆ ಬರುವಂತೆ ರಾಜ್ಯ ಸಂಚಿತ ನಿಧಿಯಿಂದ ಪಾವತಿಸಲು ಆದೇಶ ಮಾಡಿದ್ದಾರೆ ಎಂದು ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್. ನಾರಾಯಣಾ ಚಾರ್ ಮತ್ತು ನಿವೃತ್ತ ಕಂದಾಯಾಧಿಕಾರಿ ಗುತ್ತಿ ಕನ್ನಪ್ಪ ಅವರು ತಿಳಿಸಿದ್ದಾರೆ.
ಈ ಒಂದು ಉತ್ತಮ ಕಾರ್ಯವನ್ನು ಒಂದೇ ದಿನದಲ್ಲಿ ಅನುಷ್ಠಾನಕ್ಕೆ ಬರುವಂತೆ ಮಾಡಿದ ಪೌರಾಢಳಿತ ನಿರ್ದೇಶಕಿ ಮಂಜುಶ್ರೀ ಅವರಿಗೂ ಮತ್ತು ಇದಕ್ಕೆ ವಿಶೇಷ ಕಾಳಜಿ ವಹಿಸಿದ ನಗರಾಭಿವೃದ್ಧಿ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್ ಅವರಿಗೆ ಸತ್ಯನಾರಾಯಣಾಚಾರ್ ಕೃತಜ್ಞತೆ ಸಲ್ಲಿಸಿದ್ದಾರೆ.
State Government Employees ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅಂಗೀಕರಿಸಿ ಸರ್ಕಾರ ಮಂಜೂರು ಮಾಡಿದ ನಂತರ ಸರ್ಕಾರಿ ನೌಕರರಿಗೆ, ನಿವೃತ್ತಿ ನೌಕರರಿಗೆ ಹೊರಡಿಸುವ ಆದೇಶದಲ್ಲಿಯೇ ಸೇರ್ಪಡೆ ಮಾಡಿ ಅನಗತ್ಯವಾಗಿ ರಾಜಧಾನಿಗೆ ಅಲೆದಾಡುವುದನ್ನು ತಪ್ಪಿಸಬೇಕೆಂದು ಅವರು ಸರ್ಕಾರಕ್ಕೆ ಈ ಮೂಲಕ ಮನವಿ ಮಾಡಿದ್ದಾರೆ.