Uttaradi Math ಅವಿಭಕ್ತ ಕುಟುಂಬ ಪದ್ಧತಿ ಮತ್ತೆ ಬರಬೇಕಿದೆ. ಅದನ್ನು ನೋಡುವುದೇ ಒಂದು ಸಂತೋಷ. ಹೀಗೆ ಬದುಕುವುದೇ ಸ್ತುತ್ಯವಾದದ್ದು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಹೊಳೆಹೊನ್ನೂರಿನಲ್ಲಿ
ಗುರುವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶದ ನೀಡಿದರು.
Uttaradi Math ಈಗ ಕಾಲ ಬದಲಾಗಿದೆ. ಪ್ರಸ್ತುತ ಗಂಡ-ಹೆoಡತಿ ಇಬ್ಬರೂ ಒಟ್ಟಿಗೆ ಇರುವುದೇ ಅವಿಭಕ್ತ ಕುಟುಂಬ ಎನ್ನುವಂತೆ ಹೇಳುವ ಘೋರವಾದ ಸ್ಥಿತಿ ಇದೆ. ಎಂತಹ ಕಷ್ಟ ಬಂದರೂ ಒಟ್ಟಿಗೆ ಬಾಳುವ ಮನಸ್ಥಿತಿ ರೂಢಿಸಿಕೊಳ್ಳಬೇಕು. ನೂರಾರು ಜನರು ಒಂದೇ ಮನೆಯಲ್ಲಿ ಸುಖವಾಗಿ ಇರುತ್ತಿದ್ದ ನಮ್ಮ ಸಂಸ್ಕೃತಿಯಲ್ಲಿ ಇಂದು ಗಂಡ ಹೆಂಡತಿಯ ನಡುವೆ ಸಾಮರಸ್ಯ ಕಡಿಮೆಯಾಗುತ್ತಿದೆ ಎಂದರೆ ಎಂತಹ ಅನರ್ಥ ಎಂದರು.