Painting Competition ಶಿವಮೊಗ್ಗ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಗಣೇಶ ಚತುರ್ಥಿ ಪ್ರಯುಕ್ತ ಆಯೋಜಿಸಿದ್ದ ಶಿವಮೊಗ್ಗ ನಗರದ ಅಂತರ ಶಾಲಾ ಗಣಪ ಚಿತ್ರ ರಚನಾ ಸ್ಪರ್ಧೆಯಲ್ಲಿ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಎಲ್ ಕೆ ಜಿ ಯಿಂದ 10ನೇ ತರಗತಿವರೆಗಿನ ಬಹುಮಾನಿತರ ಪಟ್ಟಿಯನ್ನು ರಾಮಕೃಷ್ಣ ವಿದ್ಯಾನಿಕೇತನ ಬಿಡುಗಡೆ ಮಾಡಿದೆ.
ಬಹುಮಾನವನ್ನು ಸೆ. 24ರ ಭಾನುವಾರ ಶಾಲಾ ಆವರಣದಲ್ಲಿ ಮಧ್ಯಾಹ್ನ 2 ಗಂಟೆಗೆ ವಿತರಿಸಲಿದ್ದು ವಿಜೇತರು ಹಾಗೂ ಪೋಷಕರು ಆಗಮಿಸುವಂತೆ ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾ ವೆಂಕಟರಮಣ ವಿನಂತಿಸಿದ್ದಾರೆ.
ವಿಜೇತರ ಪಟ್ಟಿ ಇಂತಿದೆ
ಹತ್ತನೇ ತರಗತಿ: ಮೊದಲ ಸ್ಥಾನ ರಾಮಕೃಷ್ಣ ವಿದ್ಯಾನಿಕೇತನದ ಧನ್ಯ ಬಿದರೆ, ಕಸ್ತೂರ ಬಾ ಬಾಲಕಿಯರ ಕಾಲೇಜಿನ ಸಿಂಚನ ಕೆ.ಎನ್. ದ್ವಿತೀಯ ಸ್ಥಾನ ಪಡೆದಿದ್ದು ರಾಮಕೃಷ್ಣ ವಿದ್ಯಾನಿಕೇತನದ ಕೀರ್ತನ ಅವರು ತೃತೀಯ ಸ್ಥಾನ ಪಡೆದಿದ್ದಾರೆ.
9ನೇ ತರಗತಿ: ಮಾನಸ ವಿದ್ಯಾಲಯದ ಸುಶೇಂದ್ರ ಎಸ್ ಪ್ರಥಮ ಸ್ಥಾನ ಪಡೆದಿದ್ದರೆ, ರಾಮಕೃಷ್ಣದ ಅನುಪ್, ಸಿದ್ದಾರ್ಥ್ ನಂತರದ ಸ್ಥಾನಗಳನ್ನು ಪಡೆದಿದ್ದಾರೆ.
ಎಂಟನೇ ತರಗತಿ: ರಾಮಕೃಷ್ಣದ ನೇಹಾ ಹೊಸಮನೆ, ನೂತನ್ ವಿ ಶೇಟ್ ಮೊದಲಿನ ಎರಡು ಸ್ಥಾನ ಪಡೆದಿದ್ದರೆ, ಮಾನಸ ವಿದ್ಯಾಲಯದ ಅಭಿಜ್ಞಾ ಮೂರನೇ ಸ್ತಾನ ಪಡೆದಿದ್ದಾರೆ.
ಏಳನೇ ತರಗತಿ: ಪ್ರಥಮ ಸ್ಥಾನವು ದುರ್ಗಿಗುಡಿ ಶಾಲೆಯ ಅಭಿಷೇಕ್ ಕೆ. ಅವರಿಗೆ ಲಭಿಸಿದ್ದರೆ, ಉಳಿದ ಎರಡು ಸ್ಥಾನಗಳನ್ನು ರಾಮಕೃಷ್ಣದ ಕಾರ್ತಿಕ್ ಎಸ್ ರಾಯ್ಕರ್, ಹಾಗೂ ದಿಶಾ ಎನ್ ಜೋಯ್ಸ್ ಅವರು ಪಡೆದಿದ್ದಾರೆ.
6ನೇ ತರಗತಿ: ರಾಮಕೃಷ್ಣ ಶಾಲೆಯ ನಿಧಿ ಪ್ರಥಮ ಸ್ಥಾನ ಪಡೆದಿದ್ದರೆ, ಮೋಹಿತ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಅಂತೆಯೇ ದುರ್ಗಿಗುಡಿ ಶಾಲೆಯ ಆರ್ ಕುಶಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಐದನೇ ತರಗತಿ; ಸಿ ಕೌಸ್ತುಬ್ ಹೊಳ್ಳ ಪ್ರಥಮ ಸ್ಥಾನ ಪಡೆದಿದ್ದರೆ, ರಾಮಕೃಷ್ಣದ ಅಭಿಜ್ಞಾ ದ್ವಿತೀಯ, ವಾಸವಿ ಪಬ್ಲಿಕ್ ಸ್ಕೂಲ್ ನ ದೃತಿ ಎಸ್ ಪಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ನಾಲ್ಕನೇ ತರಗತಿ: ರಾಮಕೃಷ್ಣದ ನಂದಿತಾ ಹಾಗೂ ಆಯುಷ್ ಎಸ್ ಮೊದಲ ಹಾಗೂ ಮೂರನೇ ಸ್ಥಾನ ಪಡೆದಿದ್ದರೆ, ದುರ್ಗಿಗುಡಿ ಬಾಲಕರ ಶಾಲೆಯ ಕೌಶಿಕ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಮೂರನೇ ತರಗತಿ: ರಾಮಕೃಷ್ಣದ ಆದ್ಯ ಜಿ ಹಾಗೂ ಪಂಚಮಿ ಎ.ಎಸ್. ಅವರು ಕ್ರಮವಾಗಿ ಮೊದಲ ಹಾಗೂ ಮೂರನೇ ಸ್ಥಾನ ಪಡೆದಿದ್ದು ಮಾನಸ ವಿದ್ಯಾಲಯದ ಅನುಜ್ಞಾ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಎರಡನೇ ತರಗತಿ: ರಾಮಕೃಷ್ಣದ ಸಾನ್ವಿ , ಶಮಂತ್, ಅನನ್ಯ ಮೊದಲ ಮೂರು ಸ್ಥಾನವನ್ನು ಕ್ರಮವಾಗಿ ಪಡೆದಿದ್ದಾರೆ.
ಒಂದನೇ ತರಗತಿ: ರಾಮಕೃಷ್ಣ ಶಾಲೆಯ ಲಾವಣ್ಯ ಜಿ ಹಾಗೂ ಐಶ್ವರ್ಯ ಅವರು ಪ್ರಥಮ ಸ್ಥಾನ ಪಡೆದಿದ್ದು, ಸನತ್ ಹಾಗೂ ದಿಶಾ ಎರಡು ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ.
ಅಂತೆಯೇ ಎಲ್ ಕೆ ಜಿಯಲ್ಲಿ ರಾಮಕೃಷ್ಣದ ಪುನರ್ವಿ, ಉಜ್ವಲ್, ಶ್ರೇಯ ಅವರು ಮೊದಲ ಮೂರು ಸ್ಥಾನ ಪಡೆದಿದ್ದರೆ, ಯುಕೆಜಿಯಲ್ಲಿ ಆಧ್ಯಾ ಪಿ.ಸಿಂಧೆ, ರಿಷಬ್ ದೇವಾಡಿಗ, ಅದ್ವಿಕ್ ಮೊದಲ ಮೂರು ಸ್ಥಾನ ಪಡೆದಿದ್ದಾರೆ.
Painting Competition ಪ್ರತಿ ತರಗತಿ ವಿಭಾಗದಲ್ಲಿ ತಲಾ ಇಬ್ಬರಿಗೆ ಸಮಾಧಾನಕರ ಬಹುಮಾನವನ್ನು ಘೋಷಿಸಲಾಗಿದ್ದು, ಅವರುಗಳಿಗೆ ಆಯಾ ಶಾಲೆಗಳಲ್ಲಿ ಮಾಹಿತಿ ನೀಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವಂತೆ ವಿದ್ಯಾಸಂಸ್ಥೆ ಕೋರಿದೆ.