Ganeshotsav at Megan Nurse’s Quarters ಮೆಗ್ಗಾನ್ ನರ್ಸ್ ಕ್ವಾಟ್ರರ್ಸ್ ನಲ್ಲಿ ಈ ಬಾರಿ ವಿಶಿಷ್ಟವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಮೆಗ್ಗಾನ್ ಶ್ರೀ ಆರೋಗ್ಯ ಗಣಪತಿ ಪ್ರತಿಷ್ಠಾಪಿಸಲಾಗಿದೆ.
ಕಳೆದ 10 ವರ್ಷಗಳಿಂದ ಇಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಪ್ರತಿ ವರ್ಷ ಕೇವಲ ಅನ್ನ ಸಂತರ್ಪಣೆ ಮಾಡಲಾಗುತ್ತಿತ್ತು. ಮೂರು ವರ್ಷಗಳಿಂದ ಕ್ವಾಟ್ರರ್ಸ್ನ ಮಹಿಳೆಯರು, ಮಕ್ಕಳಿಗೆ ವಿಶೇಷ ಕ್ರೀಡಾಕೂಟ, ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಮಾಡಲಾಗುತ್ತಿದೆ.
ಆದರೆ, ಈ ಬಾರಿ ಕ್ವಾಟ್ರಸ್‌ನ ಬ್ರರ‍್ಸ್ಗಳು ಮತ್ತು ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿಗಳು ರಕ್ತದಾನ ಮಾಡುವ ಮೂಲಕ ವೈಶಿಷ್ಟ್ಯ ವನ್ನು ಮೆರೆದಿದ್ದು, ಗಣೇಶೋತ್ಸವದಲ್ಲಿ ನಿಜವಾದ ಆರೋಗ್ಯೋತ್ಸವ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮೆಗ್ಗಾನ್‌ನ ವೈದ್ಯಕೀಯ ಅಧೀಕ್ಷ ಡಾ. ಟಿ.ಡಿ. ತಿಪ್ಪಮ್ಮ, ಗಣೇಶೋತ್ಸವ ಎಂದರೆ ಕೇವಲ ಹಾಡು, ಕುಣಿತ ಎಂಬ ಭಾವನೆ ಇದೆ. ಆದರೆ, ಇಂದು ನಮ್ಮ ಸಿಬ್ಬಂದಿಗಳು ರಕ್ತದಾನ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದರು
ಸಿಮ್ಸ್ನ ನಿರ್ದೇಶಕ ವಿರೂಪಾಕ್ಷಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ರಕ್ತದಾನ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್, ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣ ಹೆಚ್.ಟಿ. ಉಪಸ್ಥಿತರಿದ್ದರು.
Ganeshotsav at Megan Nurse’s Quarters ಬ್ರದರ್‌ಗಳಾದ ಎಂ.ಆರ್. ಸಂತೋಷ್, ದಕ್ಷಣಿಮೂರ್ತಿ, ಅಶೋಕ್, ಸಂತೋಷ, ಕುಮಾರ, ಹನುಮಂತಪ್ಪ, ಗೀತೇಶ್, ಶ್ರೀನಿವಾಸನಾಯ್ಡು, ಜಯಂತ್, ರಘು, ಸೇರಿದಂತೆ ಹಲವರು ರಕ್ತದಾನ ಮಾಡಿದರು.
ಸೆ.24ರ ಭಾನುವಾರ ಗಣಹೋಮ, ಅನ್ನಸಂತರ್ಪಣೆಯ ನಂತರ ಸಂಜೆ 5.30ಕ್ಕೆ ರಾಜಬೀದಿ ಉತ್ಸವ ನಡೆಸಿ ಮೆಗ್ಗಾನ್ ಶ್ರೀ ಆರೋಗ್ಯ ಗಣಪತಿ ವಿಸರ್ಜನೆ ಮಾಡಲಾಗುತ್ತದೆ. ಸಮಸ್ತ ಭಕ್ತಾದಿಗಳು ಪಾಲ್ಗೊಳ್ಳುವಂತೆ ಗಣೇಶೋತ್ಸವ ಸಮಿತಿ ಕೋರಿದೆ.