Uttaradi Math ಅನ್ಯಾಯ, ಅನಾಚಾರ ಮಾಡಿದರೆ ದೇವರು ಒಂದಲ್ಲಾ ಒಂದು ದಿನ ಸರ್ಜಿಕಲ್ ಸ್ಟೆçöÊಕ್ ಮಾಡಿಯೇ ಮಾಡುತ್ತಾನೆ. ಈ ಬಗ್ಗೆ ಸದಾ ಎಚ್ಚರ ಇಟ್ಟುಕೊಳ್ಳಿ ಎಂದು ಉತ್ತರಾದಿ ಮಠಾಧಿಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಹೊಳೆಹೊನ್ನೂರಿನಲ್ಲಿ
ಬುಧವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶದ ನೀಡಿದರು.
ಭ್ರಷ್ಟಾಚಾರ, ಕಳ್ಳತನ ಮಾಡಿದರೆ ಅನಂತ ದುಃಖವನ್ನು ಅನುಭವಿಸುತ್ತಾರೆ. ಆದರೂ ಅವರಿಗೆ ಅನ್ಯಾಯದ ಅರ್ಥ ಆಗುವುದಿಲ್ಲಘಿ. ಅನ್ಯಾಯದ ಹಣವನ್ನು ದಕ್ಕಿಸಿಕೊಳ್ಳಲು ಸಾಧ್ಯವೇ ಇಲ್ಲಘಿ. ದೇವರು ಮಾಡಿದ ನಿಯಮಕ್ಕೆ ವಿರುದ್ಧವಾಗಿ ಮನುಷ್ಯ ನಡೆದರೆ ಸುಮ್ಮನೆ ಕೂರಲು ಅವನೇನು ದೇವರು ನಪುಂಸಕನೇ? ಎಂದರು.
ದೇವರಿಗೆ ಹೇಡಿತನ ಇಲ್ಲಘಿ. ಹೀಗಾಗಿ ನಿಶ್ಚಿತವಾಗಿ ಅನಾಚಾರಿಗಳಿಗೆ ಶಿಕ್ಷೆ ಆಗಿಯೇ ಆಗುತ್ತದೆ. ಮೊದಲು ಅಧರ್ಮದಿಂದ ವೃದ್ಧಿಯಾಗಲು ಬಿಡುತ್ತಾನೆ. ತಿದ್ದಿಕೊಳ್ಳುತ್ತಾನಾ ನೋಡುತ್ತಾನೆ. ಬದಲಾಗದಿದ್ದರೆ ಕೊನೆಗೆ ಒಂದು ದಿನ ತಕ್ಕಶಾಸ್ತಿ ಮಾಡುತ್ತಾನೆ. ದೇವರ ನಿಗ್ರಹಕ್ಕೆ ಗುರಿಯಾಗುವ ಯಾವ ಅಧರ್ಮ ಮಾಡಬೇಡಿ ಎಂದು ಶ್ರೀಗಳು ಎಚ್ಚರಿಸಿದರು.
ಯುವತಿಯರು ದುರ್ಗೆಯನ್ನು ಸ್ಮರಿಸಿ :
ಎಲ್ಲ ಸಜ್ಜನರೂ, ಅದರಲ್ಲೂ ಸೀಯರು, ವಿಶೇಷವಾಗಿ ಯುವತಿಯರು ಉತ್ತಮವಾದ ಬ್ರಹ್ಮಚರ್ಯದಿಂದ ಜೀವನ ನಡೆಸಬೇಕು. ಅದರಲ್ಲೂ ತಮ್ಮ ವಿವಾಹಪೂರ್ವದಲ್ಲಿ ಬ್ರಹ್ಮಚರ್ಯವನ್ನು ಕಾಪಾಡಿಕೊಳ್ಳಬೇಕು. ಶುದ್ಧವಾದ ಚಾರಿತ್ರ‍್ಯ ಸಂಪನ್ನರಾಗಿ ಬಾಳಿ ಬೆಳಗಬೇಕು. ಅದಕ್ಕಾಗಿ ದುರ್ಗೆಯ ಸ್ಮರಣೆ ಮಾಡಬೇಕು. ದುರ್ಗಾ ಸುಳಾದಿಯನ್ನು ನಿತ್ಯ ಹೇಳಬೇಕು ಎಂದು ಸ್ವಾಮಿಗಳು ಸಲಹೆ ನೀಡಿದರು.
Uttaradi Math ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ಮಠದ ದಿವಾನರಾದ ಶಶಿ ಆಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ನವರತ್ನ ರಾಮಾಚಾರ್ಯ, ಕಡೂರು ಮಧುಸೂಧನಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಕಲ್ಲಾಪುರ ಜಯತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾಚಾರ್ಯ ಮೊದಲಾದವರಿದ್ದರು.