Dalit Conflict Committee ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿರುವುದನ್ನು ಖುಲ್ಲಾ ಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಬಳಕೆ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಸಂಬoಧ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಹೆಚ್.ಡಿ.ರಾಜೇಶ್ ಅವರಿಗೆ ದಸಂಸ ಮುಖಂಡರುಗಳು ಮಂಗಳವಾರ ಮನವಿ ತಾಲ್ಲೂಕಿನ ಅಂಬಳೆ ಹೋಬಳಿಯ ಕದ್ರಿಮಿದ್ರಿ ಗ್ರಾಮದ ಸರ್ವೆ ನಂ.273 ರಲ್ಲಿ ಅನಧಿಕೃತವಾಗಿ ಮನೆ ಹಾಗೂ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಖುಲ್ಲಾಗೊಳಿಸಬೇಕು ಎಂದು ಆಗ್ರಹಿಸಿದರು.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ ರಾಂಪುರ ಗ್ರಾಮದ ಮಹಿಳೆಯೊಬ್ಬರು ಅನಧಿಕೃತವಾಗಿ 3 ಎಕರೆ ಜಾಗದಲ್ಲಿ ಮನೆ ಹಾಗೂ ಅನಧಿಕೃತವಾಗಿ ಸಾಗುವಳಿ ಮಾಡಿಕೊಂಡಿದ್ದು ಈ ಬಗ್ಗೆ 94 ಸಿಗೆ ಅರ್ಜಿ ಸಲ್ಲಿಸಿದ್ದು ಈ ಅರ್ಜಿಯು ವಜಾವಾಗಿರುತ್ತದೆ ಎಂದರು.
ಜಾಗ ತೆರವುಗೊಳಿಸುವ ಸಂಬoಧ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಲು ಆದೇಶಿದೆ. ನಗರದಿಂದ ವ್ಯಾಪ್ತಿಯಲ್ಲಿ ಈ ಸರ್ವೆ ನಂಬರ್ ಇರುವುದರಿಂದ ಸಾಗುವಳಿ ಚೀಟಿ ನೀಡಲು ಬರುವು ದಿಲ್ಲ. ಈ ಬಗ್ಗೆ ತಹಶೀಲ್ದಾರ್ ಕ್ರಮ ಕೈಗೊಂಡಿದ್ದರೂ ಜಾಗ ಖುಲ್ಲಾಗೊಳಿಸಿಲ್ಲ ಎಂದರು.
ಈಗಾಗಲೇ ಗ್ರಾಮದ ಮಹಿಳೆಯ ಬಳಿ ವಾಸದ ಮನೆ, ಕುಟುಂಬದ ಮಕ್ಕಳು ಹಾಗೂ ಗಂಡನ ಹೆಸರಿನಲ್ಲಿ ಹಲವಾರು ನಿವೇಶನಗಳಿವೆ. ಇದಕ್ಕೆ ಸಂಬoಧಿಸಿದoತೆ ಹಿಂದಿನ ಬಾರಿ ದಸಂಸ ಮುಖಂಡರುಗಳು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
Dalit Conflict Committee ಸರ್ಕಾರಿ ಜಾಗವಾಗಿರುವ ಈ ಸರ್ವೆ ನಂಬರ್‌ನಲ್ಲಿ ಭೂ ಅಧಿನಿಯಮದ ಪ್ರಕಾರ ತೆರವುಗೊಳಿಸಿ ಸರ್ಕಾರದ ಯಾವುದಾದರೂ ಯೋಜನೆಗೆ ಬಳಸಿಕೊಳ್ಳಬೇಕು. ಈ ಕೂಡಲೇ ಜಾಗದ ವಿಚಾರವಾಗಿ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ದಸಂಸ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಮಹೇಂದ್ರ ಸ್ವಾಮಿ, ಮುಖಂಡರಾದ ಸುಂದ್ರೇಶ್, ಸ್ವಾಮಿ ಹಾಜರಿದ್ದರು.