Krishna Byre Gowda ರಾಜ್ಯಾದ್ಯಂತ ಅ.1 ರಿಂದ ನಿವೇಶನ, ಕಟ್ಟಡ , ಭೂಮಿ ಇನ್ನಿತರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಯಾಗಲಿದೆ.
ಸರಾಸರಿ ಆಸ್ತಿಗಳ ಮೌಲ್ಯ ಶೇ.30ರವರೆಗೆ ಹೆಚ್ಚಳವಾಗಲಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.
ಅವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ನೊಂದಣಿ ಕಾಯ್ದೆಯ ಪ್ರಕಾರ ಪ್ರತಿ ವರ್ಷವೂ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕಣೆ ಮಾಡಬೇಕಿತ್ತು. ಐದು ವರ್ಷಗಳಿಂದ ಈ ಪ್ರಕ್ರಿಯೆ ನಡೆದಿರಲಿಲ್ಲ. ಈ ಬಾರಿ ಹಂತ ಹಂತವಾಗಿ ಕರಡು ಪಟ್ಟಿಗಳನ್ನ ಪ್ರಕಟಿಸಿದೆ. ಅಕ್ಟೋಬರ್ ಒಂದರಂದು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಹೇಳಿದರು.
Krishna Byre Gowda ಮಾರುಕಟ್ಟೆ ದರವನ್ನೇ ಆಧಾರವಾಗಿಟ್ಟುಕೊಂಡು ಹಿಂದಿನ ಲೋಪಗಳನ್ನ ಸರಿಪಡಿಸುವ ಪ್ರಯತ್ನ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ದರಗಳ ಮಧ್ಯೆ ಭಾರಿ ಅಂತರವಿದೆ. ಅಂತಹ ಕಡೆಗಳಲ್ಲಿ ಮಾರ್ಗಸೂಚಿ ದರವನ್ನು ಶೇ.30ರಷ್ಟು ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.