Ganesh Chaturthi ಚಿಕ್ಕಮಗಳೂರು, ನಗರದ ಗೌರಿಕಾಲುವೆ ಶನೇಶ್ವರ ಸ್ವಾಮಿ ದೇವಾಲಯ ಸಮೀಪ ಛಾಯಾ ಪುತ್ರ ಯುವಕರ ಸಂಘದ ವತಿಯಿಂದ ಶ್ರೀ ವಿದ್ಯಾಗಣಪತಿ ಮೂರ್ತಿಯನ್ನು ವಾರ್ಡಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಅತ್ಯಂತ ವಿಜೃಂಭಣೆಯಿಂದ ಕರೆತಂದು ಪ್ರತಿಷ್ಟಾಪಿಸಲಾಯಿತು.
ಸೆ.19 ರಂದು ಸಂಜೆ 6ಗಂಟೆಗೆ ಸ್ಥಳೀಯ ಕಲಾವಿದರಿಂದ ವಿವಿಧ ಕಾರ್ಯಕ್ರಮ. ಸೆ.20 ರಂದು ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ರಂಗೋಲಿ ಸ್ಪರ್ಧೆ, ಮಕ್ಕಳ ಆಟೋಟ ಸ್ಪರ್ಧೆ ಹಾಗೂ ಅದೃಷ್ಟ ಬಹುಮಾನ ಯೋಜ ನೆಯ ಡ್ರಾ ಫಲಿತಾಂಶ ಪ್ರಕಟವಾಗಲಿದೆ.
ಸೆ.21 ರಂದು ಸಂಜೆ 6 ಗಂಟೆಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯ ಕ್ರಮವಿದೆ. ಸೆ.22 ರಂದು ವಿವಿಧ ಹೋಮ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗಿವಿದೆ.
ಸಂಜೆ. 6 ಗಂಟೆಗೆ ಡೈಮಂಡ್ ವಾಯ್ಸ್ ಭದ್ರಾವತಿ ತಂಡದಿoದ ಆರ್ಕೆಸ್ಟ್ರಾ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ.
Ganesh Chaturthi ಕೊನೆಯ ದಿನವಾದ ಸೆ.24 ರಂದು ಬೆಳಿಗ್ಗೆ 8ಕ್ಕೆ ಪೂಜಾ ಕಾರ್ಯಕ್ರಮ. ಮಧ್ಯಾಹ್ನ 3ಗಂಟೆಗೆ ಶ್ರೀಯವ ರನ್ನು ಭವ್ಯವಾದ ಅಲಂಕೃತ ಮಂಪಟದಲ್ಲಿ ಕುಳ್ಳಿರಿಸಿ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆಯೊಂದಿಗೆ ಶ್ರೀಯವರನ್ನು ವಿಸರ್ಜಿಸಲಾಗುವುದು ಎಂದು ಯುವಕರ ಸಂಘದ ಪ್ರಕಟಣೆಯಲ್ಲಿ ತಿಳಿಸಿದೆ.