Monday, December 15, 2025
Monday, December 15, 2025

Postal Department Employees’ Co-operative Society ಚಿಕ್ಕಮಗಳೂರು ಅಂಚೆ ಇಲಾಖೆ ನೌಕರರ ಸಹಕಾರ ಸಂಘಕ್ಕೆ ವಾರ್ಷಿಕ ₹ 15 ಲಕ್ಷ ಲಾಭ

Date:

Postal Department Employees’ Co-operative Societyಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘವು ಪ್ರಸ್ತುತ ಸಾಲಿನಲ್ಲಿ 15 ಲಕ್ಷ ರೂ. ನಿವ್ವಳ ಲಾಭಗಳಿಸುವ ಮೂಲಕ ಆರ್ಥಿಕವಾಗಿ ಮುನ್ನೆಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಸಿ.ಭಾಸ್ಕರ್ ಹೇಳಿದರು.

ಚಿಕ್ಕಮಗಳೂರು ನಗರದ ಶಾರದಾ ಪೈ ಕಲ್ಯಾಣ ಮಂಟಪದಲ್ಲಿ ಚಿಕ್ಕಮಗಳೂರು ಅಂಚೆ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘದಲ್ಲಿ ಈಗಾಗಲೇ ಸದಸ್ಯರಿಗೆ 2.5 ಕೋಟಿಗೂ ಹೆಚ್ಚು ಸಾಲ ವಿತರಿಸಿ ಬಳಿಕ ಶೇ.90ರಷ್ಟು ಸಾಲವನ್ನು ವಸೂಲಿ ಮಾಡಲಾಗಿದೆ. ಪ್ರಸ್ತುತ ಸಂಘದಲ್ಲಿ 1300ಕ್ಕೂ ಹೆಚ್ಚು ಮಂದಿ ಸದಸ್ಯರಾಗಿರುವುದು ಸಂಘದ ಬೆಳವಣ ಗೆಗೆ ಮೂಲ ಕಾರಣವಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ಸ್ಥಾಪಿಸುವ ಗುರಿ ಹೊಂದಿದ್ದು ಅದರಂತೆ ಒಂದು ನಿವೇಶನ ಅಥವಾ ಕಟ್ಟಡವನ್ನು ಖರೀದಿ ಮಾಡಲು ತೀರ್ಮಾನಿಸಿದ್ದು ಕೆಲವೇ ದಿನಗಳಲ್ಲಿ ಕಾರ್ಯಕತಕ್ಕೆ ಮುಂದಾಗಲಾಗುವುದು ಎಂದು ಹೇಳಿದರು.

Postal Department Employees’ Co-operative Society ಸಂಘದ ಸದಸ್ಯರು ಅತಿಹೆಚ್ಚು ಸಂಖ್ಯೆಯಲ್ಲಿ ಸಂಘಕ್ಕೆ ಠೇವಣ ಇರಿಸಿದರೆ ಸಂಘವು ಆರ್ಥಿಕವಾಗಿ ಮುಂದು ವರೆಯಲು ಸಾಧ್ಯ. ಜೊತೆಗೆ ಸಂಕಷ್ಟದಲ್ಲಿರುವ ಸದಸ್ಯರುಗಳಿಗೆ ಸಾಲ ವಿತರಿಸಿ ಅವರಿಂದ ಬರುವಂತಹ ಬಡ್ಡಿಯಿಂದ ಸಂಘವು ಹಾಗೂ ಸದಸ್ಯರು ಉತ್ತಮವಾಗಿ ಬೆಳವಣ ಗೆಯಾಗಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ನಾಗಭೂಷಣ್, ನಿರ್ದೇಶಕರುಗಳಾದ ಹೆಚ್.ಎಲ್.ಪ್ರಸನ್ನ ಕುಮಾರ್, ಹೆಚ್.ಟಿ.ಮಂಜಪ್ಪ, ಎಂ.ಸುಧಾ, ಬಿ.ಎನ್.ಸಚಿನ್‌ಕುಮಾರ್, ಎಸ್.ಡಿ.ಮಂಜಪ್ಪ, ಟಿ.ಎಸ್.ಬಸವರಾಜ್, ಬಿ.ಎಂ.ನಾಗರಾಜ್, ಹೆಚ್.ಸುಬ್ರಮಣ್ಯ, ರೋವಿನ ಮೇರಿ ಅನಿತಾ, ಆರ್.ಶ್ರೀನಿವಾಸ್, ಸೌರಭ್ ಆಸ್ಟಿಕರ್, ಬಿ. ಮಂಜಪ್ಪ, ಘನಲಿಂಗಮೂರ್ತಿ, ಸಿ.ಎಸ್.ಶಶಿಕುಮಾರ್, ಕಾರ್ಯದರ್ಶಿ ಮಧು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...