Monday, December 15, 2025
Monday, December 15, 2025

Police Chikkamagalur ಔಷಧ ವ್ಯಾಪಾರಿಗಳು ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು-ಡಾ.ವಿಕ್ರಮ್ ಅಮಟೆ

Date:

Police Chikkamagalur ಹದಿಹರೆಯ ಯುವಕರಿಗೆ ಮೆಡಿಕಲ್ ಶಾಪ್‌ಗಳಲ್ಲಿ ನಶೆ ಭರಿಸುವ ವಸ್ತು ಗಳು ವಿತರಿಸುವಾಗ ಜಾಗೃತರಾಗಿರಬೇಕು. ಯುವಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಾಮಾಜಿಕ ಬದ್ಧತೆ ಯಿಂದ ಕಾರ್ಯನಿರ್ವಹಿಸಬೇಕು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಹೇಳಿದರು.

ಚಿಕ್ಕಮಗಳೂರು ನಗರದ ಖಾಸಗೀ ಹೋಟೆಲ್‌ವೊಂದರಲ್ಲಿ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾನುವಾರ ಭಾಗವಹಿಸಿ ಮಾದಕ ವಸ್ತುಗಳ ಮಾರಾಟ ಹಾಗೂ ಅದರಿಂದಾಗುವ ದುಷ್ಪರಿಣಾ ಮದ ಕುರಿತು ಮಾತನಾಡಿದರು.

ಮಾದಕ ವಸ್ತುಗಳ ಅತಿಯಾಗಿ ಯುವಜನಾಂಗವನ್ನು ಕಾಡುತ್ತಿದೆ. ಇದರಿಂದ ಪ್ರತಿಯೊಬ್ಬರ ಮಕ್ಕಳು ತುತ್ತಾ ಗುವ ಸಂಭವಿರುವುದರಿಂದ ಔಷಧಿ ವ್ಯಾಪಾರಿಗಳು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿಕೊಂಡು ಕೆಲಸ ಮಾಡ ಬೇಕು. ಔಷಾಧಾಲಯಗಳಲ್ಲಿ ಸಿಬ್ಬಂದಿ ನೇಮಿಸಿಕೊಳ್ಳುವಾಗ ಪರಿಣ ತಿ ಹೊಂದಿರುವವರನ್ನು ಆಯ್ಕೆ ಮಾಡಿದರೆ ಮಾತ್ರ ನಶೆ ಎಂಬುದನ್ನು ದೂರಗೊಳಿಸಲು ಸಾಧ್ಯ ಎಂದರು.

ಪೊಲೀಸ್ ಇಲಾಖೆ ಮತ್ತು ಔಷಧಿ ವ್ಯಾಪಾರಿಗಳ ನಡುವೆ ಅನೋನ್ಯ ಸಂಬAಧ ಹೊಂದಿರಬೇಕು. ಸಮಾಜವನ್ನು ಆರೋಗ್ಯಯುತವಾಗಿ ಬೆಳೆಸುವಲ್ಲಿ ಔಷಧಾಲಯಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಅತಿಹೆಚ್ಚು ಮಾದಕ ವ್ಯಸನಿಗಳಾಗಿರುವ ವ್ಯಕ್ತಿಗಳ ಬಗ್ಗೆ ಇಲಾಖೆಗೆ ಮಾಹಿತಿಯನ್ನು ಖುದ್ದಾಗಿ ತಿಳಿ ಸುವ ಮೂಲಕ ಸದೃಢ ಸಮಾಜಕ್ಕೆ ಮುಂದಾಗಬೇಕು ಎಂದು ಸಲಹೆ ಮಾಡಿದರು.
ಸುಸ್ಥಿರ ಮನುಷ್ಯನ ಜೀವನಕ್ಕೆ ವೈದ್ಯರು ಎಷ್ಟು ಮುಖ್ಯವೋ, ಅದೇ ರೀತಿ ಔಷಧಾಲಯವು ಅತಿಮುಖ್ಯ ವಾಗಿದೆ. ಜನಸಾಮಾನ್ಯರಿಗೆ ಅನುಕೂಲವಾಗಲು ಮೆಡಿಕಲ್ ಶಾಪ್ ಪ್ರತಿದಿನವು ಸೇವೆ ಒದಗಿಸುತ್ತಿರುವುದು ಹೆಮ್ಮೆ ಯ ವಿಷಯ. ಆದರೆ ಕೆಲವರು ಹಣದ ಆಮಿಷಕ್ಕೊಳಗಾಗಿ ಯುವಕರಿಗೆ ನಶೆ ಭರಿಸುವ ವಸ್ತುಗಳನ್ನು ನೀಡು ತ್ತಿರುವುದು ವ್ಯವಹಾರಿಕವಾಗಿ ಸೂಕ್ತವಲ್ಲ ಎಂದು ಹೇಳಿದರು.

ಇತ್ತೀಚೆಗೆ ಕೆಲವು ಔಷಧಿ ವ್ಯಾಪಾರಿಗಳು ವೈದ್ಯರ ಶಿಪಾರಸ್ಸು ಅಥವಾ ಪರಿಚಯಾಧಾರದ ಮೇಲೆ ನಶೆ ಏರಿಸುವ ಔಷಧಿಗಳನ್ನು ವಿತರಿಸಲಾಗುತ್ತಿದ್ದು ಇಂತಹವರ ಬಗ್ಗೆ ಅಂಗಡಿದಾರರು ಮಾಹಿತಿ ನೀಡಬೇಕಾಗುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಖುದ್ದಾಗಿ ನಗರದ ಔಷಧಿ ವ್ಯಾಪಾರಿಗಳ ಸಭೆ ಆಯೋಜಿಸುವ ಮೂಲಕ ಕಾರ್ಯಾಗಾರ ರೂಪಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಸಹಾಯಕ ಔಷಧಿ ನಿಯಂತ್ರಕ ಬಿ.ಬಿ.ಓಂಕಾರೇಶ್ ಮಾತನಾಡಿ ನಶೆ ಪದಾರ್ಥ ಮಾರಾಟದ ಬಗ್ಗೆ ಇತ್ತೀಚೆಗೆ ಎಸ್ಪಿ ಕಚೇರಿಯಲ್ಲೂ ಸಭೆ ನಡೆಸಲಾಗಿದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವ ಔಷಧಾಲಯಗಳ ನ್ನು ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಆ ನಿಟ್ಟಿನಲ್ಲಿ ಪ್ರತಿಯೊಂದು ಔಷಧಿ ವ್ಯಾಪಾರಿಗಳು ಜವಾಬ್ದಾರಿಯುತ ವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

Police Chikkamagalur ಭಾರತವು ದೇಶದಲ್ಲಿ ಉತ್ಪಾದಿಸುವ ಔಷದಿಗಳು ೧೮೦ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತಿದೆ. ಆಯಾ ದೇಶ ಗಳಿಗೆ ನಿಯಮದಂತೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಆದ್ದರಿಂದ ಅತಿಹೆಚ್ಚು ಔಷಧಿಗಳನ್ನು ತಯಾ ರಿಸುವ ಮೊದಲೇ ಗುಣಮಟ್ಟದಿಂದ ಕೂಡಿರುವ ದೃಷ್ಟಿಯಿಂದ ಜಾಗೃತರಾಗಿ ಕೆಲಸ ಮಾಡಲಾಗುತ್ತಿದೆ ಎಂದರು.
ಮೆಡಿಕಲ್ ಶಾಪ್‌ಗಳಲ್ಲಿ ದೊರೆಯುವಂತಹ ಔಷಧಿಗಳನ್ನು ಗುಣಮಟ್ಟತೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆಯಿಂದ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊಂದು ಔಷಧಿ ಮಾರುಕಟ್ಟೆಗೆ ಬಿಡುವ ಮುಂಚೆಯೇ ಹಲವಾರು ಸ್ಯಾಂಪಲ್‌ಗಳನ್ನು ತಯಾರಿಸಿ ತದನಂತರ ಬಿಡುಗಡೆಗೊಳಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಔಷಧಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಎಸ್.ಶಿವಾನಂದ್ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಔಷಧಿ ವ್ಯಾಪಾರಿಗಳು ಸೇವಾಮನೋಭಾವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದು ನಶೆ ಭರಿಸುವ ವಸ್ತುಗಳ ವಿತರಿಸುವ ಸಂಬAಧ ಕಂಡುಬಂದಲ್ಲಿ ಯಾವುದೇ ಮುಲಾರ್ಜಿಲ್ಲದೇ ಇಲಾಖೆಗೆ ತಿಳಿ ಸುವ ಕೆಲಸ ಮಾಡಲಾಗುವುದು ಎಂದರು.

ಇದೇ ವೇಳೆ ಸಂಘದ ಸದಸ್ಯರುಗಳ ಮಕ್ಕಳು ಎಸ್.ಎಸ್.ಎಲ್.ಸಿ., ಪಿಯುಸಿ ಹಾಗೂ ಡಿಗ್ರಿಯಲ್ಲಿ ಸಾಧನೆ ಮಾಡಿದ ಸುಮಾರು ೨೧ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಎಂ.ಪಿ.ಪ್ಲಾಸಸ್, ಹೆಚ್.ಎಂ.ಇಬ್ರಾಹಿಂ ಕಾರ್ಯದರ್ಶಿ ಜಿ.ಎಲ್.ವೆಂಕಟೇಶಮೂರ್ತಿ, ಜಂಟಿ ಕಾರ್ಯದರ್ಶಿ ಕೆ.ಪಿ.ಗೋಪಾಲಕೃಷ್ಣ, ಸದಸ್ಯರುಗಳಾದ ಬಿ.ಎನ್.ನಾಗರಾಜ್, ಎಸ್.ಅನಿಲ್‌ಕುಮಾರ್, ಹೆಚ್.ಆರ್.ಹರಿಶ್, ಎಸ್.ಮಂಜುನಾಥ್, ಜಿ.ಎಸ್.ಶಶಿಧರ್, ನಾಸೀರ್ ಹುಸೇನ್, ಶೇಖರ್ ಶೆಟ್ಟಿ, ಸಿ.ಆರ್.ಪ್ರೇಮಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...