World Democracy Day ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವರಾಷ್ಟ್ರ ನಮ್ಮದು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಅತ್ಯುತ್ತಮ ಲಿಖಿತ ಕಾನೂನನ್ನು ನಮಗೆ ನೀಡಿದ್ದಾರೆ ಎಂದು ಖ್ಯಾತ ಹೃದಯ ತಜ್ಞ ಡಾ.ಶ್ರೀವತ್ಸನಾಡಿಗ್ ಯೂತ್ ಹಾಸ್ಟೇಲ್ಸ್ ಮತ್ತು ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸೈಕಲ್ ಜಾತ ಉದ್ಘಾಟಿಸಿ ಮಾತನಾಡುತ್ತಿದ್ದರು.
ಜನಸಾಮಾನ್ಯರಿಗೆ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಸೈಕಲ್ ಜಾತ ಏರ್ಪಡಿಸಲಾಗಿದೆ.
ಈ ಮೂಲಕ ಜನಜಾಗೃತಿ ಮೂಡಿಸಲು ಸಾದ್ಯ ಈ ಉತ್ತಮ ಕಾರ್ಯ ಏರ್ಪಡಿಸಿರುವುದು ಬಹಳ ಸಂತೋಷದಿಂದ ಉದ್ಘಾಟಿಸಿರುವುದಾಗಿ ಹೇಳಿದರು.
ನಮ್ಮ ದೇಶಕ್ಕೆ ಸ್ವಾತಂತ್ರ ಬಂದ ನಂತರ ಸಂವಿದಾನ ಶಿಲ್ಪಿ ಸೃಷ್ಠಿಸಿದ ಕಾನೂನು ವಿಶಿಷ್ಟ, ಹಲವಾರು ದೇಶಗಳು ಅಳವಡಿಸಿಕೊಂಡಿವೆ ಎಂದು ತರುಣೋದಯ ಘಟಕದ ಛೇರ್ಮನ್ ಎಸ್.ಎಸ್.ವಾಗೇಶ್ ತಿಳಿಸಿ, ಸ್ವಾತಂತ್ರ್ಯದ ಸಂದೇಶ ಜನಸಾಮಾನ್ಯ ವ್ಯಕ್ತಿಯಿಂದ ಶ್ರೇಷ್ಠ ವ್ಯಕ್ತಿಗೂ ಒಂದೇ ಕಾನೂನು ಅನ್ವಯವಾಗುತ್ತದೆ. ಅದನ್ನು ಉಳಿಸಿ ಬೇಳಸಬೇಕಾಗಿದೆ ಎಂದರು.
ದೇಶದ ಶಕ್ತಿ ಸಂವಿಧಾನ, ಇಂದಿನ ಯುವಜನತೆ, ಪ್ರಜಾಪ್ರಭುತ್ವದ ಆಶಯಗಳನ್ನು ಗೌರವಿಸಬೇಕಾಗಿದೆ. ಇದರಿಂದ ದೇಶದ ಸರ್ವೋತೊಮುಖ ಅಭಿವೃದ್ದಿ ಸಾದ್ಯ ಎಂದು ಜಿ.ವಿಜಯಕುಮಾರ್ ತಿಳಿಸಿದರು.
World Democracy Day ಹರೀಶ್ ಪಾಟೀಲ್ ಸ್ವಾಗತಿಸಿ, ನರಸಿಂಹಮೂರ್ತಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ವಿಜಯೇಂದ್ರಹಾವೇರಿ, ರವಿಕುಮಾರ್, ಚಂದ್ರಕೇಸರಿ, ನಾಗರಾಜ್ ಹಾಗೂ ಹಲವಾರು ಸೈಕಲ್ ಪಟುಗಳು ಇದ್ದರು.