Uttaradi Math ಮಹಾನುಭಾವರಾದ ಶ್ರೀ ಸತ್ಯಧರ್ಮ ತೀರ್ಥರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಹೊಳೆಹೊನ್ನೂರು, ಭಾನುವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ಪೂರ್ವಾರಾಧನಾ ಅಂಗವಾಗಿ ಅನುಗ್ರಹ ಸಂದೇಶ ನೀಡಿದರು.
ಅವರ ಒಂದೊ0ದು ಮಾತನ್ನು ತಿಳಿದುಕೊಳ್ಳಲು ಸಾಕಷ್ಟು ಕೌಶಲ ಬೇಕು. ಇದರಿಂದ ಅವರ ಪಾಂಡಿತ್ಯವೂ ತಿಳಿಯುತ್ತದೆ. ಸಾರ್ಥಕವಾದ ಧರ್ಮಾನುಷ್ಠಾನ ಮಾಡಿದವರು. ಅವರ ಗ್ರಂಥಗಳ ವೈಭವ ಎಷ್ಟು ಹೇಳಿದರೂ ಕಡಿಮೆಯೇ. ಒಂದೊ0ದು ವ್ಯಾಖ್ಯಾನದ ವೈಶಿಷ್ಟ್ಯ ತಿಳಿಯಲು ಸಾಕಷ್ಟು ಸಮಯ ಬೇಕು. ಶ್ರೀ ಸತ್ಯಧರ್ಮರ ತಪಸ್ಸು, ಸಾಧನೆ, ದೇವರು ಅವರಿಗೆ ಒಲಿದ ರೀತಿ ಎಲ್ಲವೂ ಅದ್ಭುತ ಎಂದರು.
ಪೋಷಕರು ಸಂಸ್ಕಾರಿಗಳಾಗಿ :
ಪ್ರವಚನ ನೀಡಿದ ಪಂಡಿತ ಮೊಕಾಶಿ ಮಧ್ವಾಚಾರ್ಯ, ಮೊದಲು ಧರ್ಮದ ಮಾತನಾಡಿ ಮಿತ್ರತ್ವವನ್ನು ಬಯಸಬೇಕು. ಯಾರದ್ದೋ ಸ್ನೇಹ ಮಾಡಿ ಪ್ರಯೋಜನ ಇಲ್ಲ. ಮಕ್ಕಳಿಗೆ ಸಂಸ್ಕಾರ ಸಿಗಬೇಕಾದರೆ ಮೊದಲು ತಂದೆ ತಾಯಂದಿರಲ್ಲಿ ಸಂಸ್ಕಾರ ಇರಬೇಕು. ತಂದೆ ತಾಯಂದಿರೇ ದಾರಿ ಬಿಟ್ಟರೆ ಮಕ್ಕಳಿಂದ ಸಂಸ್ಕಾರ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಹೀಗಾಗಿ ಪೋಷಕರು ಜಾಗೃತಿ ಆಗಬೇಕು ಎಂದರು.
Uttaradi Math ಉತ್ತರಾದಿ ಮಠದ ಪೀಠವನ್ನು ಅಲಂಕರಿಸಲು ಸಾಮಾನ್ಯರಿಗೆ ಸಾಧ್ಯವಿಲ್ಲ. ತಪಸ್ವಿಗಳಾಗಿದ್ದರೆ ಮಾತ್ರ ಮೂಲರಾಮ ಸೀತಾದೇವಿಯ ವಿಗ್ರಹವನ್ನು ಮುಟ್ಟಲು ಸಾಧ್ಯ. ನಮ್ಮ ಸ್ವಾಮಿಗಳು ಕೂಡ ಮಹಾನ್ ತಪಸ್ವಿಗಳು, ವೈರಾಗ್ಯ ಶಿಖಾಮಣಿಗಳು ಇಂತಹ ಗುರುಗಳು ಸಿಕ್ಕಿರುವುದೇ ನಮ್ಮ ಭಾಗ್ಯ ಎಂದರು.
ಪAಡಿತ ವಿಶ್ವಪ್ರಜ್ಞಾಚಾರ್ಯ ಮಾಹುಲಿ ಪ್ರವಚನ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀಗಳಿಗೆ ತೊರವಿ ನರಸಿಂಹ ದೇವರ ಶೇಷವಸವನ್ನು ಅಲ್ಲಿನ ಅರ್ಚಕರು ಸಮರ್ಪಿಸಿದರು.
ಪಂಡಿತ ಪೂಜ್ಯರಾದ ಗುತ್ತಲ ರಂಗಾಚಾರ್ಯ, ವಿದ್ಯಾಸಿಂಹಾಚಾರ್ಯ ಮಾಹುಲಿ, ಸತ್ಯಧ್ಯಾನಾಚಾರ್ಯ ಕಟ್ಟಿ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಕಲ್ಲಾಪುರ ಜಯತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾಚಾರ್ಯ, ಮೊದಲಾದವರಿದ್ದರು.