Saturday, September 28, 2024
Saturday, September 28, 2024

H. B. Manjunath ಶಾಲಾ ಶಿಕ್ಷಣವು ಜೀವನ ಪರೀಕ್ಷೆಗೂ ಅಗತ್ಯ- ಎಚ್.ಬಿ.ಮಂಜುನಾಥ್

Date:

H. B. Manjunath “ಶಾಲಾ ಶಿಕ್ಷಣವು ಜೀವನ ಪರೀಕ್ಷೆಗೂ ಬೇಕು” -ಹಿಮಾಲಯನ್ ಅಡ್ವೆಂಚರ್ ನಿಂದ ಶಿಕ್ಷಕರ ಸನ್ಮಾನದಲ್ಲಿ ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ್- ದಾವಣಗೆರೆ.ಸೆ.11.ಶಾಲಾ ಶಿಕ್ಷಣವನ್ನು ಕೇವಲ ವಾರ್ಷಿಕ ಪರೀಕ್ಷೆಗಷ್ಟೇ ಬಳಸದೆ ಜೀವನ ಪರೀಕ್ಷೆಯಲ್ಲೂ ಬಳಸಿದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಎಚ್ ಬಿ ಮಂಜುನಾಥ ಅಭಿಪ್ರಾಯಪಟ್ಟರು. ಅವರಿಂದು ನಗರದ ಸ್ವಂತಪೌಲರ ಪದವಿ ಪೂರ್ವ ಕಾಲೇಜಿನಲ್ಲಿ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ದಾವಣಗೆರೆ ವತಿಯಿಂದ ನೆರವೇರಿದ ಶಿಕ್ಷಕರ ದಿನಾಚರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ಬುದ್ಧಿಮತ್ತೆಯಲ್ಲಿ ಭಾರತದವರು ಜಗತ್ತಿನಲ್ಲೇ ಮುಂದೆಂಬುದು ಅನಾದಿಕಾಲದಿಂದಲೂ ತಿಳಿದುಬಂದದ್ದು ಈಚಿನ ಚಂದ್ರಯಾನದ ಯಶಸ್ಸು ಇದನ್ನು ಮತ್ತಷ್ಟು ಪುಷ್ಟಿಗೊಳಿಸಿದೆ, ಶೀಘ್ರದಲ್ಲೇ ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗಿ ಪ್ರಕಟಗೊಳ್ಳಲಿರುವ ಭಾರತದ ಯುವಶಕ್ತಿಯು ವಿಶ್ವವನ್ನಾಳುವ ಸಾಮರ್ಥ್ಯವನ್ನು ಹೊಂದಿದ್ದು ಇದಕ್ಕೆ ಪೂರಕವಾದ ಶಿಕ್ಷಣವನ್ನು ಸಹಾ ಪಠ್ಯೇತರವಾಗಿ ಶಾಲಾ ಕಾಲೇಜುಗಳು ನೀಡಬೇಕಾದ ಅವಶ್ಯಕತೆ ಇದ್ದು ಶಿಕ್ಷಕರು ಈ ನಿಟ್ಟಿನಲ್ಲೂ ಕಾರ್ಯನಿರ್ವಹಿಸಬಹುದಾಗಿದೆ ಎಂದ ಎಚ್ ಬಿ ಮಂಜುನಾಥ್ ವಿದ್ಯಾರ್ಥಿಗಳು ಸಹಾ ಶಾಲಾ ಪರೀಕ್ಷೆಯ ಅಂಕ ಗಳಿಕೆಗೆ ಕೊಡುವಷ್ಟೇ ಪ್ರಾಶಸ್ತ್ಯವನ್ನು ಜೀವನ ಪರೀಕ್ಷೆಯ ಯಶಸ್ಸಿಗೂ ಕೊಡಬೇಕು ಎಂದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ ಹೆಚ್ ವಿ ಸೋಮಶೇಖರ್ ಮುಗ್ಧ ಮನದಲ್ಲಿ ಅಕ್ಷರಗಳನ್ನು ಬಿತ್ತಿ ಜ್ಞಾನದ ಬೆಳೆ ಬೆಳೆದು ಸುಂದರ ನಾಡ ನಿರ್ಮಾಣಕ್ಕೆ ಕಾರಣರಾಗುವುವವರೇ ಶಿಕ್ಷಕರು, ನಮ್ಮ ಚಂದ್ರಯಾನದ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳ ಸಾಧನೆಯಲ್ಲಿ ಅವರ ಶಿಕ್ಷಕರುಗಳ ಪಾತ್ರವೂ ಮಹತ್ತರವಾಗಿದೆ ಎಂದರು. ಮತ್ತೋರ್ವ ಮುಖ್ಯ ಅತಿಥಿಗಳಾಗಿ ಸಂತಪೌಲರ ಶೈಕ್ಷಣಿಕ ಸಂಸ್ಥೆಯ ಸ್ಥಳೀಯ ವ್ಯವಸ್ಥಾಪಕಿಯವರಾದ ಸಿಸ್ಟರ್ ಮಾರ್ಜರಿಯವರು ಮಾತನಾಡಿ ಜ್ಞಾನ ದಾನ ಮಾಡುವ ಶಿಕ್ಷಕರಲ್ಲಿ ತಾಳ್ಮೆಯೂ ಬಹಳವಾಗಿ ಬೇಕು, ರೂಪ ಅಂತಸ್ತು ಅಧಿಕಾರಗಳಿಂದ ಆಚೆಯ ಜ್ನಾನಕ್ಕೆ ಬೆಲೆ ಕೊಡಬೇಕು ಎಂದರು. ಪ್ರಾಚಾರ್ಯ ಮೇಘನಾಥ್ ಕೆ ಟಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಾ ಎಲ್ಲ ಸದ್ವಿದ್ಯೆಗಳಲ್ಲಿ ಪಾರಂಗತರಾದವರನ್ನೇ ಹಿಂದಿನ ಗುರುಕುಲಗಳಲ್ಲಿ ಶಿಕ್ಷಕರೆಂದು ಗೌರವಿಸಲಾಗುತ್ತಿತ್ತು ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ದಾವಣಗೆರೆ ಜಿಲ್ಲಾಧ್ಯಕ್ಷ ಹಾಗೂ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಕೊಟ್ರೇಶ್ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಜೀವ ರಕ್ಷಣೆಯ ಪ್ರಯೋಜನಕ್ಕೆ ಬರುವ ಸಾಹಸ ಕ್ರೀಡೆಗಳ ಶಿಕ್ಷಣವೂ ಅವಶ್ಯ ಎಂದರು.

H. B. Manjunath ಪತ್ರಕರ್ತ ಚನ್ನಬಸವ ಶೀಲವಂತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ವಿಶ್ವನಾಥ ಆರ್, ನೂರ್ ಜಹಾನ್, ಡೆಬೋರಾ ಪಿಯರ್ಸನ್, ರಮೇಶ್ ಎಲಿಗಾರ್, ಶ್ವೇತಾ ಹೆಚ್ಎನ್, ಮೇಘನಾ ಎಂ, ಸಿಂಧು ಹೆಚ್ ಎಂ, ರೇಗಿನಾ ಪಿ ವಿ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಶೇಷ ಆಹ್ವಾನಿತರಾಗಿ ಅಶೋಕ್ ಭಟ್, ದೀಪು, ನಾಗರಾಜ್ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shikaripura News ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ

Shikaripura News ನಾಡಿನ ಅಹಿಂದ ವರ್ಗಕ್ಕೆ ಸೇರಿದ ಜನರ ಹಿತ ಕಾಯುವ...

New Delhi News ಅಪಹರಣಕ್ಕೊಳಗಾಗಿದ್ದ ಬಾಲಕನೇ ಇಂದು ವಕೀಲನಾಗಿ ಅದೇ ಕಿಡ್ನಾಪರ್ಸ್ ಗೆ ಶಿಕ್ಷೆ ಕೊಡಿಸಿದ

New Delhi News ಈ ಹಿಂದೆ 7 ವರ್ಷದವನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಬಾಲಕ...

Kasturi Rangan Comittee Report ಕಸ್ತೂರಿ ರಂಗನ್ ವರದಿ ತಿರಸ್ಕಾರ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

Kasturi Rangan Comittee Report ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು...

Hosanagara News ಇಸ್ಪೀಟ್ ಅಡ್ಡೆಗೆ ಪೊಲೀಸರ ದಾಳಿ – 11 ಜನರ ಬಂಧನ 17,640 ರೂಪಾಯಿ ವಶ

Hosanagara News ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿಯ ಹಳೆಬಾಣಿಗ ರಸ್ತೆಯ...