Friday, November 22, 2024
Friday, November 22, 2024

Forest Martyrs’ Day ಹುತಾತ್ಮ ಸೈನಿಕರಿಗೆ ಲಭಿಸುವ ಗೌರವ ಹುತಾತ್ಮ ಪೊಲೀಸರು & ವನ್ಯರಕ್ಷಕರಿಗೂ ಸಿಗಲಿ- ನ್ಯಾ.ಮಂಜುನಾಥನಾಯಕ್

Date:

Forest Martyrs’ Day ದೇಶ ರಕ್ಷಣೆಗಾಗಿ ಹೋರಾಡಿ ಪ್ರಾಣಾರ್ಪಣೆ ಮಾಡುವ ಸೈನಿಕನಿಗೆ ದೊರೆಯುವ ಗೌರವ ದೇಶದ ಅಮೂಲ್ಯ ವನ್ಯ ಸಂಪತ್ತನ್ನು ರಕ್ಷಿಸುವ ಅರಣ್ಯ ಸಿಬ್ಬಂಧಿ ಹಾಗೂ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುವ ಪೊಲೀಸ್ ಸಿಬ್ಬಂಧಿಗಳು ಕರ್ತವ್ಯ ನಿರತರಾದಾಗ ಮೃತರಾದಾಗಲೂ ಅದೇ ರೀತಿಯ ಗೌರವ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಅವರು ಹೇಳಿದರು.

ಅವರು ಅರಣ್ಯ ಇಲಾಖೆಯು ಶಿವಮೊಗ್ಗ ನಗರದ ಶ್ರೀಗಂಧದಕೋಠಿಯಲ್ಲಿ ಏರ್ಪಡಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮೃತ ಅರಣ್ಯ ಸಿಬ್ಬಂಧಿಗಳ ಸ್ಮರಣಾರ್ಥ ಇರುವ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು. ದೇಶ ರಕ್ಷಣೆಗಾಗಿ ಶ್ರಮಿಸುವ ಪ್ರತಿಯೊಬ್ಬರ ಜೀವವೂ ಅಮೂಲ್ಯ. ಅವರು ಸಮಾಜದಲ್ಲಿ ಮೌಲ್ಯಯುತ ಜೀವನ ನಡೆಸುವಂತಾಗಬೇಕು ಎಂದ ಅವರು, ಅರಣ್ಯ ರಕ್ಷಕರ ಸಾವಿಗೆ ಪ್ರಾಣಿಗಳು ಮಾತ್ರವಲ್ಲ ಮನುಷ್ಯನೂ ಕಾರಣನಾಗಿರುವುದು ವಿಷಾಧದ ಸಂಗತಿ. ಅನೇಕ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿರುವುದು ಬೇಸರದ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅವರು ಮಾತನಾಡಿ, ಭಾರೀ ಪ್ರಮಾಣದಲ್ಲಿ ಕಾಡನ್ನು ನಾಶಗೊಳಿಸಿ, ಕೃತಕವಾಗಿ ಮರಗಳನ್ನು ನೆಡುವುದರಿಂದ ಪರಿಸರ ಮತ್ತು ಅರಣ್ಯ ಸಂರಕ್ಷಿಸಿದoತಾಗಲಿದೆ ಎಂದು ಅನೇಕ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಇದು ಸಲ್ಲದು. ಇರುವ ಅರಣ್ಯವನ್ನು ಅದು ಇರುವಂತಹ ರೀತಿಯಲ್ಲಿಯೇ ಉಳಿಸಿ, ಬೆಳೆಸಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ ಎಂದರು.

ಅರಣ್ಯವನ್ನು ರಾಷ್ಟ್ರೀಯ ಸಂಪತ್ತು ಎಂದೇ ಭಾವಿಸಿ ಅದರ ರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಅರಣ್ಯದ ಮಹತ್ವದ ಕುರಿತು ಎಲ್ಲರಲ್ಲೂ ಅರಿವು ಮೂಡಬೇಕು ಎಂದ ಅವರು, ಅರಣ್ಯ ರಕ್ಷಕರು ಬಹುತೇಕ ಸಂದರ್ಭಗಳಲ್ಲಿ ತಮ್ಮ ಜೀವದ ಹಂಗನ್ನು ಕಾರ್ಯನಿರ್ವಹಿಸುತ್ತಿದ್ದಾರೆ. ಅರಣ್ಯ ರಕ್ಷಣೆಗೆ ಕಾರಣರಾಗಿರುವ ಮನುಷ್ಯ ತನ್ನ ದುರಾಸೆಯನ್ನು ಬಿಟ್ಟು, ಇಲಾಖೆಯೊಂದಿಗೆ ಸಹಕರಿಸಬೇಕೆಂದು ಅವರು ನುಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಅವರು ಮಾತನಾಡಿ, ಮನುಷ್ಯನ ಅವ್ಯಾಹತ ದಾಳಿಯಿಂದಾಗಿ ಅರಣ್ಯಗಳು ದಿನೇದಿನೇ ನಾಶಗೊಳ್ಳುತ್ತಿವೆ. ಮನುಷ್ಯನ ಆಸೆಗೆ ಮಿತಿಯಿಲ್ಲದಂತಾಗಿದೆ. ಇದರಿಂದಾಗಿ ಅರಣ್ಯದಲ್ಲಿನ ಅಸಂಖ್ಯಾತ ಮರಗಳು, ಪ್ರಾಣಿ ಪಕ್ಷಿ ಸಂಕುಲದ ನಿರಂತರ ದಾಳಿಗೆ ತುತ್ತಾಗುತ್ತಿದೆ. ಇದರ ನಿಯಂತ್ರಣ ಅನಿವಾರ್ಯವಾಗಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಅರಣ್ಯ ಸಿಬ್ಬಂಧಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾಮಾಜಿಕ ಭದ್ರತೆ, ಶಾಂತಿಪಾಲನೆ, ಅರಣ್ಯ ಸಂರಕ್ಷಣೆ ಗಡಿರಕ್ಷಣೆಗೆ ಸಮನಾದ ಕಾರ್ಯವಾಗಿದೆ ಎಂದವರು ಶ್ಲಾಘಿಸಿದರು.

ಅರಣ್ಯದ ನಾಶ ದೇಶದಲ್ಲಿನ ಹವಾಮಾನ ಬದಲಾವಣೆಗೂ ಪ್ರಮುಖ ಕಾರಣವಾಗಿದೆ. ಸರ್ವರೂ ಅರಣ್ಯದ ರಕ್ಷಣೆಗೆ ಮುಂದಾಗಬೇಕು. ಅರಣ್ಯ ನೌಕರರಿಗೆ ಎಲ್ಲೆಡೆ ಗೌರವಾಧರಗಳು ದೊರೆಯುವಂತಾಗಬೇಕೆoದವರು ನುಡಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ.ಹನುಮಂತಪ್ಪ ಅವರು ಮಾತನಾಡಿ, ಏರುತ್ತಿರುವ ಜನಸಂಖ್ಯೆಯೂ ಕೂಡ ಭೂಮಿ, ಅರಣ್ಯ, ಸಸ್ಯ ಮತ್ತು ಪ್ರಾಣಿಸಂಕುಲದ ನಾಶಕ್ಕೆ ಕಾರಣವಾಗುತ್ತಿದೆ. ಎಲ್ಲರೂ ಅರಿತು ಅರಣ್ಯ ರಕ್ಷಣೆಗೆ ಮುಂದಾಗಬೇಕು. ಅರಣ್ಯ ರಕ್ಷಕರೂ ಕೂಡ ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸುವಂತೆ ಕಿವಿಮಾತು ಹೇಳಿದರು.

Forest Martyrs’ Day ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಸೇರಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ-ಸಿಬ್ಬಂಧಿಗಳು ಹುತಾತ್ಮರಿಗೆ ಪುಷ್ಪಗುಚ್ಛವಿಟ್ಟು ಗೌರವ ಸಲ್ಲಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...