Saturday, December 6, 2025
Saturday, December 6, 2025

Pension Scheme ವಿವಿ ನೌಕರರಿಗೆ ಹಳೇಪಿಂಚಣಿ ಯೋಜನೆ ಅನ್ವಯದ ಬಗ್ಗೆ ಅರ್ಜಿದಾರ ಡಾ.ಎನ್.ಬಿ.ಶ್ರೀಧರ್ ಮಾಹಿತಿ

Date:

Pension Scheme ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯ ಸರ್ಕಾರವು 1-4-2006 ರಿಂದ ತನ್ನ ನೌಕರರಿಗೆ ಹೊಸ ಅಂಶದಾಯಿ ಪಿಂಚಣಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನು ರಾಜ್ಯ ಸರ್ಕಾರದ ಅಧೀನದ ವಿಶ್ವವಿದ್ಯಾಲಯಗಳೂ ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಹೇಳಲಾಗಿದೆ.

ಅನೇಕ ಜನ ನೌಕರರುಗಳು ಈ ಮೊದಲು ಪಿಂಚಣಿಯುಕ್ತ ಸೇವೆಯಲ್ಲಿದ್ದು, ಅಲ್ಲಿಂದ ವಿಶ್ವವಿದ್ಯಾಲಯದಲ್ಲಿ ಬೋಧಕ ಅಥವಾ ಬೋಧಕೇತರ ಹುದ್ದೆಗೆ ಸೂಕ್ತ ಪ್ರಾಧಿಕಾರದ ಮೂಲಕ ಅರ್ಜಿ ಹಾಕಿ, ಆಯ್ಕೆಯಾದಾಗ, ನೇಮಕಾತಿ ಪ್ರಾಧಿಕಾರದ ಅನುಮತಿ ಪಡೆದು ವಿಶ್ವವಿದ್ಯಾಲಯದ ಹೊಸ ಹುದ್ದೆಯನ್ನು 1-4-2006 ರ ನಂತರ ಸೇರಿದವರನ್ನು ಬಲವಂತವಾಗಿ ಹೊಸ ಪಿಂಚಣಿ ಯೋಜನೆಗೆ ಸೇರಿಸಲಾಗಿದೆ.

ಅನೇಕ ವರ್ಷ ಪಿಂಚಣಿಯುಕ್ತ ಸೇವೆಯಲ್ಲಿ ಸೇವೆ ಸಲ್ಲಿಸಿ ನಂತರ ಸೂಕ್ತ ನಿಯಮ ಅನುಸರಿಸಿ ವಿಶ್ವವಿದ್ಯಾಲಯಕ್ಕೆ ಸೇರಿದ ನೌಕರರಿಗೆ ಇದರಿಂದ ಅನ್ಯಾಯವಾಗಿದೆ.

1-4-2006 ಕ್ಕಿಂತ ಮೊದಲು ಹಳೆಯ ಪಿಂಚಣಿ ಯೋಜನೆಯಲ್ಲಿದ್ದು ಸರ್ಕಾರದ ಒಂದು ಇಲಾಖೆಯಲ್ಲಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಪಿಂಚಣಿಯುಕ್ತ ಸೇವೆ ಸಲ್ಲಿಸಿ ಮತ್ತೊಂದು ಇಲಾಖೆಯ ಹುದ್ದೆಗೆ ಯುಕ್ತ ರೀತಿಯಲ್ಲಿ ಅರ್ಜಿ ಹಾಕಿ ಆಯ್ಕೆಯಾಗಿ ಹೊಸ ಹುದ್ದೆಗೆ ಸೇರಿದವರನ್ನು ಹಳೆಯ ಪಿಂಚಣಿ ಯೋಜನೆಯಲ್ಲಿ ಮುಂದುವರೆಸಲಾಗಿದೆ. ಆದರೆ, ಈ ಆದೇಶವು ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳಾಗಿರುವುದರಿoದ ಅಲ್ಲಿನ ಹೊಸ ಹುದ್ದೆಗೆ 1-4-2006 ರ ನಂತರ ವರದಿ ಮಾಡಿಕೊಂಡ ನೌಕರರುಗಳಿಗೆ ಹಳೆಯ ಪಿಂಚಣಿಯನ್ನು ಮುಂದುವರೆಸಲು ಸಾಧ್ಯವಿಲ್ಲ ಎನ್ನುವುದು ಆರ್ಥಿಕ ಇಲಾಖೆಯ ಅಭಿಪ್ರಾಯ.

Pension Scheme ಹಳೆಯ ಪಿಂಚಣಿಯನ್ನು ವಿಶ್ವವಿದ್ಯಾಲಯದ ಈ ರೀತಿಯ ನೌಕರರಿಗೆ ಮುಂದುವರೆಸಿದ ಅನೇಕ ನಿದರ್ಶನಗಳು ಕೇಂದ್ರ ಸರ್ಕಾರ, ಒರಿಸ್ಸಾ, ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲಿವೆ. ಈ ಮಲತಾಯಿ ದೋರಣೆಯ ವಿರುದ್ಧ ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರಿನ ೩೮ ಜನ ಪ್ರಾಧ್ಯಾಪಕರು ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ೨೦೧೬ ರಲ್ಲಿ ದಾವೆ ಹೂಡಿದ್ದರು. ಸುಮಾರು 7 ವರ್ಷಗಳ ನಂತರ ಈ ದಾವೆಯ ಕುರಿತು ಶ್ರೀಮತಿ ಹೇಮಲೇಖ ಇವರ ನ್ಯಾಯಪೀಠವು ಐತಿಹಾಸಿಕ ತೀರ್ಪು ನೀಡಿ ಪಿಂಚಣಿಯು ನೌಕರರ ಅತ್ಯಂತ ನ್ಯಾಯಯುಕ್ತ ಹಕ್ಕಾಗಿದ್ದು ಇದನ್ನು “ಆಸ್ಥಿ ಹಕ್ಕು” ಎಂದು ಪರಿಗಣಿಸಿ ನೀಡಬೇಕು ಎಂದು ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ಅನೇಕ ತೀರ್ಪುಗಳನ್ನು ಉಲ್ಲೇಖಿಸಿ ತೀರ್ಪು ನೀಡಿ ಇದನ್ನು ಎರಡು ತಿಂಗಳೊಳಗೆ ಪಾಲಿಸಬೇಕು ಎಂದು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿದೆ. ಇದೇ ರೀತಿಯ ಪ್ರಕರಣದಲ್ಲಿ ಶ್ರೀ ಕೃಷ್ಣ ದೀಕ್ಷಿತ್ ಇವರ ನ್ಯಾಯಪೀಠ ನೀಡಿದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿದ ಅರ್ಜಿಯನ್ನು ದ್ವಿಸದಸ್ಯ ಪೀಠ ವಜಾಗೊಳಿಸಿದೆ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಪಪಮೀವಿವಿ,ಬೀದರದ ಶಿಕ್ಷಕರ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಅರ್ಜಿದಾರರಲ್ಲಿ ಒಬ್ಬರಾದ ಡಾ: ಎನ್.ಬಿ.ಶ್ರೀಧರ ಇವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...