Uttaradi Math ಉತ್ತರಾದಿ ಮಠಾಧಿಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರ ಚಾತುರ್ಮಾಸ ಮಹೋತ್ಸವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಶುಕ್ರವಾರ ಸಂಜೆ ವಿಟ್ಲಪಿಂಡಿ ಮಹೋತ್ಸವ ನಡೆಯಿತು.
ಶ್ರೀಸತ್ಯಧರ್ಮತೀರ್ಥರ ಮಠದ ಮುಂಭಾಗದ ರಸ್ತೆಯಲ್ಲಿ ವಿಟ್ಲಪಿಂಡಿ ಮಹೋತ್ಸವಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಸ್ತೆಯಲ್ಲಿ ಹಲವೆಡೆ ಹಾಲು, ಮೊಸರು, ಬೆಣ್ಣೆ ಇದ್ದಂತಹ ಅಲಂಕೃತ ಮಡಿಕೆಗಳನ್ನು ನೇತು ಹಾಕಲಾಗಿತ್ತು.
ಚಾತುರ್ಮಾಸ ಮಹೋತ್ಸವದ ವಿದ್ವತ್ ಸಭೆಯ ಬಳಿಕ ನೇರವಾಗಿ ವಿಟ್ಲಪಿಂಡಿ ಮಹೋತ್ಸವಕ್ಕೆ ಆಗಮಿಸಿದ ಶ್ರೀಸತ್ಯಾತ್ಮ ತೀರ್ಥರು ನೆರೆದಿದ್ದ ನೂರಾರು ಭಕ್ತರ ಸಮಕ್ಷಮದಲ್ಲಿ ಹಾಲು, ಮೊಸರುಗಳಿದ್ದ ಮಡಿಕೆಗಳನ್ನು ಶ್ರೀಕೃಷ್ಣನ ಬಾಲಲೀಲೆಯ ಸ್ಮರಿಸಿಕೊಂಡು ಹೊಡೆದರು.
Uttaradi Math ಈ ಸಂದರ್ಭದಲ್ಲಿ ಭಕ್ತರು ಹರ್ಷೋದ್ಘಾರ ವ್ಯಕ್ತಪಡಿಸಿದರು. ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಕಲ್ಲಾಪುರ ಜಯತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾಚಾರ್ಯ, ಮುರಳಿ, ಸತ್ಯನಾರಾಯಣ ನಾಡಿಗ್, ಧೃವಾಚಾರ್, ಜಯತೀರ್ಥ ಬೆಂಗಳೂರು, ಶ್ರೀಪಾದ್ ಶಿವಮೊಗ್ಗ ಮೊದಲಾದವರಿದ್ದರು.