Uttaradi Math ಪರಮಾತ್ಮ ಸ್ವಯಂವ್ಯಕ್ತನಾಗಿ ನಮ್ಮ ಸಂಸ್ಥಾನ ಪ್ರತಿಮೆಯಾದ ಮೂಲರಾಮ ದೇವರಲ್ಲಿ ಸನ್ನಿಹಿತನಾಗಿದ್ದಾನೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಹೊಳೆಹೊನ್ನರಿನಲ್ಲಿ
ಶುಕ್ರವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶ ನೀಡಿದರು.
ಮೂಲ ರಾಮದೇವರನ್ನು ಮೊದಲು ಬ್ರಹ್ಮದೇವರೇ ಪೂಜಿಸಿದ್ದು. ಆನಂತರ ಇಕ್ಷಾ0ಕು ವಂಶದ ರಾಜರಿಂದ ಪೂಜಿತವಾದ ಮೂಲರಾಮ ದೇವರ ಪ್ರತಿಮೆ ನಮ್ಮ ಸಂಸ್ಥಾನದಲ್ಲಿ ಪ್ರಧಾನವಾಗಿ ಇಂದಿಗೂ ಪೂಜಿತನಾಗುತ್ತಿದ್ದಾನೆ ಎಂದರು.
ಪ್ರವಚನ ನೀಡಿದ ಪಂಡಿತ ಪ್ರಭಂಜನಾಚಾರ್ಯ ವಿದ್ಯಾಪತಿ, ಶ್ರೀ ಸತ್ಯಧರ್ಮ ತೀರ್ಥರಿಗಿಂತಲೂ ಮೊದಲು ಜಗನ್ನಾಥ ಪಂಡಿತ ಎಂಬುವರು ಕೂಡ ಗಂಗಾಲಹರಿ ಎಂಬ ಸ್ತೋತ್ರ ಮಾಡಿದ್ದಾರೆ. ಆದರೆ ಶ್ರೀ ಸತ್ಯಧರ್ಮ ತೀರ್ಥರು ಅತ್ಯಂತ ಶಾಸ್ತ್ರೀಯವಾಗಿ, ತತ್ವನಿಷ್ಠೆಯಿಂದ ಗಂಗಾಲಹರಿಯನ್ನು ರಚಿಸಿದ್ದಾರೆ ಎಂದರು.
ಜಗನ್ನಾಥ ಪಂಡಿತ ಗಂಗೆಯನ್ನು ಪಾರ್ವತಿಯ ಸವತಿ ಎಂಬoತೆ ವರ್ಣಿಸಿದರೆ, ಮಂಗಳಕರವಾದ ಗಂಗೆಯನ್ನು ಸದಾ ಶಿರಸ್ಸಿನ ಮೇಲೆ ಧಾರಣೆ ಮಾಡಿದ್ದರಿಂದ ರುದ್ರದೇವರು ಸದಾ ಮಂಗಳಕರ ಎಂದು ಶ್ರೀ ಸತ್ಯಧರ್ಮರು ವರ್ಣಿಸಿದ್ದಾರೆ. ಸ್ವತಃ ಕವಿಗಳಾದರೂ ಸತ್ಯಧರ್ಮರು ಧರ್ಮಕ್ಕೆ ಅಪಚಾರ ಆಗುವಂತೆ ಕಾವ್ಯವನ್ನು ರಚಿಸಿಲ್ಲ ಎಂದರು.
ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ರಾಧಿಕಾ ನಾಡಿಗ್ (ಪ್ರಥಮ) , ಶುಭಾ ಕೃಷ್ಣಾಚಾರ್ (ದ್ವಿತೀಯ), ಗುರುಪ್ರಿಯಾ, ಅನಸೂಯಾ, ಚೈತ್ರಾ ಪಾಂಡುರoಗಿ (ತೃತೀಯ) ಬಹುಮಾನವನ್ನು ಪಡೆದರು. ಮಕ್ಕಳ ವಿಭಾಗದಲ್ಲಿ ದೇವಹೂತಿ ನವರತ್ನ, ಸಮನಾ ಬಹುಮಾನ ಪಡೆದರು.
ಶ್ರೀಗಳು ಬಹುಮಾನವನ್ನು ವಿತರಿಸಿದರು.
Uttaradi Math ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಕಲ್ಲಾಪುರ ಜಯತೀರ್ಥಾಚಾರ್ಯ, ಬಾಳಗಾರು ಜಯತೀರ್ಥಾಚಾರ್ಯ, ಮುರಳಿ, ಸತ್ಯನಾರಾಯಣ ನಾಡಿಗ್, ಧೃವಾಚಾರ್, ಜಯತೀರ್ಥ, ಶ್ರೀಪಾದ್ ಶಿವಮೊಗ್ಗ ಮೊದಲಾದವರಿದ್ದರು.