Saturday, December 6, 2025
Saturday, December 6, 2025

SN Channabasappa ಡಿವಿಎಸ್ ಸಂಸ್ಥೆ ರಾಷ್ಟ್ರೀಯತೆ ಆಶಯಗಳನ್ನ ಸಮಾಜದಲ್ಲಿ ಬೆಳೆಸುತ್ತಿದೆ- ಶಾಸಕ ಚನ್ನಬಸಪ್ಪ

Date:

SN Channabasappa ಗುಣಮಟ್ಟದ ಶಿಕ್ಷಣ ‌ನೀಡುತ್ತಿರುವ ಪ್ರಮುಖ ವಿದ್ಯಾ ಸಂಸ್ಥೆಗಳಲ್ಲಿ ದೇಶಿಯ ವಿದ್ಯಾಶಾಲಾ ಸಮಿತಿ ಸಹ ಒಂದು. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಆಶಯಗಳನ್ನು ಬೆಳೆಸಿ ಉತ್ತಮ ಸಮಾಜ ನಿರ್ಮಾಣ‌ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ಶಾಸಕ‌ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ದೇಶಿಯ ವಿದ್ಯಾಶಾಲಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಡಿವಿಎಸ್ ಪದವಿ ಪೂರ್ವ ( ಸ್ವತಂತ್ರ ) ಕಾಲೇಜಿನ ಪ್ರತಿಭಾ ಪುರಸ್ಕಾರ 2023 ಹಾಗೂ 2023-24 ಸಾಂಸ್ಕೃತಿಕ ವೇದಿಕೆ, ರೋವರ್ಸ್ ಮತ್ತು ರೇಂಜರ್ಸ್‌ ಘಟಕಗಳ ಉದ್ಘಾಟನೆ ಸಮಾರಂಭದಲ್ಲಿ‌ ಮಾತನಾಡಿದರು.

ವಿದ್ಯಾರ್ಥಿಗಳು ಶ್ರೇಷ್ಠ ಯಶಸ್ಸು ತಲುಪುವುದರಲ್ಲಿ‌ ಶಿಕ್ಷಕರು ಸಾರ್ಥಕತೆ ಕಂಡುಕೊಳ್ಳುತ್ತಾರೆ. ಶಿಕ್ಷಣ ಸಂಸ್ಥೆಗಳ ಹೆಸರು ಬೆಳೆಸುವ ಜತೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಲಕ್ಷಾಂತರ ವಿದ್ಯಾರ್ಥಿಗಳ ಬದುಕು ರೂಪಿಸಿದ ಶಿಕ್ಷಣ ಸಂಸ್ಥೆ ಡಿವಿಎಸ್. ಇಂತಹ ಸಂಸ್ಥೆಯಲ್ಲಿ‌ ಪ್ರಸ್ತುತ ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಮುಂದಿನ ಭವಿಷ್ಯದಲ್ಲಿ ಉನ್ನತ ಸ್ಥಾನಮಾನ ತಲುಪಿದ ನಂತರ ಸಮಾಜದ ಸದೃಢ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ಸಲಹೆ‌ ನೀಡಿದರು.

ಸಾಹಿತಿ ಚಟ್ನಳ್ಳಿ ಮಹೇಶ್ ಪ್ರಧಾನ ಉಪನ್ಯಾಸ ನೀಡಿ, ಮೌಲ್ಯಯುತ ಅಂಶಗಳನ್ನು ಜೀವನದಲ್ಲಿ ಕಲಿಸುವುದು ಶಿಕ್ಷಕರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭಾನ್ವಿತ ಸಾಮಾರ್ಥ್ಯವನ್ನು ಗುರುತಿಸಿ ಜಾಗೃತಗೊಳಿಸುವ ಮಹತ್ತರ ಕೆಲಸವನ್ನು ‌ಶಿಕ್ಷಕರು ಮಾಡಬೇಕು. ಸನ್ಮಾರ್ಗದಲ್ಲಿ ಮುನ್ನಡೆಯುವ ಮಾರ್ಗದರ್ಶನ ಮಾಡುತ್ತಾರೆ ಶಿಕ್ಷಕರು ಎಂದು ಹೇಳಿದರು.

ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಮಟ್ಟದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಡಿವಿಎಸ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

2022-23 ರಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿದ ಕಲಾ ವಿಭಾಗದ ದೀಕ್ಷಾ ಎಸ್., ವೃತ್ತಿ ಜೈನ್, ವಿಜ್ಞಾನ ವಿಭಾಗದ ಅನನ್ಯಾ ಎಸ್.ವಿ., ವಾಣಿಜ್ಯ ವಿಭಾಗದ ಪೂರ್ಣಿಮಾ ವಿ ಪ್ರಭು, ಶರಣ ವಿ‌ ಶೆಟ್ಟಿ, ಗ್ರೀಷ್ಮಾ ಎಸ್.ಆರ್., ದಿಶಾ ಎನ್.ಅನ್ವೇಕರ್ ಹಾಗೂ ದಿವ್ಯಶ್ರೀ ಬಿ.ಎಸ್. ಅವರಿಗೆ ಡಿವಿಎಸ್ ಸಂಸ್ಥೆ ವತಿಯಿಂದ ‌ನಗದು ಬಹುಮಾನ ಹಾಗೂ ಪುರಸ್ಕಾರ ನೀಡಿ ಗೌರವಿಸಲಾಯಿತು.

SN Channabasappa ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೃಷ್ಣಪ್ಪ, ದೇಶಿಯ ವಿದ್ಯಾಶಾಲಾ ಸಮಿತಿ ಸಹ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ನಿರ್ದೇಶಕ ಆರ್.ನಿತಿನ್, ಶಿಕ್ಷಕ ಪ್ರತಿನಿಧಿ ಡಾ. ಎಂ.ವೆಂಕಟೇಶ್, ಎಚ್.ಸಿ.ಉಮೇಶ್, ಡಿವಿಎಸ್ ಪದವಿ ಪೂರ್ವ ( ಸ್ವತಂತ್ರ ) ಕಾಲೇಜಿನ ಪ್ರಾಚಾರ್ಯ ಎ.ಇ.ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...