Ganesh Chaturthi ಚಿಕ್ಕಮಗಳೂರು, ಹಿರೇಮಗಳೂರು ಸಮೀಪ ದಲಿತರು ಉಪಯೋಗಿಸುವ ಕಲ್ಯಾಣಿಗೆ ನಗರ ಪ್ರದೇಶದ ಗಣಪತಿಗಳನ್ನು ವಿಸರ್ಜನೆ ಮಾಡಲು ತಯಾರಿ ನಡೆಸಿದೆ. ಇದನ್ನು ಕೂಡಲೇ ಕೈಬಿಟ್ಟು ಬೇರೆಡೆ ಜಾಗ ಗುರುತಿಸಬೇಕು ಎಂದು ಗ್ರಾಮಸ್ಥರು ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಒತ್ತಾಯಿಸಿದರು.
ಈ ಸಂಬoಧ ಹಿರೇಮಗಳೂರು ಗ್ರಾಮದ ಹಿರಿಯ ಮುಖಂಡ ಜಾನಯ್ಯ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಮನವಿ ಸಲ್ಲಿಸಿ ಮಾತನಾಡಿದ ಅವರು ಕಳೆದ ಮರ‍್ನಾಲ್ಕು ತಲೆಮಾರಿಗಳಿಂದಲೂ ಇದೇ ಕಲ್ಯಾಣಿ ನೀರು ಸೇವಿಸುವ ಮೂಲಕ ದಲಿತ ಸಮುದಾಯವು ಜೀವನ ನಡೆಸಿಕೊಂಡು ಬರಲಾಗಿದೆ ಎಂದರು.
ಇದೀಗ ನಗರಸಭಾ ಆಡಳಿತವು ದಲಿತರ ಕಲ್ಯಾಣಿ ಮೇಲೆ ಕಣ್ಣುಬಿದ್ದಿದಂತಿದೆ. ನಗರದ ಬಹುತೇಕ ಗಣಪತಿ ಗಳನ್ನು ವಿಸರ್ಜನೆಗೊಳಿಸಲು ಬೇರೆ ಸ್ಥಳಾವಕಾಶ ಮಾಡುವ ಬದಲು ದಿನನಿತ್ಯ ಕುಡಿಯವ ನೀರು ಉಪಯೋ ಗಿಸುವ ಕಲ್ಯಾಣಿಗೆ ವಿಸರ್ಜಸಲು ತಯಾರಿ ನಡೆಸಿರುವುದು ಸೂಕ್ತ ನಿರ್ಧಾರವಲ್ಲ ಎಂದರು.
ಹಿರೇಮಗಳೂರು ಗ್ರಾಮದಲ್ಲಿ ಈಗಾಗಲೇ ೪೦೦ಕ್ಕೂ ಹೆಚ್ಚು ದಲಿತ ಸಮುದಾಯಗಳಿವೆ. ಬಹುತೇಕ ಜನರು ಇದೇ ಕಲ್ಯಾಣಿಯಿಂದ ಕುಡಿಯುವ ನೀರು ಸೇವಿಸುತ್ತಿದ್ದಾರೆ. ಆದರೆ ನಗರಸಭಾ ಆಡಳಿತವು ಗಣಪತಿ ವಿಸರ್ಜನೆಗೆ ಕಲ್ಯಾಣಿಯತ್ತ ದಾರಿ ಮಾಡಲು ಹೊರಟಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ನಗರಸಭೆಯ ಕುಡಿಯುವ ಯಗಚಿ ನೀರಿನ ಮೋಟಾರ್ ಸುಟ್ಟುಹೋದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕುಡಿ ಯುವ ನೀರನ್ನು ಇದೇ ಕಲ್ಯಾಣಿಯಿಂದ ಬಳಸಲಾಗುತ್ತಿದೆ. ಇತ್ತೀಚೆಗೆ ಮೋಟಾರ್ ದುರಸ್ಥಿಪಡಿಸಿ ಸಮರ್ಪಕ ನೀರು ಒದಗಿಸಿದ್ದರೂ ಗಣೇಶನ ವಿಗ್ರಹ ವಿಸರ್ಜಿಸುವ ಈ ಕಲ್ಯಾಣಿ ಬಳಸಿದರೆ ಮಲೀನಗೊಳ್ಳಲಿದೆ ಎಂದರು.
ಆದ್ದರಿoದ ನಗರಸಭಾ ಆಡಳಿತ ಮಂಡಳಿಯು ಕುಡಿಯುವ ನೀರಿಗೆಂದು ಉಪಯೋಗಿಸುವ ಕಲ್ಯಾಣಿಗೆ ಗಣಪತಿ ವಿಸರ್ಜಿಸುವ ಬದಲು ಬೇರೆಡೆ ಜಾಗ ಗುರುತಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದರು.
Ganesh Chaturthi ಈ ಸಂದರ್ಭದಲ್ಲಿ ಹಿರೇಮಗಳೂರು ಗ್ರಾಮಸ್ಥರಾದ ಕೇಶವಮೂರ್ತಿ, ವೆಂಕಟೇಶ್, ಗಂಗಾಧರ್, ರವಿಕು ಮಾರ್, ಜಯಣ್ಣ, ನಂದನ್, ನಟರಾಜ್ ಹಾಜರಿದ್ದರು.