Saturday, December 6, 2025
Saturday, December 6, 2025

Dr. Selvamani  ಪ್ರಗತಿಯ ಬಗ್ಗೆ ಸದಾ ಸಂತಸ ವ್ಯಕ್ತಪಡಿಸುವವರೆಂದರೆ ಶಿಕ್ಷಕರು ಮತ್ತು ಪೋಷಕರು- ಡಾ.ಸೆಲ್ವಮಣಿ

Date:

Dr. Selvamani  ಶಿವಮೊಗ್ಗ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಆವರಣದಲ್ಲಿ ಇಂದು ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಆರ್‍ಆರ್‍ಯು ಶಿವಮೊಗ್ಗ ಕ್ಯಾಂಪಸ್‍ನ ನಿರ್ದೇಶಕ ಡಾ.ಆನಂದಕುಮಾರ್ ತ್ರಿಪಾಠಿ ಅವರು ಸರ್ವರನ್ನು ಸ್ವಾಗತಿಸಿ ಮಾತನಾಡಿ, ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾನಿಲಯವು ಸಾಂಪ್ರದಾಯಿಕ ರೀತಿಯಲ್ಲಿ 04-09-2023 ಶೈಕ್ಷಣಿಕ ಕಾರ್ಯವನ್ನು ಔಪಚಾರಿಕವಾಗಿ ಪ್ರಾರಂಭಿಸಿದೆ.

ಈ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಭದ್ರತೆ, ಡಿಜಿಟಲ್ ತನಿಖೆ ಮತ್ತು ಪೊಲೀಸ್ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣವನ್ನು ಒದಗಿಸುತ್ತದೆ. ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಮತ್ತು ಪ್ರಮಾಣಪತ್ರ ಮಟ್ಟದ ಶಿಕ್ಷಣವನ್ನು ನೀಡಲಾಗುವುದು.

ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಬಿಮಲ್ ಎನ್ ಪಟೇಲ್ ಅವರು ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಮ್ಮೇಳನದ ಮೂಲಕ ವಿಶ್ವವಿದ್ಯಾಲಯದ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು.

ಇಲ್ಲಿಂದ ಶಿಕ್ಷಣ ಪಡೆದ ನಂತರ ವಿದ್ಯಾರ್ಥಿಗಳು ಪೊಲೀಸ್, ಭದ್ರತಾ ಸೇವೆ ಮತ್ತು ವೈಯಕ್ತಿಕ ಭದ್ರತೆ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶಗಳನ್ನು ಹೊಂದಲಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ನಿಮ್ಮ ಪ್ರಗತಿಗೆ ಸದಾ ಸಂತಸ ವ್ಯಕ್ತಪಡಿಸುವ ಜಗತ್ತಿನ ಇಬ್ಬರು ವ್ಯಕ್ತಿಗಳೆಂದರೆ ಶಿಕ್ಷಕರು ಮತ್ತು ಪೋಷಕರು. ಆದ್ದರಿಂದ, ಶಿಕ್ಷಕರ ಸಮರ್ಪಣೆ ಮತ್ತು ಶೈಕ್ಷಣಿಕ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ಪೆÇಲೀಸ್ ಅಧೀಕ್ಷಕ ಮಿಥುನ್‍ಕುಮಾರ್ ಮಾತನಾಡಿ, ನೀವು ಈ ವಿಶ್ವವಿದ್ಯಾನಿಲಯದ ಮೊದಲ ಅಧಿವೇಶನದ ವಿದ್ಯಾರ್ಥಿಗಳು, ಇದು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ವಿಶ್ವವಿದ್ಯಾನಿಲಯಕ್ಕೆ ವಿಶೇಷವಾಗಿದೆ. ಇದು ನಿಮಗೆ ಎಂದೆಂದಿಗೂ ವಿಶೇಷವಾಗಿ ಉಳಿಯುತ್ತದೆ.

Dr. Selvamani  ಉತ್ತಮ ಜ್ಞಾನವು ಜೀವನವನ್ನು ಮುಂದಕ್ಕೆ ಕೊಂಡೊಯ್ಯಲು ಸಹಾಯಕವಾಗಿದೆ ಎಂದು ಅವರು ಹೇಳಿದರು. ಮತ್ತು ಮುಂದಿನ ದಿನಗಳಲ್ಲಿ ಈ ವಿಶ್ವವಿದ್ಯಾಲಯವು ದೇಶ ಮಾತ್ರವಲ್ಲದೆ ವಿಶ್ವ ಮಟ್ಟದಲ್ಲಿ ಹೆಸರು ಮಾಡುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆವರಣದಲ್ಲಿ ಸಸಿಗಳನ್ನು ನೆಟ್ಟರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...