Sri Uttaradi Math ಶ್ರೀಮನ್ ಮಹಾಭಾರತ ಅತ್ಯಂತ ಶ್ರೇಷ್ಠವಾದ ಧರ್ಮಗ್ರಂಥ, ತತ್ವಶಾಸ್ತ್ರ ಮೋಕ್ಷಶಾಸ್ತ್ರ. ಮಹಾಭಾರತವೂ ದೇವರ ಕಥೆಯೇ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಸೋಮವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಮಹಾಭಾರತ ತಾತ್ಪರ್ಯ ನಿರ್ಣಯದ ಸ್ವರ್ಗಾರೋಹಣ ಪರ್ವದ ಕುರಿತಾಗಿ ಅನುಗ್ರಹ ಸಂದೇಶ ನೀಡಿದರು.
ಧರ್ಮ, ಅರ್ಥ, ಮೋಕ್ಷ, ಕಾಮಗಳ ವಿಷಯದಲ್ಲಿ ಮಹಾಭಾರತದಲ್ಲಿ ಹೇಳದ ವಿಷಯಗಳೇ ಇಲ್ಲ. ಎಲ್ಲ ಪುರಾಣಗಳಿಗಿಂತಲೂ, ವೇದಗಳಿಗಿಂತಲೂ ಉತ್ತಮವಾದದ್ದು ಮಹಾಭಾರತ. ಭಗವಂತನಿಗೆ ಅತ್ಯಂತ ಪ್ರೀತಿಕರವಾದ ಗ್ರಂಥ. ಪರಮಾತ್ಮನಲ್ಲಿ ಭಕ್ತಿ, ವಿಷಯಗಳಲ್ಲಿ ವೈರಾಗ್ಯ ತಿಳಿಸುವ ಶ್ರೇಷ್ಠವಾದ ಗ್ರಂಥ ಮಹಾಭಾರತ ಎಂದರು.
Sri Uttaradi Math ರಾಜರು ಬರೀ ಹೊಟ್ಟೆಗೆ, ಬಟ್ಟೆಗೆ ಕೊಟ್ಟರೆ ಸಾಲದು. ಜನರಲ್ಲಿ ಧರ್ಮ ಬುದ್ಧಿಯ ಶಿಕ್ಷಣವನ್ನು ಪ್ರಜೆಗಳಲ್ಲಿ ಮೂಡಿಸಬೇಕು. ಆಗ ಪ್ರಜೆಗಳು ಅನ್ಯಾಯ, ಮೋಸ, ವಂಚನೆ ಮಾಡೋದಿಲ್ಲ. ಅವರಲ್ಲಿ ನೈತಿಕತೆ ಜಾಗೃತಿಯಾಗುತ್ತದೆ, ವಿವೇಕಿಗಳಾಗುತ್ತಾರೆ. ಆಗ ರಾಜ್ಯ ಸುಭಿಕ್ಷವಾಗಿರುತ್ತದೆ ಎಂದರು.